ಸಿಡ್ನಿಯಿಂದ ನ್ಯೂಯಾರ್ಕ್ ತನಕ ಡಾಯ್ಚ ಬ್ಯಾಂಕ್ ನಿಂದ 18 ಸಾವಿರ ಉದ್ಯೋಗ ಕಡಿತ

ಜರ್ಮನಿಯ ದೊಡ್ಡ ಬ್ಯಾಂಕ್ ಆದ ಡಾಯ್ಚ ಬ್ಯಾಂಕ್ ಸಿಡ್ನಿಯಿಂದ ನ್ಯೂಯಾರ್ಕ್ ತನಕ ಹದಿನೆಂಟು ಸಾವಿರ ಉದ್ಯೋಗ ಕಡಿತ ಮಾಡಲು ಮುಂದಾಗಿದೆ. ವಿಶ್ವಾದ್ಯಂತ ಇರುವ ದಾಯಿಷ್ ಬ್ಯಾಂಕ್ ಶಾಖೆಗಳಲ್ಲಿ ತೊಂಬತ್ತೆರಡು ಸಾವಿರ ಸಿಬ್ಬಂದಿ ಇದ್ದಾರೆ. ಆ ಪೈಕಿ ಅಮೆರಿಕದ ವಾಲ್ ಸ್ಟ್ರೀಟ್ ನಲ್ಲಿ ಮೂವತ್ತೆಂಟೂವರೆ ಸಾವಿರ ಸಿಬ್ಬಂದಿ ಇದ್ದಾರೆ.

ಡಾಯ್ಚ ಬ್ಯಾಂಕ್ ನಿಂದ ಭಾನುವಾರ ಈ ವಿಚಾರ ತಿಳಿಸಿದ್ದು, ಗ್ಲೋಬಲ್ ಈಕ್ವಿಟೀಸ್ ಯೂನಿಟ್ ಮುಚ್ಚಲು ನಿರ್ಧಾರ ಮಾಡಲಾಗಿದೆ. ಇದರ ಜತೆಗೆ ಕೆಲವು ಸ್ಥಿರ ಆದಾಯ ಕಾರ್ಯ ಚಟುವಟಿಕೆಗಳನ್ನು ಸಹ ನಿಲ್ಲಿಸಲಿದೆ. ಅಮೆರಿಕದಲ್ಲಿ ಲಿಸ್ಟ್ ಆಗಿರುವ ಬ್ಯಾಂಕ್ ನ ಷೇರುಗಳು ಹಾಗೂ ಬಾಂಡ್ ಗಳು ಸಹ ಅನಿಶ್ಚಿತತೆಯ ಕಾರಣಕ್ಕೆ ಕುಸಿತ ಕಂಡಿವೆ.

ಡಾಯ್ಚ ಬ್ಯಾಂಕ್ ಭವಿಷ್ಯದಲ್ಲಿ ಉತ್ತಮ ಪ್ರಗತಿ ದಾಖಲಿಸುತ್ತದೆ ಎಂದು ಕೆಲವು ವಿಶ್ಲೇಷಕರು ಅಭಿಪ್ರಾಯ ಪಟ್ಟರೆ, ಆ ಅವಕಾಶ ಎಲ್ಲಿದೆ ಎಂಬುದಕ್ಕೆ ಉತ್ತರ ದೊರೆಯುತ್ತಿಲ್ಲ ಎಂದು ಕೆಲವು ವಿಶ್ಲೇಷಕರು ಹೇಳಿದ್ದಾರೆ. ಬ್ಯಾಂಕ್ ನ ಭವಿಷ್ಯದ ಕ್ರೆಡಿಟ್ ರೇಟಿಂಗ್ ಬಗ್ಗೆ ಮಾತನಾಡಿರುವ ರೇಟಿಂಗ್ ಏಜೆನ್ಸಿ ಫಿಚ್, ಭವಿಷ್ಯದ ಯೋಜನೆಗಳನ್ನು ಡಾಯ್ಚ ಬ್ಯಾಂಕ್ ಹೇಗೆ ಅನುಷ್ಠಾನಕ್ಕೆ ತರುತ್ತದೆ ಎಂಬುದರ ಮೇಲೆ ರೇಟಿಂಗ್ ಅವಲಂಬಿತ ಆಗಲಿದೆ ಎಂದಿದ್ದಾರೆ.

18 thousand jobs laid off from Sydney to New York by Deutsche bank

ಬ್ಯಾಂಕ್ ಗೆ ಮತ್ತೆ ಹೊಸ ರೂಪ ನೀಡಲು ದೊಡ್ಡ ಸಂಖ್ಯೆಯಲ್ಲಿ ಸಿಬ್ಬಂದಿ ಕಡಿತ, ಪ್ರಮುಖ ನಾಯಕತ್ವ ಬದಲಾವಣೆ ಬಹಳ ಮುಖ್ಯ ಎಂದು ಹೇಳಲಾಗಿದೆ. ಯೋಜನೆಯನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರುವುದೇ ಸವಾಲು ಎಂದು ಮೂಡೀಸ್ ರೇಟಿಂಗ್ ಏಜೆನ್ಸಿ ತಿಳಿಸಿದೆ.

ಈ ವಿಚಾರ ತಿಳಿಸಲು ಅಮೆರಿಕದ ವಾಲ್ ಸ್ಟ್ರೀಟ್ ನಲ್ಲಿ ಇರುವ ಬ್ಯಾಂಕ್ ನ ಕೆಫಟೇರಿಯಾಗೆ ನೂರಾರು ಸಂಖ್ಯೆಯ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಅಮೆರಿಕದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಡಾಯ್ಚ ಬ್ಯಾಂಕ್, ತೀವ್ರ ಸ್ಪರ್ಧೆಯ ಭಾರ, ನಿಯಮಾವಳಿಗಳ ತನಿಖೆ ಹಾಗೂ ವ್ಯಾಜ್ಯದಲ್ಲಿ ಸಿಲುಕಿ ನಲುಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+