• search
  • Live TV
ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿಸೆಂಬರ್ 28ರಿಂದ ಮೂರು ದಿನ ಬೀದರ್ ಉತ್ಸವ

|

ಬೀದರ್, ನವೆಂಬರ್ 05 : ಡಿಸೆಂಬರ್‌ನಲ್ಲಿ ಮೂರು ದಿನಗಳ ಕಾಲ ಬೀದರ್ ಉತ್ಸವವನ್ನು ಆಚರಣೆ ಮಾಡಲು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಡಿ.28ರಿಂದ ಮೂರು ದಿನಗಳ ಕಾಲ 2018ನೇ ಸಾಲಿನ ಬೀದರ್ ಉತ್ಸವ ನಡೆಯಲಿದೆ.

ದೀಪಾವಳಿ ವಿಶೇಷ ಪುರವಣಿ

ಬೀದರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಅವರ ಅಧ್ಯಕ್ಷತೆಯಲ್ಲಿ ಬೀದರ್ ಉತ್ಸವ -2018ರ ಪೂರ್ವಭಾವಿ ಸಭೆಯಲ್ಲಿ ಬೀದರ್ ಉತ್ಸವ ಆಚರಣೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲು ಸಭೆಯಲ್ಲಿ ಚರ್ಚೆ ನಡೆಯಿತು.

ಹರಕೆ ತೀರಿಸಲು 180 ಕಿ.ಮೀ. ಸೈಕಲ್ ತುಳಿಯಲಿದ್ದಾರೆ ಬಂಡೆಪ್ಪ ಕಾಶೆಂಪುರ!

'ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಉತ್ಸವ ನಡೆಸಬಾರದು ಎಂಬುದು ಕೆಲವರ ಅಭಿಪ್ರಾಯ. ಉತ್ಸವ ನಡೆಸುವ ಕುರಿತು ಎಲ್ಲರೂ ಅಭಿಪ್ರಾಯ ತಿಳಿಸಿ' ಎಂದಾಗ ಎಲ್ಲರೂ ಕೈ ಎತ್ತಿ ಉತ್ಸವ ನಡೆಸಬಹುದು ಎಂದು ಒಮ್ಮತದ ಅಭಿಪ್ರಾಯ ತಿಳಿಸಿದರು.

'ಯಾವ ರೀತಿಯಿಂದಲೂ ಅಪಸ್ವರ ಕೇಳಿಬರದಂತೆ ಉತ್ಸವ ನಡೆಸಬೇಕು. ಇಲ್ಲಿನ ಪ್ರವಾಸೋದ್ಯಮಕ್ಕೆ ಮತ್ತು ಸ್ಥಳೀಯ ಕಲಾವಿದರ ಪ್ರೋತ್ಸಾಹಕ್ಕೆ ಅನುಕೂಲವಾಗುವಂತೆ ಉತ್ಸವ ನಡೆಸಬೇಕು' ಎಂದು ಸಚಿವ ಬಂಡೆಪ್ಪ ಕಾಶೆಂಪುರ ಅವರು ಹೇಳಿದರು.

ಬೀದಿಬದಿ ವ್ಯಾಪಾರಿಗಳಿಗೆ ಶುಭ ಸುದ್ದಿ ಕೊಟ್ಟ ಸಚಿವ ಬಂಡೆಪ್ಪ ಕಾಶಂಪುರ್

'ಡಿಸೆಂಬರ್ 28, 29 ಮತ್ತು 30ರಂದು ಬೀದರ್ ಉತ್ಸವ ನಡೆಸಲಾಗುತ್ತದೆ. ಉತ್ಸವ ನಡೆಸಲು ಅವಕಾಶ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸಚಿವ ರಾಜಶೇಖರ ಪಾಟೀಲ್ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಒಮ್ಮತದಂತೆ ಉತ್ಸವ ನಡೆಸಲಾಗುತ್ತಿದೆ' ಎಂದು ಸಚಿವರು ವಿವರಣೆ ನೀಡಿದರು.

English summary
The three-day Bidar Utsav 2018 will be held from December 28 to 30, 2018. Utsav will focus on development of tourism in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X