ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯ ಪ್ರದೇಶ; ಸಚಿವರ ಸೊಸೆ ಶವವಾಗಿ ಪತ್ತೆ

|
Google Oneindia Kannada News

ಭೋಪಾಲ್, ಮೇ 10: ಮಧ್ಯಪ್ರದೇಶ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಸೊಸೆ ಸವಿತಾ ಪರ್ಮಾರ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಶವ ಮನೆಯಲ್ಲಿ ಪತ್ತೆಯಾಗಿದೆ.

ಕಲಪಿಪಾಲ್‌ ತೆಹಸಿಲ್‌ನ ಪೊಂಚನೇರ ಹಳ್ಳಿಯ ನಿವಾಸದಲ್ಲಿ ಸವಿತಾ ಪರ್ಮಾರ್ ಮೃತದೇಹ ಪತ್ತೆಯಾಗಿದೆ. ಮಂಗಳವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಇದೆ.

22 ವರ್ಷದ ಸವಿತಾ ಪಾರ್ಮರ್ ಸಂಬಂಧಿಕರು ಸವಿತಾ ಮೃತಪಟ್ಟಿರುವ ಬಗ್ಗೆ ಖಚಿತಪಡಿಸಿದ್ದಾರೆ. 3 ವರ್ಷಗಳ ಹಿಂದೆ ಸವಿತಾ ಅವರ ವಿವಾಹ ಇಂದರ್ ಸಿಂಗ್ ಪರ್ಮಾರ್ ಪುತ್ರ ದೇವರಾಜ್ ಸಿಂಗ್‌ ಜೊತೆ ನಡೆದಿತ್ತು.

Mdhya Pradesh Ministers Daughter In Law Found Dead

ಆತ್ಮಹತ್ಯೆಗೆ ಕಾರಣ ಏನೂ ಎಂಬುದು ತಿಳಿದುಬಂದಿಲ್ಲ. ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಪೊಲೀಸರ ತನಿಖೆಯ ಬಳಿಕ ಕಾರಣ ತಿಳಿಯಲಿದೆ.

ಸೊಸೆ ಸಾವನ್ನಪ್ಪಿದ ಸಮಯದಲ್ಲಿ ಸಚಿವ ಇಂದರ್ ಸಿಂಗ್‌ ಪರ್ಮಾರ್ ರಾಜಧಾನಿ ಭೋಪಾಲ್‌ನಲ್ಲಿದ್ದರು. ಸವಿತಾ ಪರ್ಮಾರ್ ಪತಿ ದೇವರಾಜ್ ಸಿಂಗ್ ಮೊಹಮ್ಮದ್ ಖೇರಾದಲ್ಲಿ ಸಂಬಂಧಿಯೊಬ್ಬರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

ಸವಿತಾ ಪರ್ಮಾರ್ ಮೃತದೇಹದ ಬಳಿ ಯಾವುದೇ ಡೆತ್‌ ನೋಟ್‌ ಕಂಡುಬಂದಿಲ್ಲ. ಘಟನೆ ವಿಚಾರ ತಿಳಿಯುತ್ತಿದ್ದಂತೆ ಸಚಿವ ಇಂದರ್ ಸಿಂಗ್ ಪರ್ಮಾರ್ ಮತ್ತು ಸವಿತಾ ಪತಿ ದೇವರಾಜ್ ಸಿಂಗ್ ಮನೆಗೆ ವಾಪಸ್ ಆದರು.

ಸವಿತಾ ಪರ್ಮಾರ್ ಮೃತದೇಹವನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಶವ ಹಸ್ತಾಂತರ ಮಾಡಲಾಗುತ್ತದೆ.

COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

English summary
Madhya Pradesh education minister Inder Singh Parmar daughter-in-law Savita Parmar found dead at home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X