ಮುಚ್ಚುವ ಹಂತ ತಲುಪಿದ ಕರ್ನಾಟಕದ ಈ ವಿಮಾನ ನಿಲ್ದಾಣ
ಬೀದರ್, ಫೆಬ್ರವರಿ 01: ವಿಜಯಪುರ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಸಜ್ಜಾಗುತ್ತಿದೆ. ಹಾಸನದಲ್ಲಿ ವಿಮಾನ ನಿಲ್ದಾಣದ ಕುರಿತು ಚರ್ಚೆಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣ ಮಾಡಬೇಕು? ಎಂದು ಚರ್ಚೆಗಳು ಸಾಗಿದೆ. ಇಂತಹ ಹೊತ್ತಿನಲ್ಲಿಯೇ ಕರ್ನಾಟಕದ ವಿಮಾನ ನಿಲ್ದಾಣವೊಂದು ಬಾಗಿಲು ಮುಚ್ಚುವ ಹಂತಕ್ಕೆ ಬಂದಿದೆ. ಸದ್ಯ ಈ ವಿಮಾನ ನಿಲ್ದಾಣಕ್ಕೆ ಯಾವುದೇ ವಿಮಾನ ಆಗಮಿಸುತ್ತಿಲ್ಲ.
ಹೌದು, ಪ್ರಯಾಣಿಕರ ಕೊರತೆ, ವಿಮಾನಗಳ ಸಂಪರ್ಕವಿಲ್ಲ, ಆರ್ಥಿಕ ನಷ್ಟ ಮುಂತಾದ ಕಾರಣಕ್ಕೆ ಬೀದರ್ ವಿಮಾನ ನಿಲ್ದಾಣ ಮುಚ್ಚುವ ಹಂತಕ್ಕೆ ಬಂದಿದೆ. ಬೀದರ್‌ನಿಂದ ಬೆಂಗಳೂರು, ದೆಹಲಿ ಮುಂತಾದ ನಗರಗಳಿಗೆ ಹಾರಾಟ ನಡೆಸಬೇಕು ಎಂಬ ಜನರ ಕನಸು ನನಸಾಗುತ್ತಿಲ್ಲ.

2020ರ ಫೆಬ್ರವರಿ 7ರಂದು ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೀದರ್ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ್ದರು. 5 ವರ್ಷಗಳಲ್ಲಿ ಎರಡು ವಿಮಾನಯಾನ ಸಂಸ್ಥೆಗಳು ವಿಮಾನ ನಿಲ್ದಾಣಕ್ಕೆ ವಿಮಾನ ಸೇವೆ ಸ್ಥಗಿತಗೊಳಿಸಿವೆ. ಸದ್ಯ ಬೀದರ್‌ಗೆ ಯಾವುದೇ ವಿಮಾನವಿಲ್ಲ.
ವಿಮಾನ ಸೇವೆ ಸ್ಥಗಿತ: ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡ ಬಳಿಕ ಬೀದರ್-ಬೆಂಗಳೂರು ನಡುವೆ ಟ್ರೂ ಜೆಟ್ 72 ಸೀಟುಗಳ ವಿಮಾನ ಸೇವೆಯನ್ನು ಆರಂಭಿಸಿತ್ತು. ಆದರೆ ಕೆಲವೇ ತಿಂಗಳಿನಲ್ಲಿ ಪ್ರಯಾಣಿಕರ ಕೊರತೆಯ ಕಾರಣ ವಿಮಾನ ಸೇವೆ ರದ್ದುಗೊಳಿಸಿತು.
ಬಳಿಕ ಬೀದರ್‌ನ ಜನರು ಹೈದರಾಬಾದ್‌ಗೆ ತೆರಳಿ ಅಲ್ಲಿಂದ ವಿಮಾನವೇರಿ ಸಂಚಾರ ನಡೆಬೇಕಾಯಿತು. ಬಳಿಕ ಬೀದರ್‌ಗೆ ಮತ್ತೆ ವಿಮಾನ ಸೇವೆ ಆರಂಭಿಸಬೇಕು ಎಂಬ ಒತ್ತಾಯ ಕೇಳಿಬಂದಿತು. 2022ರ ಜೂನ್‌ನಲ್ಲಿ ಸ್ಟಾರ್ ಏರ್ ವಿಮಾನ ಸೇವೆಯನ್ನು ಆರಂಭಿಸಿತು.
