• search
  • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

5ನೇ ಬಾರಿ ಒಡಿಶಾ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ನವೀನ್ ಪಟ್ನಾಯಕ್

|

ಭುವನೇಶ್ವರ್, ಮೇ 29: ಒಡಿಶಾ ರಾಜ್ಯದ ಮುಖ್ಯಮಂತ್ರಿಯಾಗಿ ಸತತ ಐದನೇಯ ಅವಧಿಗೆ ನವೀನ್ ಪಟ್ನಾಯಕ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.

ಕಳೆದ 20 ವರ್ಷಗಳಿಂದಲೂ ನವೀನ್ ಪಟ್ನಾಯಕ್ ಅವರು ಒಡಿಶಾದ ಸಿಎಂ ಆಗಿದ್ದರು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಅವರ ಪಕ್ಷಕ್ಕೆ ಬಹುಮತ ದೊರೆತಿದ್ದು ನವೀನ್ ಪಟ್ನಾಯಕ್ ಅವರು ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

ಆಸ್ತಿ ವಿವರ : 25 ಸಾವಿರ ರು ನಗದು ಹೊಂದಿರುವ ಒಡಿಶಾ ಮುಖ್ಯಮಂತ್ರಿ ಆಸ್ತಿ ವಿವರ : 25 ಸಾವಿರ ರು ನಗದು ಹೊಂದಿರುವ ಒಡಿಶಾ ಮುಖ್ಯಮಂತ್ರಿ

ನವೀನ್ ಪಟ್ನಾಯಕ್ ಅವರ ಬಿಜೆಡಿ (ಬಿಜು ಜನತಾ ದಳ) ಪಕ್ಷದ ಮುಖಂಡರೂ ಆಗಿದ್ದು, 2000 ನೇ ಇಸವಿ ಮಾರ್ಚ್‌ 05 ರಂದು ಮೊದಲ ಬಾರಿಗೆ ಒಡಿಶಾದ ಸಿಎಂ ಆಗಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಅಂದಿನಿಂದ ಸತತವಾಗಿ 19 ವರ್ಷ 84 ದಿನ ಅವರು ಒಡಿಶಾದ ಸಿಎಂ ಆಗಿ ಕಾರ್ಯನಿರ್ವಹಿಸುತ್ತಲೇ ಇದ್ದಾರೆ. ಈಗ ಮತ್ತೊಮ್ಮೆ ಅವರು ಆಯ್ಕೆಯಾಗಿದ್ದಾರೆ.

ಭುವನೇಶ್ವರ್‌ನಲ್ಲಿ ಪ್ರಮಾಣವಚನ

ಭುವನೇಶ್ವರ್‌ನಲ್ಲಿ ಪ್ರಮಾಣವಚನ

ಭುವನೇಶ್ವರ್‌ನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರು ನವೀನ್ ಪಟ್ನಾಯಕ್ ಮತ್ತು ಇನ್ನೂ ಕೆಲವು ಮಂತ್ರಿಗಳಿಗೆ ಪ್ರಮಾಣ ವಚನ ಭೋದಿಸಿದರು. ಈ ಸಂದರ್ಭದಲ್ಲಿ ನವೀನ್ ಪಟ್ನಾಯಕ್ ಅವರ 19 ವರ್ಷ ಸಿಎಂ ಆಗಿ ಕಾರ್ಯ ನಿರ್ವಹಿಸಿದ ನೆನಪಿಗೆ ಟ್ವಿಟ್ಟರ್‌ನಲ್ಲಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.

ಒಡಿಶಾ ವಿಧಾನಸಭೆ ಚುನಾವಣೆ: ಐದನೇ ಬಾರಿಗೆ ಜನರ ಮುಂದೆ ನವೀನ್ ಪಟ್ನಾಯಕ್ಒಡಿಶಾ ವಿಧಾನಸಭೆ ಚುನಾವಣೆ: ಐದನೇ ಬಾರಿಗೆ ಜನರ ಮುಂದೆ ನವೀನ್ ಪಟ್ನಾಯಕ್

20 ಮಂತ್ರಿಗಳು ಪ್ರಮಾಣ ವಚನ

20 ಮಂತ್ರಿಗಳು ಪ್ರಮಾಣ ವಚನ

ನಿನ್ನೆಯೇ 20 ಮಂತ್ರಿಗಳನ್ನು ಪಟ್ನಾಯಕ್ ಅವರು ಆಯ್ಕೆ ಮಾಡಿದ್ದಾರೆ. ಅದರಲ್ಲಿ 11 ಕ್ಯಾಬಿನೆಟ್ ದರ್ಜೆ ಸಚಿವರು, 9 ಮಂದಿ ಸಚಿವರನ್ನು ಆಯ್ಕೆ ಮಾಡಲಾಗಿದೆ. ಅವರೂ ಸಹ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮೋದಿ ಟ್ವಿಟ್ಟರ್‌ ಮೂಲಕ ಅಭಿನಂದನೆ

ನವೀನ್ ಪಟ್ನಾಯಕ್ ಅವರು ಇಂದಿನ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದರು. ಆದರೆ ಮೋದಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಾಗಿಲ್ಲ, ಆದರೆ ಟ್ವಿಟ್ಟರ್‌ ಮೂಲಕ ನವೀನ್ ಪಟ್ನಾಯಕ್ ಅವರಿಗೆ ಮೋದಿ ಅವರು ಅಭಿನಂದನೆಗಳನ್ನು ಹೇಳಿದ್ದಾರೆ.

ಚುನಾವಣೋತ್ತರ ಸಮೀಕ್ಷೆ: ಒಡಿಶಾದಲ್ಲಿ ಮೋದಿ ಅಲೆಗೆ ಅಡ್ಡಿಯಾದ ಪಟ್ನಾಯಕ್ ಚಂಡಮಾರುತಚುನಾವಣೋತ್ತರ ಸಮೀಕ್ಷೆ: ಒಡಿಶಾದಲ್ಲಿ ಮೋದಿ ಅಲೆಗೆ ಅಡ್ಡಿಯಾದ ಪಟ್ನಾಯಕ್ ಚಂಡಮಾರುತ

ಭಾರಿ ಬಹುಮತ ಗಳಿಸಿದ್ದ ಬಿಜೆಡಿ

ಭಾರಿ ಬಹುಮತ ಗಳಿಸಿದ್ದ ಬಿಜೆಡಿ

ಕೆಲ ದಿನಗಳ ಹಿಂದೆ ನಡೆದ ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಡಿಯು 147 ಸ್ಥಾನಗಳಲ್ಲಿ 112 ಕ್ಷೇತ್ರಗಳಲ್ಲಿ ಗೆದ್ದು ಭಾರಿ ಬಹುಮತಗಳಿಸಿತ್ತು. ಕಳೆದ 19 ವರ್ಷದಿಂದಲೂ ಒಡಿಶಾದಲ್ಲಿ ಬಿಜೆಪಿ ಪಕ್ಷವೇ ಅಧಿಕಾರದಲ್ಲಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 12 ಸ್ಥಾನ ಗಳಿಸಿದ್ದರೆ, ಬಿಜೆಪಿಯು 9 ಸ್ಥಾನ ಗಳಿಸಿದೆ.

English summary
Naveen Patnaik takes oath as the Chief Minister of Odisha. This is his 5th consecutive term as the Chief Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
loader
X