ಮೋದಿ ಬೆಂಗಾವಲು ವಾಹನ ಪರಿಶೀಲನೆ; ಕರ್ನಾಟಕ ಕೇಡರ್ ಅಧಿಕಾರಿ ಸಸ್ಪೆಂಡ್

Recommended Video

      Lok Sabha Elections 2019 : ಐಎಎಸ್ ಅಧಿಕಾರಿಯಿಂದ ನರೇಂದ್ರ ಮೋದಿ ಬೆಂಗಾವಲು ಪಡೆ ತಪಾಸಣೆ

      ಭುವನೇಶ್ವರ್ (ಒಡಿಶಾ), ಏಪ್ರಿಲ್ 17: ಚುನಾವಣೆ ಮಾರ್ಗದರ್ಶಿ ನಿಯಮಗಳನ್ನು ಮೀರಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯ ವಾಹನವನ್ನು ಪರಿಶೀಲನೆ ಮಾಡಿದ್ದಕ್ಕಾಗಿ ಒಡಿಶಾದ ಸಂಬಲ್ ಪುರ್ ಲೋಕಸಭಾ ಕ್ಷೇತ್ರದ ಚುನಾವಣೆ ವೀಕ್ಷಕ- ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಮೊಹ್ಮದ್ ಮೊಹ್ಸಿನ್ 1996ನೇ ಬ್ಯಾಚ್ ನ ಐಎಎಸ್ ಅಧಿಕಾರಿ. ಸಂಬಲ್ ಪುರ್ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಚುನಾವಣಾ ಭಾಷಣ ಮಾಡಿದ್ದರು. ಅಲ್ಲಿ ವಾಹನ ಪರಿಶೀಲನೆ ನಡೆಸಿದ ನಂತರ ಮಂಗಳವಾರ ಅಮಾನತು ಮಾಡಲಾಗಿದೆ. ವಾಹನ ಪರಿಶೀಲನೆ ಮಾಡಿದ ವೇಳೆ ಅದರಲ್ಲಿ ಯಾರು ಪ್ರಯಾಣಿಸುತ್ತಿದ್ದರು ಎಂಬುದು ಸ್ಪಷ್ಟವಾಗಿಲ್ಲ.

      ಮೊಹ್ಮದ್ ಮೊಹ್ಸಿನ್ ಅವರು ಚುನಾವಣೆ ಆಯೋಗದ ಮಾರ್ಗದರ್ಶಿ ಸೂತ್ರಗಳನ್ನು ಮೀರಿರುವುದು ಸ್ಪಷ್ಟವಾಗಿದೆ. ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್ ಪಿಜಿ) ಭದ್ರತೆ ಇರುವಂಥ ವಾಹನದ ಬಗ್ಗೆ ಇರುವ ನಿಯಮ ಮೀರಲಾಗಿದೆ. ಈ ಬಗ್ಗೆ ಸಂಬಲ್ ಪುರ್ ಜಿಲ್ಲಾಧಿಕಾರಿ, ಡಿಐಜಿ ಕೂಡ ಲಿಖಿತ ವರದಿಯನ್ನು ನೀಡಿದ್ದಾರೆ.

      Odisha election observer suspended for checking vehicle in PM Narendra Modi’s convoy

      ಮೊಹ್ಮದ್ ಮೊಹ್ಸಿನ್ ನಿಯೋಜನೆ ಮೇರೆಗೆ ವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಯೋಗದ ಅಡಿಯಲ್ಲಿ ಮತ್ತು ನಿಗಾದಲ್ಲಿ ಕೆಲಸ ಮಾಡುತ್ತಿದ್ದರು. ಲಭ್ಯ ಮಾಹಿತಿಯನ್ನು ಪರಿಗಣಿಸಿ, ಮುಂದಿನ ಆದೇಶದ ತನಕ ಮೊಹ್ಸಿನ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗದ ಆದೇಶದಲ್ಲಿ ತಿಳಿಸಲಾಗಿದೆ.

      ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ

      ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಹೆಲಿಕಾಪ್ಟರ್ ಅನ್ನು ಸೋಮವಾರ ಪರಿಶೀಲನೆ ನಡೆಸಲು ಸರಕಾರಿ ಅಧಿಕಾರಿಗಳಿಗೆ ಅವಕಾಶ ಕೊಡದಿದ್ದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜು ಜನತಾ ದಳ ಬುಧವಾರದಂದು ಪ್ರತ್ಯೇಕ ದೂರನ್ನು ದಾಖಲಿಸಿದೆ.

      ಈ ಮಧ್ಯೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಮಾತನಾಡಿ, ನಾನಂದು ಕೊಳ್ತೇನೆ: ಒಂದು ಸಲ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ್ ಮೇಲೆ ಎಸ್ ಪಿಜಿ ನಿಯಮ ಅನ್ವಯ ಆಗಲ್ಲ. ನನಗೆ ಅರ್ಥವಾಗುವಂತೆ ಚುನಾವಣೆ ವೇಳೆಯಲ್ಲಿ ಎಲ್ಲರೂ ಸಮಾನರೇ ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+