ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ ಒಂದು ತಿಂಗಳ ಲಾಕ್‌ಡೌನ್‌ಗೆ ಮನವಿ ಮಾಡಿದ ಒಡಿಶಾ

|
Google Oneindia Kannada News

ಭುವನೇಶ್ವರ, ಏಪ್ರಿಲ್ 27: ಮೇ 3ರ ಬಳಿಕ ದೇಶದಲ್ಲಿ ಲಾಕ್‌ಡೌನ್‌ ಮುಂದುವರಿಸಬೇಕಾ ಎಂಬ ವಿಷಯಕ್ಕೆ ಕುರಿತಂತೆ ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚೆ ನಡೆಸಿದರು.

ದೇಶದಲ್ಲಿ ಕೊರೊನಾ ವೈರಸ್‌ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ, ಬಹುತೇಕ ರಾಜ್ಯಗಳು ಲಾಕ್‌ಡೌನ್ ವಿಸ್ತರಿಸುವುದು ಸೂಕ್ತ ಎಂದು ಅಭಿಪ್ರಾಯ ಮಂಡಿಸಿದ್ದಾರೆ. ಕೇಂದ್ರ ಸರ್ಕಾರವೂ ಲಾಕ್‌ಡೌನ್‌ ಮುಂದುವರಿಸುವ ಕುರಿತು ಚಿಂತಿಸಿದೆ ಎಂದು ಹೇಳಲಾಗಿದೆ.

9 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ಸಂವಾದದ ಹೈಲೇಟ್ಸ್ 9 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ಸಂವಾದದ ಹೈಲೇಟ್ಸ್

ಒಂದು ವೇಳೆ ಲಾಕ್‌ಡೌನ್‌ ಮುಂದುವರಿದರೆ ಎಷ್ಟು ದಿನ ಎಂಬುದರ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ. ಸದ್ಯದ ಮಾಹಿತಿ ಪ್ರಕಾರ, ಮೇ 16ರ ತನಕ ಮೂರನೇ ಹಂತದ ಲಾಕ್‌ಡೌನ್‌ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಇದೆ.

Odisha Wants Lockdown Extended By One More Month

ಈ ನಡುವೆ ಒಡಿಶಾದ ಆರೋಗ್ಯ ಸಚಿವ ನಬಾ ದಾಸ್ 'ರಾಜ್ಯದಲ್ಲಿ ಇನ್ನೂ ಒಂದು ತಿಂಗಳು ಲಾಕ್‌ಡೌನ್‌ ಮುಂದುವರಿಸಲಿ' ಎಂದು ಆಗ್ರಹಿಸಿದ್ದಾರೆ. ಮೋದಿ ಜೊತೆ ಮುಖ್ಯಮಂತ್ರಿಗಳ ವಿಡಿಯೋ ಕಾನ್ಫೆರೆನ್ಸ್ ಬಳಿಕ ಮಾತನಾಡಿದ ನಬಾ ದಾಸ್ ''ಲಾಕ್‌ಡೌನ್‌ ಮುಂದುವರಿಸಬೇಕು, ಇಲ್ಲವಾದಲ್ಲಿ ಪರಿಸ್ಥಿತಿ ನಿಭಾಯಿಸಲು ಸಾಧ್ಯವಿಲ್ಲ. ಇನ್ನೂ ಒಂದು ತಿಂಗಳು ಲಾಕ್‌ಡೌನ್ ಮುಂದುವರಿಯಲಿ, ಏನಾಗುತ್ತೆ ಎಂದು ನೋಡೋಣ'' ಎಂದಿದ್ದಾರೆ.

ಲಾಕ್‌ಡೌನ್‌ನಿಂದಾಗಿ ರಾಜ್ಯಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಲಾಕ್‌ಡೌನ್‌ ಮುಂದುವರಿಸುವುದು ಅನಿವಾರ್ಯವೆನಿಸಿದರೂ, ಆರ್ಥಿಕವಾಗಿ ಸಹಾಯ ಬೇಕಿದೆ ಎಂದು ಕೇಂದ್ರದ ಮುಂದೆ ಮನವಿ ಮಾಡಿದ್ದಾರೆ.

ಇನ್ನು ಲಾಕ್‌ಡೌನ್‌ನಲ್ಲಿ ಗ್ರೀನ್ ಝೋನ್‌ಗಳಿಗೆ ವಿನಾಯಿತಿ ನೀಡುವುದು ಉತ್ತಮ. ರೆಡ್‌ಝೋನ್ ಮತ್ತು ಹಾಟ್‌ಸ್ಪಾಟ್‌ ನಗರಗಳಲ್ಲಿ ಲಾಕ್‌ಡೌನ್‌ ಯಥಾಸ್ಥಿತಿ ಮುಂದುವರಿಯಲಿ ಎಂಬ ಅಭಿಪ್ರಾಯ ಸಿಎಂಗಳ ಜೊತೆಗಿನ ಚರ್ಚೆಯಲ್ಲಿ ಪ್ರಸ್ತಾಪವಾಗಿದೆ.

English summary
I've demanded that lockdown should continue otherwise we can't face these things in Odisha. Let it be one month more, then, we will see what is going on: Odisha Health Minister Naba Das.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X