ದೇಶದಲ್ಲೇ ಅತಿ ಹೆಚ್ಚು ದಂಡ ಬಿದ್ದ ದಾಖಲೆ ಒಡಿಶಾ ಟ್ರಕ್ ಡ್ರೈವರ್ ಗೆ!

ಭುವನೇಶ್ವರ್, ಸೆಪ್ಟೆಂಬರ್ 8: ಒಡಿಶಾದ ಸಂಬಲ್ ಪುರ ಜಿಲ್ಲೆಯಲ್ಲಿ ಟ್ರಕ್ ಚಾಲಕರೊಬ್ಬರಿಗೆ ಸಂಚಾರ ನಿಯಮಗಳ ಉಲ್ಲಂಘನೆ ಅರೋಪದಲ್ಲಿ ರು. 86,500 ದಂಡ ಹಾಕಲಾಗಿದೆ. ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಜಾರಿಗೆ ಬಂದ ನಂತರ ಜಾರಿಯಾದ ನಂತರ ಹಾಕಲಾದ ಅತಿ ದೊಡ್ಡ ಮೊತ್ತದ ದಂಡ ಇದು. ಟ್ರಕ್ ಚಾಲಕ ಅಶೋಕ್ ಜಾಧವ್ ಗೆ 3ನೇ ತಾರೀಕು ದಂಡ ವಿಧಿಸಿದ್ದು, ದಂಡದ ಚಲನ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Recommended Video

      Lok Sabha Elections 2019 : ಐಎಎಸ್ ಅಧಿಕಾರಿಯಿಂದ ನರೇಂದ್ರ ಮೋದಿ ಬೆಂಗಾವಲು ಪಡೆ ತಪಾಸಣೆ

      ಸಂಬಲ್ ಪುರ್ ನ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಲಲಿತ್ ಮೋಹನ್ ಬೆಹೆರಾ ಮಾತನಾಡಿ, ಅನಧಿಕೃತ ವ್ಯಕ್ತಿಗೆ ಚಾಲನೆಗೆ ಅವಕಾಶ ನೀಡಿದ್ದಕ್ಕಾಗಿ ರು. 5000, ಲೈಸೆನ್ಸ್ ಇಲ್ಲದೆ ಚಾಲನೆ 5000, 18 ಟನ್ ಗೂ ಹೆಚ್ಚು ತೂಕವನ್ನು ಹಾಕಿಕೊಂಡಿದ್ದಕ್ಕಾಗಿ ರು. 56000, ದೊಡ್ಡ ಅಳತೆಯ ಪ್ರೊಜೆಕ್ಷನ್ ಬಳಸಿದ್ದಕ್ಕೆ ರು. 20000 ಹಾಗೂ ಸಾಮಾನ್ಯ ತಪ್ಪಿಗೆ ರು. 500 ದಂಡ ವಿಧಿಸಲಾಗಿದೆ ಎಂದಿದ್ದಾರೆ.

      ಒಟ್ಟು ದಂಡ ಮೊತ್ತ 86,500 ರುಪಾಯಿ ದಂಡ ಹಾಕಿದರೂ ಅಧಿಕಾರಿಗಳ ಜತೆಗೆ ಐದು ಗಂಟೆಗೂ ಹೆಚ್ಚು ಕಾಲ ಮಾತನಾಡಿ, ಚಾಲಕ 70,000 ರುಪಾಯಿ ದಂಡ ಪಾವತಿಸಿದ್ದಾರೆ. ಆ ಟ್ರಕ್ ನಾಗಾಲ್ಯಾಂಡ್ ಮೂಲಕದ ಬಿಎಲ್ ಎ ಇನ್ ಫ್ರಾಸ್ಟ್ರಕ್ಚರ್ ಪ್ರೈ. ಲಿ. ಸೇರಿದ್ದಾಗಿದೆ. ಟ್ರಕ್ ನಲ್ಲಿ ಜೆಸಿಬಿ ಮಷೀನ್ ಸಾಗಿಸಲಾಗುತ್ತಿತ್ತು. ಛತ್ತೀಸ್ ಗಡದ ಅಂಗುಲ್ ಜಿಲ್ಲೆಯ ತಲ್ಚೆರ್ ಗೆ ಆ ಟ್ರಕ್ ತೆರಳುತ್ತಿತ್ತು.

      More Than 86 Thousand Fine To Truck Driver In Odisha

      ಸೆಪ್ಟೆಂಬರ್ ಒಂದರಿಂದಲೇ ಒಡಿಶಾದಲ್ಲಿ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಿದೆ. ಹೀಗೆ ಜಾರಿಯಾದ ನಂತರ ದೇಶದಲ್ಲೇ ಅತಿ ಹೆಚ್ಚು, ಅಂದರೆ 88 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ಕಳೆದ ವಾರ ಆಟೋ ಚಾಲಕರೊಬ್ಬರಿಗೆ ಭುವನೇಶ್ವರದಲ್ಲಿ ರು. 47,500 ದಂಡ ವಿಧಿಸಲಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+