ವಿಶ್ವ ಹಿಂದೂ ಪರಿಷತ್ ಮುಖಂಡನ ಕೊಲೆ ವಿಡಿಯೋ ವೈರಲ್

ಭೋಪಾಲ್, ಜೂನ್ 28: ಮಧ್ಯಪ್ರದೇಶದ ಹೊಶಾಂಗಬಾದ್ ಜಿಲ್ಲೆಯಲ್ಲಿ ಗೋರಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿಶ್ವ ಹಿಂದೂ ಪರಿಷತ್ ನ ಮುಖಂಡರೊಬ್ಬರನ್ನು ಹತ್ಯೆ ಮಾಡಿದ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ಪ್ರಸಾರವಾದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಮೃತ ವ್ಯಕ್ತಿಯನ್ನು 35 ವರ್ಷ ವಯಸ್ಸಿನ ರವಿ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ವಿಎಚ್ ಪಿಯ ಗೋರಕ್ಷಕ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಭೋಪಾಲ್ ನಿಂದ 146 ಕಿ.ಮೀ ದೂರದಲ್ಲಿರುವ ಪಿಪರಿಯಾ ಎಂಬಲ್ಲಿ ಈ ಹತ್ಯೆ ನಡೆದಿದ್ದು, 10ಕ್ಕೂ ಅಧಿಕ ಮಂದಿಯಿದ್ದ ಗುಂಪೊಂದು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ.

ಸಂಘಟನೆಯ ಸಭೆಯನ್ನು ಮುಗಿಸಿಕೊಂಡು ರವಿ ಹಾಗೂ ಇನ್ನಿಬ್ಬರು ಸ್ನೇಹಿತರು ಕಾರಿನ ಮೂಲಕ ಮನೆಗೆ ತೆರಳುತ್ತಿದ್ದಾಗ ಅಪರಿಚಿತ ವ್ಯಕ್ತಿಗಳ ಗುಂಪೊಂದು ಮಾರ್ಗಮಧ್ಯದಲ್ಲಿ ಅಡ್ಡಗಟ್ಟಿದೆ. ಕಬ್ಬಿಣದ ರಾಡ್, ಹಾಕಿ ಸ್ಟಿಕ್, ಮಾರಾಕಾಸ್ತ್ರ ಬಳಸಿ ಏಕಾಏಕಿ ರವಿ ಮೇಲೆ ಹಲ್ಲೆ ನಡೆಸಿ ಕೊನೆಯಲ್ಲಿ ಗುಂಡು ಹಾರಿಸಿದ್ದಾರೆ.

VHP leader shot dead in Hoshangabad district Madhya Pradesh

ಕಾರಿನಿಂದ ರವಿಯನ್ನು ಹೊರಕ್ಕೆ ಎಳೆದು ಥಳಿಸುತ್ತಿರುವ ದೃಶ್ಯ, ಗುಂಡಿಕ್ಕಿದ ಬಳಿಕವೂ ಹಲ್ಲೆ ನಡೆಸಿದ್ದು ಎಲ್ಲವೂ ವಿಡಿಯೋದಲ್ಲಿ ದಾಖಲಾಗಿದೆ. ರವಿ ಹತ್ಯೆ ಬಳಿಕ ಜೊತೆಗಿದ್ದ ಭೂರಾ ಪಟೇಲ್, ಪೊಲೀಸರ ನೆರವು ಕೋರಿ ಘಟನೆ ಬಗ್ಗೆ ವಿವರಿಸಿದ್ದಾರೆ. ಅವರ ಗುರಿ ರವಿಯನ್ನು ಹತ್ಯೆ ಮಾಡುವುದು ಮಾತ್ರ ಆಗಿತ್ತು. ಕಾರಿನಲ್ಲಿದ್ದ ನಮ್ಮ ಮೇಲೆ ಹಲ್ಲೆ ಮಾಡಲಿಲ್ಲ, ಅಲ್ಲಿಂದ ಓಡಿ ಹೋಗಲು ಸೂಚಿಸಿದರು ಎಂದು ತಿಳಿಸಿದ್ದಾರೆ.

ಹೋಶಾಂಗಬಾದ್ ನಲ್ಲಿ ಭೂ ವ್ಯವಹಾರ, ವ್ಯಾಪಾರ ವಹಿವಾಟು ವಿಷ್ಯದಲ್ಲಿ ಎರಡು ಗುಂಪಿನ ನಡುವೆ ವ್ಯಾಜ್ಯ ನಡೆದಿತ್ತು. ರವಿ ಮೇಲೆ ಹಲ್ಲೆ, ಹತ್ಯೆಗೆ ಇದೇ ಕಾರಣವಾಗಿರಬಹುದು, 10 ಮಂದಿಯನ್ನು ಆರೋಪಗಳೆಂದು ಗುರುತಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಲಾಗಿದೆ ಎಂದು ಎಸ್ ಪಿ ಸಂತೋಷ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+