ಇಂದೋರ್‌ನಲ್ಲಿ ಟ್ರೀ ಆಂಬ್ಯುಲೆನ್ಸ್‌ಗೆ ಚಾಲನೆ, ದೇಶದಲ್ಲಿ ಬೇರೆಲ್ಲಿವೆ ಟ್ರೀ ಆಂಬ್ಯುಲೆನ್ಸ್?
ಇಂದೋರ್, ಆಗಸ್ಟ್ 26: ಮಧ್ಯಪ್ರದೇಶದ ಇಂದೋರ್‌ನಲ್ಲಿ 'ಟ್ರೀ ಆಂಬ್ಯುಲೆನ್ಸ್‌ಗೆ ಚಾಲನೆ ನೀಡಲಾಗಿದೆ. ಇದು ನಗರದಲ್ಲಿನ ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸಲು ಮತ್ತು ಮರಗಳ ರಕ್ಷಣೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ.
ದೇಶದಲ್ಲಿ ಸ್ವಚ್ಛತೆಯಲ್ಲಿ ಸತತವಾಗಿ ನಂಬರ್ ಒನ್ ಸ್ಥಾನದಲ್ಲಿರುವ ಕ್ಲೀನ್ ಸಿಟಿ ಇಂದೋರ್ ಇದೀಗ ಗ್ರೀನ್ ಸಿಟಿಯೂ ಆಗುವತ್ತ ಸಾಗುತ್ತಿದೆ. ಜೈವಿಕ ವೈವಿಧ್ಯತೆಯನ್ನು ರಕ್ಷಿಸಲು ಮತ್ತು ನಗರವನ್ನು ಹಸಿರಾಗಿಡಲು ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್ ತನ್ನ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ರಾಜಧಾನಿ ನಗರದಲ್ಲಿ ಹಸಿರು ಸಂರಕ್ಷಣೆಗಾಗಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳೊಂದಿಗೆ ಈ ವಾಹನಗಳಿಗೆ ಚಾಲನೆ ನೀಡಿದೆ.
ನಗರದ ಸುತ್ತಮುತ್ತಲಿನ ಮರಗಳನ್ನು ಆರೋಗ್ಯವಾಗಿಡಲು ಮತ್ತು ಅವುಗಳನ್ನು ಕಾಪಾಡಿಕೊಳ್ಳಲು 'ಟ್ರೀ ಆಂಬ್ಯುಲೆನ್ಸ್' ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಮಹಾನಗರ ಪಾಲಿಕೆಯ ಕಾರ್ಯಾಗಾರದಲ್ಲಿಯೇ ಈ ಆಂಬ್ಯುಲೆನ್ಸ್ ಸಿದ್ಧಪಡಿಸಲಾಗಿದ್ದು, ಅನಾರೋಗ್ಯ, ಹುಳು ಬಾಧಿತ ಮರಗಳು ಮತ್ತು ಗಿಡಗಳಿಗೆ ಚಿಕಿತ್ಸೆ ನೀಡಲಿದೆ.

