ತಂದೆ ಮಗಳನ್ನೇ ಮಾರಿದ, ಆತ ಅತ್ಯಾಚಾರ ಮಾಡಿ ಮನೆಗೆ ಕಳುಹಿಸಿದ

ಭೋಪಾಲ್, ಮೇ 20: ಮೂರು ದಿಗಳ ಕಾಲ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಮನೆಗೆ ಕಳುಹಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಹಣದ ಆಸೆಗಾಗಿ ಕುಡುಕ ತಂದೆ ಮಗಳನ್ನೇ 50 ಸಾವಿರ ರೂ ಗೆ ಮಾರಾಟ ಮಾಡಿದ್ದ, ಬಾಲಕಿ ಮೇಲೆ ನಿರಂತರ ಅತ್ಯಾಚಾರ ವೆಸಗಿದ್ದ ವ್ಯಕ್ತಿ ಬಾಲಕಿ ಅಳುವನ್ನೇ ನಿಲ್ಲಿಸದ ಕಾರಣ ಆಕೆಯನ್ನು ಮನೆಗೆ ತಂದು ಬಿಟ್ಟಿದ್ದಾನೆ.

ಗಂಡನ ಕುಡಿತದ ಚಟದಿಂದ ಬೇಸತ್ತು ಬಾಲಕಿಯ ತಾಯಿ ಬೇರೆ ಮನೆಯಲ್ಲಿ ವಾಸವಿದ್ದಳು. ತಾಯಿಗೆ ವಿಷಯ ತಿಳಿಸದೆ ಮಗಳನ್ನು ಮಾರಾಟ ಮಾಡಿದ್ದ. ಸಂತ್ರಸ್ತೆ ತಂದೆಯ ಮೇಲೆ ಪೊಲೀಸರಿಗೆ ದೂರು ನೀಡಿದ್ದಾಳೆ.

Man sells 11-year-old daughter victim repeatedly raped for three days

ತಂದೆ ಯಾವುದೋ ವ್ಯಕ್ತಿಯನ್ನು ತೋರಿಸಿ ಆತನೊಂದಿಗೆ ವಿವಾಹವಾಗು ಎಂದಿದ್ದ, ದೇವಸ್ಥಾನಕ್ಕೆ ಕರೆದೊಯ್ದು ಬಲವಂತವಾಗಿ ತಾಳಿ ಕಟ್ಟಿದ್ದರು. 50 ಸಾವಿರ ರೂಗೆ ನನ್ನನ್ನು ಮಾರಾಟ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಬಳಿಕ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿ ಮೂರು ದಿನಗಳ ಕಾಲ ನಿರಂತರ ಅತ್ಯಾಚಾರವೆಸಿಗಿದ್ದ, ಯಾರೋ ಆಕೆಯ ತಾಯಿಗೆ ಮಗಳ ಮದುವೆಯ ವಿಷಯ ತಿಳಿಸಿದ್ದಾರೆ. ತಾಯಿಯು ತಕ್ಷಣವೇ ಅಲ್ಲಿಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.

ನಾನು ಆಕೆಯನ್ನು ನೋಡಿದಾಗ ಅವಳು ಮದುವೆಯ ಸೀರೆಯಲ್ಲೇ ಇದ್ದಳು, ಆಕೆಗಿಂತ ಮೂರು ಪಟ್ಟು ಹೆಚ್ಚು ವರ್ಷವಾಗಿರುವ ಆತನೊಂದಿಗೆ ಬಲವಂತವಾಗಿ ವಿವಾಹ ಮಾಡಿಸಿದ್ದಾರೆ ಎಂದು ಪೊಲೀಸರಿಗೆ ಬಾಲಕಿಯ ತಾಯಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+