Get Updates
Get notified of breaking news, exclusive insights, and must-see stories!

ಪಕ್ಷಾಂತರ: ಬಿಜೆಡಿ ತೊರೆದು ಬಿಜೆಪಿ ಸೇರಿದ ಸಂಸದ ಬಲಭದ್ರ

ನವದೆಹಲಿ, ಮಾರ್ಚ್ 16: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳಿಂದಲೂ ಬಿಜು ಜನತಾ ದಳ(ಬಿಜೆಡಿ) ಅಂತರ ಕಾಯ್ದುಕೊಂಡಿದೆ. ಆದರೆ, ಬಿಜೆಡಿಯ ಹಾಲಿ ಸಂಸದ, ಹಿರಿಯ ನಾಯಕ ಬಲಭದ್ರ ಮಾಂಝಿ ಅವರು ಬಿಜೆಡಿ ತೊರೆದು ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು ಅಧಿಕೃತವಾಗಿ ಸೇರಿಕೊಂಡಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಜುವಲ್ ಓರಮ್ ಅವರ ಸಮ್ಮುಖದಲ್ಲಿ ಬಲಭದ್ರ ಅವರು ಬಿಜೆಪಿ ಸೇರಿದರು. ನಬರಂಗ್ ಪುರ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಬಲಭದ್ರ ಅವರ ಸೇರ್ಪಡೆಯಿಂದ ಬುಡಕಟ್ಟು ಜನಾಂಗದ ಮತಗಳನ್ನು ಸೆಳೆಯಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿಯಿದೆ.

2014ರಲ್ಲಿ ಕಾಂಗ್ರೆಸ್ಸಿನ ಪ್ರದೀಪ್ ಕುಮಾರ್ ಮಾಂಝಿ ಅವರನ್ನು ಸೋಲಿಸಿ ಬಲಭದ್ರ ಅವರು ಸಂಸದರಾಗಿ ಆಯ್ಕೆಯಾಗಿದ್ದರು. ಸುಂದರ್ ಘರ್ ಕ್ಷೇತ್ರದಲ್ಲಿ ಬಿಜೆಡಿ ಅಭ್ಯರ್ಥಿ ದಿಲೀಪ್ ಕುಮಾರ್ ಟಿರ್ಕೆ ಅವರನ್ನು ಸೋಲಿಸಿ, ಬಿಜೆಪಿಗೆ ಏಕೈಕ ಸ್ಥಾನ ಗೆಲ್ಲಿಸಿ ಕೊಟ್ಟಿದ್ದ ಜುಯಲ್ ಓರಾಮ್ ಹಾಗೂ ಬಲಭದ್ರ ಅವರ ಮೇಲೆ ಬಿಜೆಪಿ ಈ ಬಾರಿ ವಿಶ್ವಾಸ ಇಟ್ಟುಕೊಂಡಿದೆ,

Lok Sabha elections 2019: BJD MP Balabhadra Majhi joins BJP

ಒಡಿಶಾದಲ್ಲಿ ಒಟ್ಟು 21(543) ಲೋಕಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ 20 ಕ್ಷೇತ್ರಗಳನ್ನು 2014 ರಲ್ಲಿ ಬಿಜು ಜನತಾದಳವೇ ಗೆದ್ದು ದಾಖಲೆ ಬರೆದಿತ್ತು. ಅಕಸ್ಮಾತ್ ಈ ಪಕ್ಷ ಯಾವುದೇ ಒಂದು ಮೈತ್ರಿಕೂಟದ ಭಾಗವಾದರೂ ಅವರಿಗೆ ಲಾಭ ಖಂಡಿತ ಎಂಬ ಎಣಿಕೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+