• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ರಾಹುಲ್‌ ಪ್ರಕಾರ ಜಿಡಿಪಿ ಎಂದರೆ ಗಾಂಧಿ, ದಿಗ್ವಿಜಯ್‌, ಪಿ. ಚಿದಂಬರಂ': ನರೋತ್ತಮ್ ವ್ಯಂಗ್ಯ

|
Google Oneindia Kannada News

ಭೋಪಾಲ್‌, ಸೆಪ್ಟೆಂಬರ್‌ 02: ಜಿಡಿಪಿಯ ಬಗ್ಗೆ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಯ ವಿರುದ್ದ ವಾಗ್ದಾಳಿ ನಡೆಸಿರುವ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಜಿಡಿಪಿಯ ಬಗ್ಗೆ ಹೊಸ ವಿವರಣೆ ನೀಡಿದ್ದಾರೆ. ಜಿಡಿಪಿ ಮತ್ತು ಇಂಧನ ದರ ಏರಿಕೆಯಾದ ವಿಚಾರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಹಿನ್ನೆಲೆ ಮಧ್ಯಪ್ರದೇಶ ಗೃಹಸಚಿವ ನರೋತ್ತಮ್ ಮಿಶ್ರಾ ಕಿಡಿ ಕಾರಿದ್ದಾರೆ.

ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಪ್ರಕಾರ, "ಜಿಡಿಪಿ ಏರಿಕೆ ಎಂದರೆ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ," ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

'ಜಿಡಿಪಿ' ಏರಿಕೆ ಎಂದರೆ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ದರ ಹೆಚ್ಚಳ: ರಾಹುಲ್ ಗಾಂಧಿ'ಜಿಡಿಪಿ' ಏರಿಕೆ ಎಂದರೆ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ದರ ಹೆಚ್ಚಳ: ರಾಹುಲ್ ಗಾಂಧಿ

"ಜಿಡಿಪಿ ಏರುತ್ತಿದೆ ಎಂದು ಮೋದಿ ಜೀ ಹೇಳುತ್ತಲೇ ಇದ್ದಾರೆ, ಜಿಡಿಪಿ ಮೇಲ್ಮುಖವಾಗಿದೆ ಎಂದು ಹಣಕಾಸು ಸಚಿವರು ಹೇಳುತ್ತಾರೆ. ಜಿಡಿಪಿ- ಇದರ ಅರ್ಥವೇನೆಂದು ನನಗೆ ಈಗ ಅರ್ಥವಾಯಿತು. ಇದರ ಅರ್ಥ 'ಗ್ಯಾಸ್- ಡೀಸೆಲ್- ಪೆಟ್ರೋಲ್' ಏರಿಕೆ. ಅವರಿಗೆ ಈ ಗೊಂದಲವಿದೆ,'' ಎಂದು ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದ ಮಧ್ಯಪ್ರದೇಶ ಗೃಹಸಚಿವ ನರೋತ್ತಮ್ ಮಿಶ್ರಾ, "ರಾಹುಲ್‌ ಗಾಂಧಿಗೆ ಜಿಡಿಪಿಯ ಅರ್ಥ ಏನೆಂಬುವುದು ತಿಳಿದಿಲ್ಲ. ರಾಹುಲ್‌ ಗಾಂಧಿ ಪ್ರಕಾರ, ಜಿ ಎಂದರೆ ಗಾಂಧಿ ಕುಟುಂಬ, ಡಿ ಎಂದರೆ ದಿ‌ಗ್ವಿಜಯ್‌ ಸಿಂಗ್‌ ಹಾಗೂ ಪಿ ಎಂದರೆ ಪಿ ಚಿದಂಬರಂ (ಮಾಜಿ ಹಣಕಾಸು ಸಚಿವ) ಎಂದುಕೊಂಡಿದ್ದಾರೆ," ಎಂದು ಹೇಳಿದ್ದಾರೆ. ನರೋತ್ತಮ್ ಮಿಶ್ರಾ ಜಿ ಎಂದರೆ ಗಾಂಧಿ ಎನ್ನುವ ಮೂಲಕ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ರಾಹುಲ್‌ ಗಾಂಧಿ ಕಾಲೆಳೆದಿದ್ದಾರೆ. ಹಾಗೆಯೇ ರಾಹುಲ್‌ ಗಾಂಧಿಗೆ ಜಿಡಿಪಿ ಬಗ್ಗೆ ಏನು ತಿಳಿದಿದೆ ಎಂದು ಪ್ರಶ್ನಿಸಿದೆ.

ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ. 21ರಷ್ಟು ಜಿಡಿಪಿ ಏರಿಕೆಯಾಗಿದೆ ಎಂದು ಸರ್ಕಾರ ಹೇಳಿದೆ. ಜಿಡಿಪಿ ಏರಿಕೆಗೆ ರಾಹುಲ್ ಗಾಂಧಿ ಹೊಸ ಪರಿಕಲ್ಪನೆ ನೀಡಿದ್ದಾರೆ. "ಜಿಡಿಪಿ ಏರುತ್ತಿದೆ ಎಂದು ಮೋದಿ ಜೀ ಹೇಳುತ್ತಲೇ ಇದ್ದಾರೆ, ಇದರ ಅರ್ಥ 'ಗ್ಯಾಸ್- ಡೀಸೆಲ್- ಪೆಟ್ರೋಲ್' ಏರಿಕೆ," ಎಂದು ಹೇಳಿದ್ದಾರೆ. "2014ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರವನ್ನು ತೊರೆದಾಗ, ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಪ್ರತಿ ಸಿಲಿಂಡರ್‌ಗೆ 410 ರೂ. ಮಾತ್ರ ಆಗಿತ್ತು," ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ಹರಿಯಾಣ ರೈತರ ಮೇಲೆ ಲಾಠಿ ಚಾರ್ಜ್: 'ಮತ್ತೆ ರಕ್ತ ಹರಿದಿದೆ' ಎಂದ ರಾಹುಲ್‌ ಗಾಂಧಿಹರಿಯಾಣ ರೈತರ ಮೇಲೆ ಲಾಠಿ ಚಾರ್ಜ್: 'ಮತ್ತೆ ರಕ್ತ ಹರಿದಿದೆ' ಎಂದ ರಾಹುಲ್‌ ಗಾಂಧಿ

"ಒಂದೆಡೆ ನೋಟು ರದ್ದತಿ ಮತ್ತು ಇನ್ನೊಂದೆಡೆ ಹಣ ಗಳಿಕೆ ಇದೆ. ಯಾರ ನೋಟು ರದ್ದತಿ ನಡೆಯುತ್ತಿದೆ ಎಂದರೆ ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಮತ್ತು ಅನೌಪಚಾರಿಕ ವಲಯ, MSMEಗಳು, ಗುತ್ತಿಗೆ ಕಾರ್ಮಿಕರು, ಸಂಬಳದ ವರ್ಗ ಮತ್ತು ಪ್ರಾಮಾಣಿಕ ಕೈಗಾರಿಕೋದ್ಯಮಿಗಳು. ಯಾರು ಹಣ ಗಳಿಕೆ ಮಾಡುತ್ತಿದ್ದಾರೆ ಎಂದರೆ ಪ್ರಧಾನಿ ನರೇಂದ್ರ ಮೋದಿಯವರ ನಾಲ್ಕೈದು ಸ್ನೇಹಿತರದ್ದು ಮಾತ್ರ," ಎಂದು ವ್ಯಂಗ್ಯವಾಗಿ ಟೀಕಿಸಿದ್ದರು. "ರೈತರು, ಸಂಬಳ ಪಡೆಯುವ ವರ್ಗ ಮತ್ತು ಕಾರ್ಮಿಕರಿಗೆ ನೋಟು ರದ್ದತಿ ಮಾಡಲಾಗುತ್ತಿದ್ದರೆ, ಇತ್ತ ಪ್ರಧಾನಿ ನರೇಂದ್ರ ಮೋದಿ ಕೆಲವು ಕೈಗಾರಿಕೋದ್ಯಮಿ ಸ್ನೇಹಿತರಿಗೆ ಹಣ ಗಳಿಸುವಂತೆ ಮಾಡುತ್ತಿದ್ದಾರೆ," ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
Madhya Pradesh Home Minister Narottam Mishra took a jibe at the Congress party and gave a new definition of Gross Domestic Product (GDP) for the Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X