ಮಧ್ಯ ಪ್ರದೇಶದ ದೃಷ್ಟಿಹೀನ ಟೆಕ್ಕಿಗೆ 47 ಲಕ್ಷ ರೂ. ಉದ್ಯೋಗದ ಆಫರ್

ಕನಸು ಒಂದು ಶಕ್ತಿಯುತ ವಿಷಯ. ದೃಷ್ಟಿಹೀನತೆಯಿಂದ ಬಳಲುತ್ತಿರುವ ಮಧ್ಯ ಪ್ರದೇಶದ 25 ವರ್ಷದ ಯಶ್ ಸೋನಾಕಿಯಾ ಅವರಿಗೆ ಈ ಗಾದೆ ಸರಿಹೋಗುತ್ತದೆ. ಅಂದರಾದ ಸೋನಕಿಯಾ ಮೈಕ್ರೋಸಾಫ್ಟ್‌ನಲ್ಲಿ 47 ಲಕ್ಷ ರೂಪಾಯಿಗಳ ಪ್ಯಾಕೇಜ್‌ನೊಂದಿಗೆ ಉದ್ಯೋಗದ ಆಫರ್ ಪಡೆದಿದ್ದಾರೆ.

ಮಧ್ಯಪ್ರದೇಶದ 25 ವರ್ಷ ವಯಸ್ಸಿನ ಸಾಫ್ಟವೇರ್ ಇಂಜಿನಿಯರ್ ಯಶ್ ಸೋನಾಕಿಯಾ ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗ ಪಡೆದಿದ್ದಾರೆ. ಅವರಿಗೆ ವಾರ್ಷಿಕ 47 ಲಕ್ಷ ರೂ. ವೇತನ ನೀಡಲು ಸಂಸ್ಥೆ ಮುಂದಾಗಿದೆ. ಸೋನಕಿಯಾ ಈ ಪ್ರಸ್ತಾಪವನ್ನು ಒಪ್ಪಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಯಶ್ ವ್ಯಾಸಂಗ ಮಾಡಿದ ಇಂದೋರ್‌ನ ಶ್ರೀ ಗೋವಿಂದ್‌ರಾಮ್ ಸೆಕ್ಸರಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (ಎಸ್‌ಜಿಎಸ್‌ಐಟಿಎಸ್‌) ಕಾಲೇಜಿನ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದಾರೆ. ಯಶ್ ಈ ಕಾಲೇಜಿನಿಂದ 2021ರಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಗ್ಲುಕೊಮಾದಿಂದ 8ನೇ ವಯಸ್ಸಿಗೆ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ ಯಶ್,'ಸ್ಕ್ರೀನ್ ರೀಡರ್' ತಂತ್ರಾಂಶದ ಸಹಾಯದಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು.

Visually impaired techie from Madhya Pradesh bags Rs 47 lakh job offer from Microsoft

"ಮೈಕ್ರೋಸಾಫ್ಟ್‌ನ ಉದ್ಯೋಗ ಪ್ರಸ್ತಾವವನ್ನು ಸ್ವೀಕರಿಸಿದ್ದೇನೆ, ಸದ್ಯದಲ್ಲೇ ಉದ್ಯೋಗಕ್ಕಾಗಿ ಸಂಸ್ಥೆಯ ಬೆಂಗಳೂರಿನ ಕಚೇರಿಗೆ ಹಾಜರಾಗಲಿದ್ದೇನೆ. ಸದ್ಯಕ್ಕೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ" ಎಂದು ಯಶ್ ತಿಳಿಸಿದರು.

ಯಶ್ ಸೋನಾಕಿಯಾ ಹುಟ್ಟಿನಿಂದಲೇ ಗ್ಲುಕೊಮಾ ಕಾಯಿಲೆ ಹೊಂದಿದ್ದರು. "ನನ್ನ ಮಗ ಸಾಫ್ಟ್‌ವೇರ್ ಇಂಜಿನಿಯರ್ ಆಗುವ ಆಕಾಂಕ್ಷೆ ಹೊಂದಿದ್ದರು. ಆತ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ ಬಳಿಕವೂ ನಾವು ಅವನ ಆಸೆಗೆ ಬೆಂಬಲವಾಗಿ ನಿಂತಿದ್ದೆವು. ಅವನು ಐದನೇ ತರಗತಿಯವರೆಗೆ ವಿಶೇಷ ಮಕ್ಕಳ ಶಾಲೆಯಲ್ಲಿ ವ್ಯಾಸಂಗ ಮಾಡಿದ. ಬಳಿಕ ಸಾಮಾನ್ಯ ಶಾಲೆಗೆ ಸೇರಿಸಿದೆವು. ಆತನ ಸಹೋದರಿಯೊಬ್ಬಳು ಆತನಿಗೆ ಓದಿಗೆ ನೆರವಾದಳು. ವಿಶೇಷವಾಗಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಆಕೆ ಸಹಕಾರ ನೀಡಿದಳು" ಎಂದು ಇಂಧೋರ್‌ನಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಯಶ್ ತಂದೆ ಯಶ್‌ಪಾಲ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+