ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ : ರಾಜೀನಾಮೆ ನೀಡಿದ 22 ಶಾಸಕರಿಗೆ ಸ್ಪೀಕರ್ ನೋಟಿಸ್

|
Google Oneindia Kannada News

ಭೋಪಾಲ್, ಮಾರ್ಚ್ 12 : ಮಧ್ಯಪ್ರದೇಶದ ರಾಜಕೀಯ ಹೈಡ್ರಾಮಕ್ಕೆ ಇನ್ನೂ ತೆರೆ ಬಿದ್ದಿಲ್ಲ. ರಾಜೀನಾಮೆ ನೀಡಿರುವ 22 ಕಾಂಗ್ರೆಸ್ ಶಾಸಕರಿಗೆ ಸ್ಪೀಕರ್ ನೋಟಿಸ್ ನೀಡಿದ್ದಾರೆ. ಶುಕ್ರವಾರ ತಮ್ಮ ಮುಂದೆ ಖುದ್ದಾಗಿ ಹಾಜರಾಗಬೇಕು ಎಂದು ಸೂಚನೆ ನೀಡಿದ್ದಾರೆ.

ವಿಧಾನಸಭೆ ಸ್ಪೀಕರ್ ಎನ್. ಪಿ. ಪ್ರಜಾಪತಿ ರಾಜೀನಾಮೆ ನೀಡಿರುವ ಎಲ್ಲಾ ಶಾಸಕರಿಗೆ ನೋಟಿಸ್ ನೀಡಿದ್ದಾರೆ. ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದರೂ ಅಥವ ಯಾರದ್ದಾದರೂ ಒತ್ತಡವಿತ್ತೋ? ಎಂದು ಖುದ್ದಾಗಿ ಹಾಜರಾಗಿ ವಿವರಣೆ ನೀಡುವಂತೆ ತಿಳಿಸಿದ್ದಾರೆ.

ಮಧ್ಯಪ್ರದೇಶ: ಮಹಾರಾಜರ ದಿನ ಹೋದವು, ಸರ್ಕಾರ ಉಳಿಯಲಿದೆ!ಮಧ್ಯಪ್ರದೇಶ: ಮಹಾರಾಜರ ದಿನ ಹೋದವು, ಸರ್ಕಾರ ಉಳಿಯಲಿದೆ!

ರಾಜ್ಯದ ಪ್ರತಿಪಕ್ಷ ಮಾರ್ಚ್ 16ರಂದು ಮುಖ್ಯಮಂತ್ರಿ ಕಮಲನಾಥ್ ಬಹುಮತ ಸಾಬೀತು ಮಾಡಬೇಕು ಎಂದು ಒತ್ತಾಯಿಸಿದೆ. ಆದರೆ, ಕಾಂಗ್ರೆಸ್ 22 ಶಾಸಕರ ರಾಜೀನಾಮೆ ಪ್ರಕರಣ ಬಗೆಹರಿಯುವ ತನಕ ಬಹುಮತ ಸಾಬೀತು ಪಡಿಸುವುದಿಲ್ಲ ಎಂದು ಹೇಳಿದೆ.

ಮಧ್ಯಪ್ರದೇಶ ಹೈಡ್ರಾಮ; ರಾಜೀನಾಮೆಗೆ ಸಿದ್ದವಾದ 25 ಕಾಂಗ್ರೆಸ್‌ ಶಾಸಕರುಮಧ್ಯಪ್ರದೇಶ ಹೈಡ್ರಾಮ; ರಾಜೀನಾಮೆಗೆ ಸಿದ್ದವಾದ 25 ಕಾಂಗ್ರೆಸ್‌ ಶಾಸಕರು

ಮಧ್ಯಪ್ರದೇಶ ವಿಧಾನಸಭೆ ಒಟ್ಟು ಸದಸ್ಯ ಬಲ 230. ಬಹುಮತ ಸಾಬೀತು ಮಾಡಲು ಬೇಕಾದ ಮ್ಯಾಜಿಕ್ ನಂಬರ್ 115. ಕಾಂಗ್ರೆಸ್ 114 ಸದಸ್ಯ ಬಲ ಹೊಂದಿದೆ. ಇವರಲ್ಲಿ 22 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ.

