• search
  • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ ಕೋವಿಡ್-19 ಸೋಂಕಿತೆ.!

|

ಭುಭನೇಶ್ವರ್, ಜೂನ್ 5: ಕೋವಿಡ್-19 ಪಾಸಿಟಿವ್ ಕಂಡುಬಂದಿದ್ದ ಗರ್ಭಿಣಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಒಡಿಶಾದ ಕಿಮ್ಸ್ ಆಸ್ಪತ್ರೆಯಲ್ಲಿ ಜೂನ್ 1 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರೋಗ್ಯವಂತ ಮಗುವಿಗೆ ಕೋವಿಡ್-19 ಸೋಂಕಿತೆ ತಾಯಿಯಾಗಿದ್ದಾರೆ.

      ಶಾಲೆ ಆರಂಭವಾದ ಒಂದೇ ವಾರದಲ್ಲಿ 70 ಮಕ್ಕಳಿಗೆ ಕೊರೊನಾ ಸೋಂಕು | Oneindia Kannada

      ''ತಾಯಿ ಮತ್ತು ಮಗುವಿನ ಆರೋಗ್ಯ ಸ್ಥಿರವಾಗಿದೆ'' ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

      ಕಲಬುರಗಿಯಲ್ಲಿ ಗರ್ಭಿಣಿಯ ಹೋಂ ಕ್ವಾರಂಟೈನ್ ತಂದ ಆತಂಕ

      ಬೇರೆ ರಾಜ್ಯದಿಂದ ಒಡಿಶಾಗೆ ಬಂದಿದ್ದ ಕೊರೊನಾ ವೈರಸ್ ಸೋಂಕಿತೆ, ಭುಭನೇಶ್ವರ್ ನಲ್ಲಿರುವ ಟೆಂಪರರಿ ಮೆಡಿಕಲ್ ಕ್ಯಾಂಪ್ ನಲ್ಲಿ ಕ್ವಾರಂಟೈನ್ ಆಗಿದ್ದರು. ಬಳಿಕ ಗರ್ಭಿಣಿ ಮಹಿಳೆಯನ್ನು ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.

      ಅಯ್ಯೋ ಪಾಪ.. ಮಂಗಳೂರಿನಲ್ಲಿ ಗರ್ಭಿಣಿಗೆ ಇಂದೆಂಥಾ ದುಃಸ್ಥಿತಿ.!

      ಅಸಲಿಗೆ, ಗರ್ಭಿಣಿ ಮಹಿಳೆಯ ಹೆರಿಗೆ ದಿನಾಂಕ ಜೂನ್ 21 ಕ್ಕೆ ನಿಗದಿಯಾಗಿತ್ತು. ಆದ್ರೆ, ಜೂನ್ 1 ರಂದೇ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಮಗುವಿಗೂ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು. ತಾಯಿಗೆ ಕೋವಿಡ್-19 ಪಾಸಿಟಿವ್ ಇದ್ದರೂ, ಮಗುವಿಗೆ ಮಾತ್ರ ಕೊರೊನಾ ವೈರಸ್ ಸೋಂಕು ತಗುಲಿಲ್ಲ. ಈ ವಿಷಯವನ್ನು ವೈದ್ಯರು ಖಚಿತಪಡಿಸಿದ್ದಾರೆ.

      English summary
      Covid-19 Patient Delivers Healthy Baby In Odisha.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X