ಆದರೆ ಒಂದು ವರ್ಷದ ಹಿಂದೆ ಆರ್ಥಿಕ ನಷ್ಟದ ನೆಪ ಹೇಳಿ ಈ ವಿಮಾನ ಸೇವೆ ಸಹ ರದ್ದುಗೊಳಿಸಲಾಗಿದೆ. ಆದ್ದರಿಂದ ಸುಸಜ್ಜಿತವಾದ ಏರ್‌ಪೋರ್ಟ್ ಇದ್ದರೂ ಸಹ ಬೀದರ್‌ಗೆ ವಿಮಾನ ಸೇವೆ ಇಲ್ಲ. ಬೀದರ್-ಬೆಂಗಳೂರು ನಡುವೆ ವಿಮಾನ ಸೇವೆ ಪುನಃ ಆರಂಭವಾಗಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಸದ್ಯ ಬೀದರ್‌ಗೆ ಯಾವುದೇ ವಿಮಾನ ಸೇವೆ ಇಲ್ಲದ ಕಾರಣ ಜನರು ಕಲಬುರಗಿ ಅಥವ ಹೈದರಾಬಾದ್ ಹೋಗಿ ಅಲ್ಲಿಂದ ವಿಮಾನ ಏರಿ ಬೇರೆ ನಗರಕ್ಕೆ ಸಂಚಾರವನ್ನು ನಡೆಸಬೇಕಿದೆ. ಕಲಬುರಗಿಯಿಂದ ದಿನಕ್ಕೆ 5-6 ವಿಮಾನಗಳು ಸಂಚಾರವನ್ನು ನಡೆಸುತ್ತವೆ. ಆದರೆ ಬೀದರ್‌ಗೆ ಒಂದು ವಿಮಾನ ಕೂಡಾ ಸಂಚಾರ ನಡೆಸುವುದಿಲ್ಲ.
ಜಿಲ್ಲಾಧಿಕಾರಿಗಳು ಮಾತನಾಡಿ, ವಿಮಾನ ನಿಲ್ದಾಣ ಉದ್ಘಾಟನೆಗೊಂಡು 5 ವರ್ಷಗಳು ಕಳೆದಿವೆ. ಎರಡು ಕಂಪನಿಗಳು ವಿಮಾನ ಸೇವೆ ರದ್ದುಗೊಳಿಸಿವೆ. ವಿಮಾನ ನಿಲ್ದಾಣ ಮುಚ್ಚಿಲ್ಲ. ಹೊಸ ವಿಮಾನ ಸೇವೆ ಆರಂಭಕ್ಕೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಬೀದರ್ ವಿಮಾನ ನಿಲ್ದಾಣದ ಭದ್ರತೆಗಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿ, ಸಿಬ್ಬಂದಿ ಸೇರಿ 45 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಆದರೆ ವಿಮಾನ ನಿಲ್ದಾಣಕ್ಕೆ ಒಂದು ವಿಮಾನ ಸಹ ಬರುವುದಿಲ್ಲ. 2023ರ ಡಿಸೆಂಬರ್ 26ರ ಬಳಿಕ ಯಾವುದೇ ವಿಮಾನ ಸೇವೆ ಬೀದರ್‌ಗೆ ಇಲ್ಲ. ಈಗ 40 ಸಿಬ್ಬಂದಿಗಳನ್ನು ಲೋಕಾರ್ಪಣೆಗೆ ಸಜ್ಜಾಗುತ್ತಿರುವ ವಿಜಯಪುರ ನಿಲ್ದಾಣಕ್ಕೆ ನಿಯೋಜನೆ ಮಾಡಲು ಸರ್ಕಾರ ಮುಂದಾಗಿದೆ.
ಬೀದರ್ ಸಂಸದ ಸಾಗರ್ ಖಂಡ್ರೆ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಕೆ. ರಾಮಮೋಹನ್ ನಾಯ್ಡು ಭೇಟಿಯಾಗಿ ಬೀದರ್‌ಗೆ ಹೊಸದಾಗಿ ವಿಮಾನ ಸೇವೆ ಆರಂಭಿಸಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಇನ್ನೂ ಯಾವುದೇ ಕಂಪನಿಗಳು ಬೀದರ್‌ಗೆ ವಾಯುಯಾನ ಸಂಪರ್ಕ ಕಲ್ಪಿಸಲು ಆಸಕ್ತಿ ತೋರಿಲ್ಲ.
-
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ?












Click it and Unblock the Notifications