ಹಸಿರು ಕಾಪಾಡಿಕೊಳ್ಳಲು ಆರಂಭ
ಆಂಬುಲೆನ್ಸ್‌ನಲ್ಲಿ ಮರಗಳಿಗೆ ಔಷಧಿ ಸಿಂಪಡಣೆ, ನೀರು ಸಿಂಪಡಿಸುವುದು, ಕತ್ತರಿಸುವುದು ಸೇರಿದಂತೆ ಎಲ್ಲಾ ಸೌಲಭ್ಯಗಳು ಮತ್ತು ಉಪಕರಣಗಳು ಈ ವಾಹನದಲ್ಲಿ ಇವೆ. ಇಂದೋರ್ ಮೇಯರ್ ಪುಷ್ಯಮಿತ್ರ ಭಾರ್ಗವ್ ಮಾತನಾಡಿ, ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಜೀವವೈವಿಧ್ಯ ರಕ್ಷಣೆಗಾಗಿ ಸ್ಥಾಪಿಸಲಾದ ಟ್ರೀ ಆಂಬ್ಯುಲೆನ್ಸ್ ಸ್ಪ್ರಿಂಕ್ಲರ್‌ಗಳು, ನೀರಿನ ವ್ಯವಸ್ಥೆ, ಔಷಧಗಳು ಮತ್ತು ಇತರ ಉಪಕರಣಗಳಂತಹ ಅಗತ್ಯತೆಗಳೊಂದಿಗೆ ಇಂದೋರ್ ಅನ್ನು ಹಸಿರು ಕಾಪಾಡಿಕೊಳ್ಳಲು ಆರಂಭ ಮಾಡಲಾಗಿದೆ ಎಂದಿದ್ದಾರೆ. ಮಹಾನಗರ ಪಾಲಿಕೆಯ ತೋಟಗಾರಿಕೆ ಇಲಾಖೆಯಿಂದ ಆಂಬ್ಯುಲೆನ್ಸ್ ಕಾರ್ಯನಿರ್ವಹಿಸಲಿದೆ.

ಅನಾರೋಗ್ಯಕರ ಮರಗಳ ಸಂರಕ್ಷಣೆ
ಇದಕ್ಕೂ ಮೊದಲು ಕೇಂದ್ರಾಡಳಿತ ಪ್ರದೇಶ ಚಂಡೀಗಢದಲ್ಲಿ ಕೊಳೆಯುತ್ತಿರುವ ಮತ್ತು ಅನಾರೋಗ್ಯಕರ ಮರಗಳ ಸಂರಕ್ಷಣೆ ಮಾಡುವ ಉದ್ದೇಶದಿಂದ ತುರ್ತು 'ಟ್ರೀ ಆಂಬುಲೆನ್ಸ್' ಸೇವೆಯನ್ನು ಪರಿಚಯಿಸಲು ಸಜ್ಜಾಗಿತ್ತು. ಗೆದ್ದಲು ಮತ್ತು ಇತರ ಕೀಟಗಳಿಂದ ಹಲವಾರು ಮರಗಳು ಕೊಳೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ. ಆದ್ದರಿಂದ ನಾವು ಮರಗಳಿಗೆ ಆಂಬ್ಯುಲೆನ್ಸ್ ಸೇವೆಯ ಕಲ್ಪನೆಯನ್ನು ತಂದಿದ್ದೇವೆ. ನಾವು ಫೋನ್ ಸಂಖ್ಯೆಯನ್ನು ಬಿಡುಗಡೆ ಮಾಡುತ್ತೇವೆ. ಇದರಿಂದ ಜನರು ಕೆಟ್ಟ ಸ್ಥಿತಿಯಲ್ಲಿ ಮರವನ್ನು ಕಂಡಾಗಲೆಲ್ಲಾ ನಮ್ಮನ್ನು ಸಂಪರ್ಕಿಸಬಹುದು. ಒಬ್ಬರು ಚಂಡೀಗಢದ ಪರಿಯಾವರಣ್ ಭವನಕ್ಕೆ ಕರೆ ಮಾಡಿದರೆ ಸಾಕು. ಆಗ ತಜ್ಞರೊಂದಿಗೆ ವಿಶೇಷ ವಾಹನವು ಸ್ಥಳವನ್ನು ತಲುಪುತ್ತದೆ ಎಂದು ಚಂಡೀಗಢದ ಪರಿಸರ ನಿರ್ದೇಶಕ ದೇಬೇಂದ್ರ ದಲೈ ಹೇಳಿದ್ದರು.

