ಒಡಿಶಾದಲ್ಲಿ ಕ್ವಾರೆಂಟೈನ್ ಅವಧಿ ವಿಸ್ತರಣೆ: ವಿದೇಶದಿಂದ ಬಂದವರಿಗೆ ಈ ನಿಯಮ ಕಡ್ಡಾಯ
ಭುವನೇಶ್ವರ, ಮೇ 8: ಕೊರೊನಾ ವೈರಸ್ ಶಂಕಿತ ವ್ಯಕ್ತಿಗೆ ಸಾಮಾನ್ಯವಾಗಿ 14 ದಿನಗಳವರೆಗೂ ಕ್ವಾರೆಂಟೈನ್‌ಗೆ ಒಳಪಡಿಸಲಾಗುವುದು. ಕೆಲವೊಮ್ಮೆ 14 ದಿನದ ಬದಲಿಗೆ 28 ದಿನಗಳ ಕ್ವಾರೆಂಟೈನ್ ಮಾಡುವುದು ಅಗತ್ಯ ಎಂದು ಆರೋಗ್ಯ ಇಲಾಖೆ ಅಭಿಪ್ರಾಯ ಪಟ್ಟಿದೆ.
ಇದೀಗ, ಒಡಿಶಾ ಸರ್ಕಾರ ಕೊರೊನಾ ಶಂಕಿತರ ಕ್ವಾರೆಂಟೈನ್ ಅವಧಿಯನ್ನು 14 ದಿನದಿಂದ 28 ದಿನಕ್ಕೆ ವಿಸ್ತರಿಸಿದೆ. ಈ ನಿಯಮ ವಿದೇಶಗಳಿಂದ ಬರುವ ಪ್ರತಿಯೊಬ್ಬರಿಗೂ ಅನ್ವಯವಾಗುತ್ತೆ ಎಂದು ಸೂಚಿಸಿದೆ.
ಕೋವಿಡ್ ಗಾಡಿ: ರಿಮೋಟ್ ಕಂಟ್ರೋಲ್ ಗಾಡಿಯಲ್ಲಿ ರೋಗಿಗಳಿಗೆ ಔಷಧಿ
ಪ್ರಸ್ತುತ ಭಾರತ ಸರ್ಕಾರ ವಿದೇಶದಲ್ಲಿರುವ ಭಾರತೀಯರನ್ನು ವಾಪಸ್ ಕರೆತರುವ ಬಹುದೊಡ್ಡ ಕಾರ್ಯಾಚರಣೆ ಮಾಡುತ್ತಿದೆ. ಸುಮಾರು 12 ದೇಶಗಳಿಂದ 14 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಏರ್‌ಲಿಫ್ಟ್ ಮಾಡುತ್ತಿದೆ.
ಇನ್ನುಳಿದಂತೆ ಒಡಿಶಾದಲ್ಲಿ ಈವರೆಗೂ 246 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರಲ್ಲಿ 63 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. 181 ಕೇಸ್‌ಗಳು ಸಕ್ರಿಯವಾಗಿದೆ.