ಒಡಿಶಾದಲ್ಲಿ ಹೆಣ್ಣುಮಗುವಿಗೆ ಚಂಡಮಾರುತ 'ಫೋನಿ' ಹೆಸರಿಟ್ಟ ಪೋಷಕರು

ಭುವನೇಶ್ವರ್ (ಒಡಿಶಾ), ಮೇ 3: ಫೋನಿ ಚಂಡಮಾರುತ ಶುಕ್ರವಾರ ಒಡಿಶಾದಲ್ಲಿ ಅಪ್ಪಳಿಸಿದೆ. ಇದೇ ದಿನ ಹುಟ್ಟಿದ ಹೆಣ್ಣುಮಗುವಿಗೆ 'ಫೋನಿ' ಎಂದು ಹೆಸರಿಡಲಾಗಿದೆ. ಮೂವತ್ತೆರಡು ವರ್ಷದ ಮಹಿಳೆಯೊಬ್ಬರು ರೈಲ್ವೆ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಮ್ಮ ಮಗುವಿಗೆ ಚಂಡಮಾರುತದ ಹೆಸರನ್ನೇ (ಫೋನಿ) ಇಡಲು ತೀರ್ಮಾನಿಸಿದ್ದಾರೆ.

ಮಹಿಳೆಯು ರೈಲ್ವೆ ಇಲಾಖೆ ಸಿಬ್ಬಂದಿ ಆಗಿದ್ದು, ಮಂಚೇಶ್ವರ್ ನಲ್ಲಿ ಇರುವ ಕೋಚ್ ದುರಸ್ತಿ ವರ್ಕ್ ಶಾಪ್ ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಫೋನಿ ಚಂಡಮಾರುತದ ಅಬ್ಬರಕ್ಕೆ ಮೂವರು ಮೃತಪಟ್ಟಿದ್ದಾರೆ. ಮರಗಳು, ವಿದ್ಯುತ್ ಕಂಬಗಳು ನೆಲ ಕಚ್ಚಿವೆ. ರಾಜ್ಯದ ಹಲವು ಭಾಗದಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ.

ದೇವಾಲಯ ನಗರಿ ಪುರಿಯಲ್ಲಿ ದೊಡ್ಡ ಪ್ರದೇಶವು ನೀರಿನಲ್ಲಿ ಮುಳುಗಿದೆ. ಕಳೆದ ಇಪ್ಪತ್ತು ವರ್ಷದಲ್ಲೇ ಭಾರತ ಕಂಡ ಪ್ರಬಲ ಚಂಡಮಾರುತ ಇದು. ಇದು ಕ್ರಮೇಣ ದುರ್ಬಲವಾಗುತ್ತಿದ್ದು, ಪಶ್ಚಿಮ ಬಂಗಾಲದ ಕಡೆಗೆ ಚಲಿಸುತ್ತಿದೆ. ಒಡಿಶಾ ರಾಜ್ಯ ಸರಕಾರವು ಆರುನೂರು ಗರ್ಭಿಣಿಯರೂ ಸೇರಿ ಹನ್ನೊಂದು ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಿದೆ.

Baby Fani: Odisha newborn named after cyclone

ಫೋನಿ ಚಂಡಮಾರುತದಿಂದ ತೊಂದರೆಗೆ ಒಳಗಾದ ರಾಜ್ಯಗಳಿಗೆ ಕೇಂದ್ರ ಸರಕಾರವು ಒಂದು ಸಾವಿರ ಕೋಟಿ ರುಪಾಯಿ ಪರಿಹಾರ ಬಿಡುಗಡೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+