ಮಧ್ಯಪ್ರದೇಶ ರಾಜಕೀಯ ಹೈಡ್ರಾಮ; ಸಿದ್ದರಾಮಯ್ಯಗೆ ಕರೆ ಮಧ್ಯಪ್ರದೇಶ ರಾಜಕೀಯ ಹೈಡ್ರಾಮ; ಸಿದ್ದರಾಮಯ್ಯಗೆ ಕರೆ

6 ಸಚಿವರಿಗೂ ನೋಟಿಸ್

6 ಸಚಿವರಿಗೂ ನೋಟಿಸ್

ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, "ಸ್ಪೀಕರ್ 6 ಶಾಸಕರು ಸೇರಿ ಎಲ್ಲಾ ರಾಜೀನಾಮೆ ನೀಡಿರುವ ಶಾಸಕರಿಗೆ ನೋಟಿಸ್ ನೀಡಿದ್ದಾರೆ. ಯಾವುದೇ ಶಾಸಕರು ಸ್ಪೀಕರ್ ಖುದ್ದಾಗಿ ಭೇಟಿಯಾಗಿ ರಾಜೀನಾಮೆ ಸಲ್ಲಿಸಿಲ್ಲ" ಎಂದು ಹೇಳಿದರು.

ಕಮಲನಾಥ್ ಸರ್ಕಾರ ಸಂಕಷ್ಟದಲ್ಲಿ

ಕಮಲನಾಥ್ ಸರ್ಕಾರ ಸಂಕಷ್ಟದಲ್ಲಿ

ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷ ತೊರೆದ ಬಳಿಕ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. 19 ಶಾಸಕರು ಜ್ಯೋತಿರಾದಿತ್ಯ ಸಿಂಧಿಯಾ ಜೊತೆಗೆ ರಾಜೀನಾಮೆ ನೀಡಿದ್ದಾರೆ. ಇದುವರೆಗೂ ಒಟ್ಟು 22 ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ.

ವಿಧಾನಸಭೆ ಬಲಾಬಲ

ವಿಧಾನಸಭೆ ಬಲಾಬಲ

ಮಧ್ಯಪ್ರದೇಶ ವಿಧಾನಸಭೆಯ ಒಟ್ಟು ಸದಸ್ಯ ಬಲ 230. ಬಹುಮತ ಸಾಬೀತು ಮಾಡಲು ಬೇಕಾದ ಮ್ಯಾಜಿಕ್ ನಂಬರ್ 115. ಕಾಂಗ್ರೆಸ್ 114 ಸದಸ್ಯ ಬಲ ಹೊಂದಿದೆ (22 ಶಾಸಕರು ರಾಜೀನಾಮೆ ನೀಡಿದ್ದಾರೆ). ಬಿಜೆಪಿ 109 ಸದಸ್ಯ ಬಲ ಹೊಂದಿದೆ. ಇತರೆ ಶಾಸಕರ ಸಂಖ್ಯೆ 7. ಕಮಲನಾಥ್ ಎಸ್‌ಪಿ, ಬಿಎಸ್‌ಪಿ ಮತ್ತು ಪಕ್ಷೇತರ ಶಾಸಕರ ಬೆಂಬಲ ಪಡೆದು ಸರ್ಕಾರ ರಚಿಸಿದ್ದಾರೆ.

ಸರ್ಕಾರ ಉಳಿಸಿಕೊಳ್ಳಲು ಕಸರತ್ತು

ಸರ್ಕಾರ ಉಳಿಸಿಕೊಳ್ಳಲು ಕಸರತ್ತು

ಕಾಂಗ್ರೆಸ್‌ನ 19 ಶಾಸಕರು ಬೆಂಗಳೂರಿನ ದೇವನಹಳ್ಳಿ ಬಳಿಯ ನಂದಿಬೆಟ್ಟದಲ್ಲಿರುವ ಪ್ರೇಸ್ಟಿಜ್ ಗಾಲ್ಫ್ ಶೇರ್ ರೆಸಾರ್ಟ್‌ನಲ್ಲಿದ್ದಾರೆ. ಇವರ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ಬಂದಿದ್ದು, ಆಗ ಪೊಲೀಸರು ತಡೆದರು. ಇದರಿಂದಾಗಿ ಕಾಂಗ್ರೆಸ್ ನಾಯಕರು, ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

English summary
Madhya Pradesh assembly speaker N.P.Prajapati issued notices to 22 Congress MLA's who have resigned. Opposition party BJP demand for floor test in the assembly on March 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X