Bidar: ಭಗವಂತ್ ಖೂಬಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸಾಗರ್ ಖಂಡ್ರೆ
ಬೀದರ್ ಲೋಕಸಭಾ ಕ್ಷೇತ್ರದ ಮತೆಣಿಕೆ ಮುಕ್ತಾಯವಾಗಿದ್ದು ಮೊದಲ ಬಾರಿ ಸ್ಪರ್ಧೆಮಾಡಿದ್ದ ಕಾಂಗ್ರೆಸ್‌ನ ಯುವ ಸ್ಪರ್ಧಿ ಸಾಗರ್ ಖಂಡ್ರೆ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಬೀದರ್ ಹಲವು ಕಾರಣಗಳಿಂದ ಈ ಬಾರಿ ಗಮನ ಸೆಳೆದಿತ್ತು. ಎರಡು ಬಾರಿ ಗೆಲುವು ಸಾಧಿಸಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರೆ, ಕಾಂಗ್ರೆಸ್‌ನಿಂದ ಸಚಿವ ಈಶ್ವರ್ ಖಂಡ್ರೆ ಪುತ್ರ 26 ವರ್ಷದ ಸಾಗರ್ ಖಂಡ್ರೆ ಸ್ಪರ್ಧೆ ಮಾಡಿದ್ದರು.

ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಸಾಗರ್ ಖಂಡ್ರೆ ಅಂತಿಮವಾಗಿ 1,28,875 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಸಾಗರ್ ಖಂಡ್ರೆ 6,66,317 ಮತಗಳನ್ನು ಪಡೆದರೆ ಭಗವಂತ ಖೂಬಾ 5,37,442 ಮತಗಳನ್ನು ಪಡೆದರು.
26 ವರ್ಷದ ಸಾಗರ್ ಖಂಡ್ರೆ ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸಲು ಸಜ್ಜಾಗಿದ್ದಾರೆ. ರಾಜ್ಯದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನದಲ್ಲಿದ್ದ ಕಾಂಗ್ರೆಸ್ ಈ ಬಾರಿ 9 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಸೋಲು ಕಾಂಗ್ರೆಸ್‌ಗೆ ಆಘಾತ ತಂದರೆ, ಬಿಜೆಪಿ ಕಳೆದ ಬಾರಿಗಿಂತ 8 ಸ್ಥಾನಗಳನ್ನು ಕಳೆದುಕೊಂಡಿದೆ.












Click it and Unblock the Notifications