India
  • search
  • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಡಿಶಾದ ಆಸ್ಪತ್ರೆಯ ನೆಲದಲ್ಲಿ ನಗ್ನವಾಗಿ ಮಲಗಿದ್ದ ಕೋವಿಡ್‌ ಸೋಂಕಿತರು: ತನಿಖೆಗೆ ಆದೇಶ

|
Google Oneindia Kannada News

ಭುವನೇಶ್ವರ, ಜೂ. 1: ಬುಡಕಟ್ಟು ಪ್ರಾಬಲ್ಯದ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಕೋವಿಡ್‌ ಆಸ್ಪತ್ರೆಯ ಶೌಚಾಲಯ ಹಾಗೂ ಬೆಡ್‌ಗಳ ಮೇಲೆ, ನೆಲದ ಮೇಲೆ ಬೆತ್ತಲೆಯಾಗಿ ಮಹಿಳೆಯರು ಸೇರಿದಂತೆ ಹಲವು ರೋಗಿಗಳು ಮಲಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ, ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಜಿಲ್ಲೆಯ ನಗರದಲ್ಲಿನ ಆಸ್ಪತ್ರೆಯಲ್ಲಿ ಸೋಂಕಿತರ ಭೇಟಿಗಾಗಿ ಬಂದಿದ್ದ ವ್ಯಕ್ತಿಯೊಬ್ಬರು ರೋಗಿಗಳು ಬೆತ್ತಲಾಗಿ ಮಲಗಿರುವುದನ್ನು ನೋಡಿ, ಅವರ ವಿಡಿಯೋ ಮಾಡಿ ಹಾಗೂ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಲಸಿಕೆಯೇ ಇಲ್ಲ: ಒಡಿಶಾದಲ್ಲಿ 600 ಕೊರೊನಾ ಲಸಿಕಾ ಕೇಂದ್ರಗಳು ಬಂದ್! ಲಸಿಕೆಯೇ ಇಲ್ಲ: ಒಡಿಶಾದಲ್ಲಿ 600 ಕೊರೊನಾ ಲಸಿಕಾ ಕೇಂದ್ರಗಳು ಬಂದ್!

ಮಯೂರ್ಭಂಜ್ ಆಡಳಿತವು ಕಳೆದ ವರ್ಷ ಕಾಳಿಂಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಕಿಮ್ಸ್) ನೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿತ್ತು. ಸಾಂಕ್ರಾಮಿಕದ ಮೊದಲ ಅಲೆಯ ನಂತರ ಈಗ ಮತ್ತೆ ಕೋವಿಡ್‌ ಪ್ರಕರಣಗಳು ಹೆಚ್ಚಾಗಿ ಎರಡನೇ ಅಲೆ ಆರಂಭವಾದಾಗ ಆಸ್ಪತ್ರೆ ಮತ್ತೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.

Odisha: COVID-19 patients lying naked on hospital floor, probe ordered

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ವಿಡಿಯೋ ಚಿತ್ರೀಕರಿಸಿದ ಅಜಿತ್ ಸಾಹು, "ನಾನು ಮೇ 19 ರಂದು ನನ್ನ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಿದಿದ್ದೆ. ಅವರನ್ನು ನೋಡಲೆಂದು ನಾನು ಅಲ್ಲಿಯೇ ಇದ್ದೆ. ಬಳಿಕ ಶೌಚಾಲಯದಲ್ಲಿ ಮಲಗಿರುವ ಸೋಂಕಿತರು ಪ್ರಾಣ ಕಳೆದುಕೊಂಡಿರುವುದನ್ನು ನನ್ನ ಗಮನಕ್ಕೆ ಬಂದಿದೆ. ಸೋಂಕಿತರಿಗೆ ಆಹಾರವು ಇಲ್ಲಿ ದೊರೆಯುತ್ತಿಲ್ಲ. ಶೌಚಾಲಯಕ್ಕೆ ಹೋಗಲು ಆಗುವುದಿಲ್ಲ. ಸರಿಯಾದ ಚಿಕಿತ್ಸೆ, ಆರೈಕೆಯಿಲ್ಲದೆ ಇಲ್ಲಿ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳು ಬರಿ ಕಾಟಾಚಾರಕ್ಕೆ ವಾರ್ಡ್‌ಗೆ ಬಂದು ಹೋಗುತ್ತಿದ್ದರು. ಮೇ 19 ಮತ್ತು 29 ರ ನಡುವೆ ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ" ಎಂದು ತಿಳಿಸಿದ್ದಾರೆ.

