ಬೀದರ್; ಮೋದಿಗೆ ಅವಮಾನ; ಶಿಕ್ಷಣ ಸಂಸ್ಥೆ ಮೇಲೆ ಕೇಸು

Recommended Video

      ಶಾಲಾ ಮಕ್ಕಳಿಂದ ಮೋದಿಗೆ ಅವಮಾನ ಮಾಡಿಸಿದ ಶಿಕ್ಷಣ ಸಂಸ್ಥೆ..! | Oneindia Kannada

      ಬೀದರ್, ಜನವರಿ 26 : ಪ್ರಧಾನಿ ನರೇಂದ್ರ ಮೋದಿ ಅವಮಾನಿಸಿದ ಕಾರಣಕ್ಕೆ ಬೀದರ್‌ನ ಶಿಕ್ಷಣ ಸಂಸ್ಥೆ ಮೇಲೆ ಕೇಸು ದಾಖಲು ಮಾಡಲಾಗಿದೆ. ನಾಟಕವೊಂದರ ಸಂಭಾಷಣೆಯಲ್ಲಿ ಮೋದಿಯನ್ನು ಅವಮಾನಿಸಲಾಗಿತ್ತು. ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

      ಬೀದರ್ನ ಶಾಹೀನ್ ಶಿಕ್ಷಣ ಸಂಸ್ಥೆ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ನೀಲೇಶ್ ಎಂಬುವವರು ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಅಬ್ದುಲ್ ಖದೀರ್ ಸೇರಿದಂತೆ ಮೂವರ ವಿರುದ್ಧ ದೂರು ನೀಡಿದ್ದರು.

      ಶಾಲೆಯ ವಿಧ್ಯಾರ್ಥಿಗಳು ನಾಟಕದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಜಾರಿಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಪ್ರದರ್ಶನ ನೀಡಿದ್ದರು. ಈ ವೇಳೆ 'ಚಹಾ ಮಾರುತ್ತಿದ್ದ ವ್ಯಕ್ತಿ ಈಗ ನಿಮ್ಮ ಬಳಿ ದಾಖಲೆ ಕೇಳುತ್ತಾನೆ' ಎಂದು ನಿಂದಿಸಲಾಗಿತ್ತು.

      Insert To PM Narendra Modi Case Against Education Institute

      ನಾಟಕದಲ್ಲಿ ವಿದ್ಯಾರ್ಥಿಗಳು ಸಂಭಾಷಣೆ ಹೇಳಿದಾಗ ಜನರು, ಶಿಕ್ಷಕರು ಚಪ್ಪಾಳೆ ತಟ್ಟಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಾಟಕದ ವಿಡಿಯೋ ತುಣುಕು ವೈರಲ್ ಆಗಿತ್ತು. ಈ ಕುರಿತು ಪೊಲೀಸ್ ಠಾಣೆಗೂ ದೇಶದ್ರೋಹ ಕಾಯ್ದೆಯಡಿ ದೂರು ನೀಡಲಾಗಿತ್ತು.

      ಬೀದರ್ ಜಿಲ್ಲಾ ಉಸ್ತುವಾರಿ ಸಚಿವ, ಬಿಜೆಪಿ ನಾಯಕ ಪ್ರಭು ಚೌವ್ಹಾಣ್ ಸಹ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ, ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+