ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: ಆಸ್ಪತ್ರೆಯ ಬೆಡ್ ಮೇಲೆ ನಾಯಿಯ ವಿಡಿಯೋ ವೈರಲ್- ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

|
Google Oneindia Kannada News

ಭೋಪಾಲ್ ಸೆಪ್ಟೆಂಬರ್ 17: ಮಧ್ಯಪ್ರದೇಶದ ರತ್ಲಾಮ್‌ ಜಿಲ್ಲೆಯಿಂದ ಆರೋಗ್ಯ ವ್ಯವಸ್ಥೆಯ ದುಸ್ಥಿತಿಯನ್ನು ತೋರಿಸುವ ವಿಡಿಯೋವೊಂದು ಹೊರಬಿದ್ದಿದೆ. ರತ್ಲಾಮ್‌ನ ಸರ್ಕಾರಿ ಆಸ್ಪತ್ರೆಯ ಒಳಗೆ ಬೀದಿನಾಯಿಯೊಂದು ನುಗ್ಗಿದ್ದು ರೋಗಿಗಳ ಬೆಡ್ ಮೇಲೆ ಮಲಗಿರುವುದು ಕಂಡುಬಂದಿದೆ. ಇದು ರಾಜ್ಯದಲ್ಲಿನ ಹದಗೆಟ್ಟ ಆರೋಗ್ಯ ವ್ಯವಸ್ಥೆಯ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಭಾರತೀಯ ಜನತಾ ಪಕ್ಷದ ಸರ್ಕಾರವನ್ನು ದೂಷಿಸಲು ಪ್ರೇರೇಪಿಸಿದೆ.

ಶುಕ್ರವಾರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಈ ವಿಡಿಯೋ ಮೂಲಕ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಗುರಿಯಾಗಿಸಲು ಆರಂಭಿಸಿದೆ. ಈ ವಿಡಿಯೋ ಮೂಲಕ ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಹದಗೆಟ್ಟಿರುವುದಕ್ಕೆ ಬಿಜೆಪಿ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ. ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋವನ್ನು ಶೇರ್ ಮಾಡಿರುವ ನರೇಂದ್ರ ಸಲೂಜಾ, ಬಿಜೆಪಿ ಸರ್ಕಾರದ ಅಡಿಯಲ್ಲಿ ರಾಜ್ಯದಲ್ಲಿ ನಾಯಿಗಳು ಚೆನ್ನಾಗಿ ನಿದ್ದೆ ಮಾಡುತ್ತಿದ್ದರೆ, ರೋಗಿಗಳು ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದಾರೆ. ಈ ವಿಡಿಯೋ ಇಲ್ಲಿನ ಅಲೋಟ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯದ್ದು ಎಂದು ಸಲೂಜಾ ಹೇಳಿಕೊಂಡಿದ್ದಾರೆ.

ಈ ಚಿತ್ರವು ಆಸ್ಪತ್ರೆಯ ಸ್ಥಿತಿಯನ್ನು ತೋರಿಸುತ್ತದೆ. ವಿಡಿಯೊಗೆ ಸಂಬಂಧಿಸಿದಂತೆ, ರತ್ಲಾಮ್‌ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಪ್ರಭಾಕರ್ ನಾನಾವೇರ್ ಅವರು ಪಿಟಿಐಗೆ ಮಾತನಾಡಿ, ರಜೆಯಲ್ಲಿರುವುದರಿಂದ ಘಟನೆಯ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.

Madhya Pradesh: Video of a dog on a hospital bed goes viral

ಈ ವಿಡಿಯೊ ರತ್ಲಾಮ್‌ನ ಅಲೋಟ್ ಸರ್ಕಾರಿ ಆಸ್ಪತ್ರೆಯಲ್ಲಿದ್ದು, ಅಲ್ಲಿ ನಾಯಿ ರೋಗಿಗಳ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತಿದೆ. ಅಲೋಟ್‌ನಲ್ಲಿರುವ ಈ ಆಸ್ಪತ್ರೆಯ ದುಸ್ಥಿತಿ ಯಾರಿಂದಲೂ ಮರೆಯಾಗಿಲ್ಲ. ಒಬ್ಬ ವೈದ್ಯರ ಆಧಾರದ ಮೇಲೆ ಇಡೀ ಆಸ್ಪತ್ರೆ ನಡೆಯುತ್ತಿದೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಇಲ್ಲಿಂದ ಜಿಲ್ಲಾ ಕೇಂದ್ರಕ್ಕೆ ರೋಗಿಗಳನ್ನು ರೆಫರ್ ಮಾಡಲಾಗುತ್ತದೆ.

English summary
A video has surfaced from Madhya Pradesh's Ratlam district showing the poor health system. A stray dog ​​was found inside a government hospital in Ratlam and was found lying on the patient's bed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X