ಜುಲೈ ಅಂತ್ಯದ ವೇಳೆಗೆ 10-12 ಕೋಟಿ ಕೋವಾಕ್ಸಿನ್ ಲಸಿಕೆ ಉತ್ಪಾದನೆ - ಡಾ ಅರೋರಾ ಜುಲೈ ಅಂತ್ಯದ ವೇಳೆಗೆ 10-12 ಕೋಟಿ ಕೋವಾಕ್ಸಿನ್ ಲಸಿಕೆ ಉತ್ಪಾದನೆ - ಡಾ ಅರೋರಾ

ತನ್ನ ತಂದೆಯನ್ನು ಇತ್ತೀಚೆಗಷ್ಟೇ ಕಳೆದುಕೊಂಡಿರುವ ಅಜಿತ್ ಸಾಹು, "ಪಿಪಿಇ ಕಿಟ್‌ ಹಾಕಿದ ವೈದ್ಯರು ದಿನಕ್ಕೆ ಎರಡು ಬಾರಿ ರೋಗಿಗಳನ್ನು ನೋಡಲು ಬರುತ್ತಿದ್ದರು. ಆದರೆ ಎಲ್ಲರ ಆರೈಕೆ ಮಾಡಲು ಸಾಕಷ್ಟು ಸಿಬ್ಬಂದಿಗಳು ಆಸ್ಪತ್ರೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ.

Odisha: COVID-19 patients lying naked on hospital floor, probe ordered

ಇನ್ನು ನಾಗರಿಕರ ನಿಯೋಗವು ಮಯೂರ್ಭಂಜ್ ಕಲೆಕ್ಟರ್ ವಿನೀತ್ ಭಾರದ್ವಾಜ್‌ರನ್ನು ಭೇಟಿಯಾಗಿ ಪರಿಸ್ಥಿತಿಯ ಬಗ್ಗೆ ತಿಳಿಸಿದೆ. "ಆಸ್ಪತ್ರೆಯಲ್ಲಿ ರೋಗಿಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ರೋಗಿಗಳು ಬೆತ್ತಲೆಯಾಗಿ ಮಲಗಿದ್ದಾರೆ. ಕೆಲವರು ಆಹಾರದ ಮೇಲೆಯೇ ಮಲಗಿರುವುದು ಗಮನಕ್ಕೆ ಬಂದಿದೆ. ರೋಗಿಗಳ ಆರೈಕೆಗೆ ಯಾರೂ ಕೂಡಾ ಇಲ್ಲ" ಎಂದು ನಿಯೋಗದ ಬಿಬೆಕ್ ಪಟ್ನಾಯಕ್ ಆರೋಪಿಸಿದರು.

ಇನ್ನು ಕಲೆಕ್ಟರ್ ವಿನೀತ್ ಭಾರದ್ವಾಜ್‌ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದ್ದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಹೇಳಿಕೆಯಲ್ಲಿ ಎಲ್ಲಾ ರೋಗಿಗಳು ಆಸ್ಪತ್ರೆಯ ಚಿಕಿತ್ಸೆಯಿಂದ ತೃಪ್ತರಾಗಿದ್ದಾರೆ ಎಂದು ತಿಳಿಸಿರುವುದಾಗಿ ಉಲ್ಲೇಖಿಸಲಾಗಿದೆ.

ಲಸಿಕೆ ಬೆಲೆ ಮತ್ತು ಹಂಚಿಕೆಯ ಬಗ್ಗೆ ಕೇಂದ್ರದ ಮುಂದೆ ಕಠಿಣ ಪ್ರಶ್ನೆಗಳನ್ನಿಟ್ಟ ಸುಪ್ರೀಂ ಕೋರ್ಟ್ಲಸಿಕೆ ಬೆಲೆ ಮತ್ತು ಹಂಚಿಕೆಯ ಬಗ್ಗೆ ಕೇಂದ್ರದ ಮುಂದೆ ಕಠಿಣ ಪ್ರಶ್ನೆಗಳನ್ನಿಟ್ಟ ಸುಪ್ರೀಂ ಕೋರ್ಟ್

"ವೈದ್ಯರು ಮತ್ತು ದಾದಿಯರು ರೋಗಿಯನ್ನು ನಿರ್ಲಕ್ಷಿಸಿದ್ದಾರೆ ಎಂಬ ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಮಾಡಿದ ಆರೋಪದ ಬಗ್ಗೆ ವಿಚಾರಿಸಲಾಗಿದೆ. ಅದು ಸುಳ್ಳು ಮತ್ತು ಆಧಾರರಹಿತವಾಗಿದೆ ಎಂದು ತಿಳಿದು ಬಂದಿದೆ. ರೋಗಿಗೆ ಮಾನಸಿಕ ಸಮಸ್ಯೆಯಿದೆ ಹಾಗೂ ಮಧ್ಯಸೇವನೆಯ ಚಟವಿದೆ" ಎಂದು ಸಮರ್ಥಿಸಿಕೊಂಡಿದ್ದಾರೆ.

Odisha: COVID-19 patients lying naked on hospital floor, probe ordered

ಇನ್ನು ಜಿಲ್ಲಾಡಳಿತವು ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಓರ್ವ ರೋಗಿಯ ಬಗ್ಗೆ ಮಾತನಾಡಿದ್ದು, ಆದರೆ ಆಸ್ಪತ್ರೆಯಲ್ಲಿ ಮಹಿಳೆಯರು ಸೇರಿದ್ದಂತೆ ಅನೇಕ ರೋಗಿಗಳು ಬೆತ್ತಲೆಯಾಗಿ ಮಲಗಿರುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

(ಒನ್ಇಂಡಿಯಾ ಸುದ್ದಿ)

English summary
Odisha: COVID-19 patients lying naked on hospital floor, probe ordered,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X