ಒಡಿಶಾದ ಸ್ಟೀಲ್ ಕಾರ್ಖಾನೆಯಲ್ಲಿ ಅನಿಲ ಸೋರಿಕೆ; ನಾಲ್ವರು ಸಾವು
ಒಡಿಶಾ, ಜನವರಿ 06: ಒಡಿಶಾದ ರೌರ್ಕೆಲಾದಲ್ಲಿನ ಸ್ಟೀಲ್ ಕಾರ್ಖಾನೆಯ ಕಲ್ಲಿದ್ದಲು ರಾಸಾಯನಿಕ ಘಟಕದಲ್ಲಿ ಅನಿಲ ಸೋರಿಕೆಯಾಗಿ ನಾಲ್ವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
ಬುಧವಾರ ಬೆಳಿಗ್ಗೆ ಸುಮಾರು 7.30ರ ಸಮಯದಲ್ಲಿ ಕಾರ್ಮಿಕರು ನಿರ್ವಹಣಾ ಕಾರ್ಯದಲ್ಲಿ ನಿರತವಾಗಿದ್ದ ಸಂದರ್ಭ ಘಟಕದಲ್ಲಿ ವಿಷಕಾರಿ ಇಂಗಾಲದ ಮೋನೋಕ್ಸೈಡ್ ಅನಿಲ ಸೋರಿಕೆಯಾಗಿ ನಾಲ್ವರು ಗುತ್ತಿಗೆ ಕಾರ್ಮಿಕರು ಸಾವನ್ನಪ್ಪಿರುವುದಾಗಿ ರೌರ್ಕೆಲಾ ಎಸ್ಪಿ ಮುಕೇಶ್ ಕುಮಾರ್ ತಿಳಿಸಿದ್ದಾರೆ.
ಅನಿಲ ಸೋರಿಕೆ ಹೇಗಾಯಿತು ಎಂಬುದು ತಿಳಿದುಬಂದಿಲ್ಲ. ಘಟನೆ ಕುರಿತಂತೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಅನಿಲ ಸೋರಿಕೆಯಾಗಿ ಅಸ್ವಸ್ಥಗೊಂಡ ನಾಲ್ವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ನಾಲ್ವರೂ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಕೆಲಸದ ಸ್ಥಳದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತೇ ಇಲ್ಲವೇ ಎಂಬ ಕುರಿತು ತನಿಖೆ ಕೈಗೊಳ್ಳಲು ಆದೇಶಿಸಲಾಗಿದೆ.












Click it and Unblock the Notifications