ಪರಿಸರ ಜಾಗೃತಿಯನ್ನು ಹರಡಲು ಸಹಾಯ
2019ರಲ್ಲಿಯೇ ಚೆನ್ನೈನಲ್ಲಿ ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಟ್ರೀ ಆಂಬ್ಯುಲೆನ್ಸ್‌ಗೆ ಚಾಲನೆ ನೀಡಲಾಗಿತ್ತು. ಇದು ಮರಗಳಿಗೆ ಉಪಚರಿಸುವ ಮೂಲಕ ಮತ್ತು ಇತರ ಸಂಬಂಧಿತ ಸೇವೆಗಳನ್ನು ನೀಡುವ ಮೂಲಕ ಪರಿಸರ ಜಾಗೃತಿಯನ್ನು ಹರಡಲು ಸಹಾಯ ಮಾಡುತ್ತಿದೆ. ಟ್ರೀ ಆಂಬ್ಯುಲೆನ್ಸ್ ಸೀಡ್ ಬಾಲ್ ವಿತರಣೆ, ಸಸ್ಯ ವಿತರಣೆ, ಮರದ ನೆಡುವಿಕೆಗೆ ಸಹಾಯ ಮಾಡುವುದು, ಮರಗಳ ಸ್ಥಳಾಂತರ ಮತ್ತು ಸಮೀಕ್ಷೆ ಮತ್ತು ಸತ್ತ ಮರಗಳನ್ನು ತೆಗೆಯುವುದು ಮುಂತಾದ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಚಂಡಮಾರುತಕ್ಕೆ ನೂರಾರು ಮರಗಳು ಬುಡಮೇಲು
ಟ್ರೀ ಆಂಬ್ಯುಲೆನ್ಸ್ ಸೇವೆಯ ಸಂಸ್ಥಾಪಕ ಅಬ್ದುಲ್ ಘನಿ ಮಾತನಾಡಿ, ಅನಾರೋಗ್ಯಪೀಡಿತರನ್ನು ನೋಡಿಕೊಳ್ಳುವ ಮಾದರಿಯಲ್ಲಿ ಮರಗಳನ್ನು ನೋಡಿಕೊಳ್ಳಲಾಗುವುದು. ಅಲ್ಲದೆ ಬೇರುಸಹಿತ ಮರಗಳನ್ನು ಮರಳಿ ಸ್ಥಳಾಂತರಿಸಲು ಮತ್ತು ಮರಗಳನ್ನು ರಕ್ಷಿಸುವುದು ನಮ್ಮ ಗುರಿಯಾಗಿದೆ ಎಂದರು. ಈ ಯೋಜನೆಯ ಅಧ್ಯಕ್ಷ ಸುರೇಶ್, ವರ್ದಾ ಮತ್ತು ಗಜ ಚಂಡಮಾರುತವು ತಮಿಳುನಾಡಿನಲ್ಲಿ ನೂರಾರು ಮರಗಳನ್ನು ಕಿತ್ತುಹಾಕಿದೆ. 2015ರ ಚೆನ್ನೈ ಪ್ರವಾಹವನ್ನು ನಾನು ಖುದ್ದಾಗಿ ನೋಡಿದ್ದೇನೆ. ಆದ್ದರಿಂದ, ಚೆನ್ನೈನಲ್ಲಿ ಟ್ರೀ ಆಂಬ್ಯುಲೆನ್ಸ್ ಅನ್ನು ರಚಿಸುವ ಅಬ್ದುಲ್ ಘನಿ ಅವರ ಆಲೋಚನೆಗೆ ನಮ್ಮ ಬೆಂಬಲವಿದೆ. ಇಡೀ ದೇಶದಲ್ಲಿ ನಮ್ಮ ಟ್ರೀ ಆಂಬ್ಯುಲೆನ್ಸ್ ದೊಡ್ಡ ಮರಗಳನ್ನು ಎತ್ತುವ ಹೈಡ್ರಾಲಿಕ್ ಯಂತ್ರವನ್ನು ಹೊಂದಿರುವ ಮೊದಲನೆಯ ಉಪಕ್ರಮವಾಗಿದೆ ಎಂದರು.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications