ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 100 ಆ್ಯಪಲ್ ಮಳಿಗೆಗಳನ್ನು ತೆರೆಯಲು ಮುಂದಾದ ಟಾಟಾ ಗ್ರೂಪ್

|
Google Oneindia Kannada News

ನವದೆಹಲಿ, ಡಿಸೆಂಬರ್‌, 13: ಟಾಟಾ ಗ್ರೂಪ್ ಭಾರತದಾದ್ಯಂತ ಆ್ಯಪಲ್ ಉತ್ಪನ್ನಗಳನ್ನು ಮಾರಾಟ ಮಾಡಲಿಕ್ಕಾಗಿಯೇ 100 ವಿಶೇಷ ಸಣ್ಣ ಸಣ್ಣ ಮಳಿಗೆಗಳನ್ನು ತೆರೆಯಲು ಮುಂದಾಗಿದೆ. ನೂತನವಾಗಿ ತೆರೆಯಲಾಗುವ ಮಳಿಗೆಗಳಲ್ಲಿ ಆ್ಯಪಲ್ ಕಂಪನಿಯ ಫೋನ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಕಂಪ್ಯೂಟರ್‌ ಸೇರಿದಂತೆ ತನ್ನದೇ ಬ್ರಾಂಡ್‌ನ ಇತರ ಉತ್ಪನ್ನಗಳನ್ನು ಮಾರಾಟ ಮಾಡಲಿದೆ ಎಂದು "ಎಕನಾಮಿಕ್ ಟೈಮ್ಸ್‌" ವರದಿ ಮಾಡಿದೆ.

ಗ್ರಾಹಕರಿಗೆ ಅಗತ್ಯವಾಗಿರುವ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಮಾರಾಟ ಮಾಡುವ ಕ್ರೋಮಾ ಮಳಿಗೆಗಳ ಚೈನ್‌ ಅನ್ನು ನಿರ್ವಹಿಸುತ್ತಿರುವ ಟಾಟಾ ಗ್ರೂಪ್‌ನ ಇನ್ಫಿನಿಟಿ ರಿಟೇಲ್ ಆ್ಯಪಲ್ ಅಧಿಕೃತವಾಗಿ ಶಾಪಿಂಗ್ ಮಾಲ್‌, ಹೈ-ಸ್ಟ್ರೀಟ್ ಮತ್ತು ವಿವಿಧ ಸ್ಥಳಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಲಿದೆ ಎಂದು ವರದಿ ತಿಳಿಸಿದೆ. ಟಾಟಾ ಗ್ರೂಪ್‌ ಆ್ಯಪಲ್ ಮಳಿಗೆಗಳ ಸ್ಥಾಪನೆ ಸಂಬಂಧ ಪ್ರೀಮಿಯಂ ಮಾಲ್‌ಗಳು ಮತ್ತು ಹೈ ಸ್ಟ್ರೀಟ್‌ಗಳೊಂದಿಗೆ ಮಾತುಕತೆಯನ್ನು ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ. ಗುತ್ತಿಗೆಯ ಆಧಾರದಲ್ಲಿ ಈ ಔಟ್‌ಲೆಟ್‌ಗಳ ಬಳಿ ಯಾವೆಲ್ಲಾ ಬ್ರ್ಯಾಂಡ್‌ಗಳು ಮತ್ತು ಸ್ಟೋರ್‌ಗಳನ್ನು ತೆರೆಯಬಾರದು ಎಂಬ ಷರತ್ತನ್ನು ಹಾಕಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಮೈಕ್ರೋಸಾಫ್ಟ್ ಪ್ರಾಜೆಕ್ಟ್ ಬಂದ್, 350 ಎಚ್‌ಸಿಎಲ್ ಟೆಕ್ಕಿಗಳಿಗೆ ಪಿಂಕ್ ಸ್ಲಿಪ್ಮೈಕ್ರೋಸಾಫ್ಟ್ ಪ್ರಾಜೆಕ್ಟ್ ಬಂದ್, 350 ಎಚ್‌ಸಿಎಲ್ ಟೆಕ್ಕಿಗಳಿಗೆ ಪಿಂಕ್ ಸ್ಲಿಪ್

100 small Apple stores open soon in India by Tata group

ದೇಶಾದ್ಯಂತ ತಲೆಎತ್ತಲಿವೆ ಆ್ಯಪಲ್ ಮಳಿಗೆಗಳು

ಟಾಟಾ ಗ್ರೂಪ್ ಶೀಘ್ರದಲ್ಲೇ ದೇಶಾದ್ಯಂತ 500-600 ಚದರ ಅಡಿಗಳ 100 ಸಣ್ಣ ವಿಶೇಷ ಆ್ಯಪಲ್ ಮಳಿಗೆಗಳನ್ನು ತೆರೆಯಲಿದೆ. ಆ್ಯಪಲ್ ಮಳಿಗೆಗಳನ್ನು ಮಾಲ್‌ಗಳು ಮತ್ತು ಹೈ-ಸ್ಟ್ರೀಟ್ ಮತ್ತು ನೆರೆಹೊರೆಯ ಸ್ಥಳಗಳಲ್ಲಿ ತೆರೆಯಲಾಗುತ್ತದೆ. ಮತ್ತು ಆ್ಯಪಲ್ ಪ್ರೀಮಿಯಂ ಮರುಮಾರಾಟಗಾರರ ಅಂಗಡಿಗಳಿಗಿಂತ ಈ ಮಳಿಗೆಗಳು ಚಿಕ್ಕದಾಗಿರುತ್ತವೆ. ವಿಶಿಷ್ಟವಾಗಿ, ಪ್ರೀಮಿಯಂ ಮರುಮಾರಾಟಗಾರರ ಅಂಗಡಿಗಳು 1,000 ಚದರ ಅಡಿಗಳಷ್ಟು ಇರುತ್ತವೆ. ಸಣ್ಣ ಅಂಗಡಿಗಳಲ್ಲಿ ಐ ಫೋನ್‌, ಐಪ್ಯಾಡ್‌ ಮತ್ತು ಕೈಗಡಿಯಾರಗಳನ್ನು ಮಾರಾಟ ಮಾಡಲಾಗುದೆ ಎನ್ನುವ ಮಾಹಿತಿ ತಿಳಿದುಬಂದಿದೆ.

100 small Apple stores open soon in India by Tata group

ಆ್ಯಪಲ್ ಕಂಪನಿಯ ಮೊದಲ ಮಳಿಗೆ ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಮುಂಬೈನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಸೈಬರ್ ಮೀಡಿಯಾ ರಿಸರ್ಚ್ ಪ್ರಕಾರ, ಭಾರತದಲ್ಲಿ ಐಫೋನ್‌ಗಳ ಮಾರಾಟ ಪ್ರಮಾಣವು ಜುಲೈ ಮತ್ತು ಸೆಪ್ಟೆಂಬರ್ ನಡುವೆ 1.7 ಮಿಲಿಯನ್‌ಗಿಂತಲೂ ಹೆಚ್ಚಾಗಿದೆ. ಅದಕ್ಕಾಗಿಯೇ ಆ್ಯಪಲ್ ಭಾರತದಲ್ಲಿ ತನ್ನ ಉತ್ಪನ್ನದ ಮಾರಾಟವನ್ನು ಹೆಚ್ಚಿಸಲು ಮತ್ತು ಅದರ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಯೋಜನೆ ರೂಪಿಸಿದೆ.

English summary
Tata Group plans to 100 exclusive small Apple stores open across India, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X