ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್ ಕಾರ್ಯಕರ್ತನ ಹತ್ಯೆಗೆ ಟ್ವಿಸ್ಟ್: 'ಕೊಲೆಯಾದವ'ನೇ ಕೊಂದವ?

|
Google Oneindia Kannada News

ರಟ್ಲಂ, ಜನವರಿ 29: ಮಧ್ಯಪ್ರದೇಶದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಕಳೆದ ವಾರ ನಡೆದ ಆರೆಸ್ಸೆಸ್ ಕಾರ್ಯಕರ್ತನ ಪ್ರಕರಣ ದೊಡ್ಡ ತಿರುವು ಪಡೆದುಕೊಂಡಿದೆ.

ಹಲವು ಗಾಯಗಳಿಂದ ಮತ್ತು ಸುಟ್ಟ ಮುಖದ ಗುರುತು ಸಿಗದ ಸ್ಥಿತಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತ ಹಿಮ್ಮತ್ ಪಾಟೀದಾರ್ (36) ಅವರ ಮೃತದೇಹ ಪತ್ತೆಯಾಗಿತ್ತು.

ಆರ್ ಎಸ್ಎಸ್ ಮುಖಂಡರ ಹತ್ಯೆಗೆ ಸಂಚು ಪ್ರಕರಣ: ಬಂಧಿತರು ಬಾಯ್ಬಿಟ್ಟ ರಹಸ್ಯ!ಆರ್ ಎಸ್ಎಸ್ ಮುಖಂಡರ ಹತ್ಯೆಗೆ ಸಂಚು ಪ್ರಕರಣ: ಬಂಧಿತರು ಬಾಯ್ಬಿಟ್ಟ ರಹಸ್ಯ!

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಆರೆಸ್ಸೆಸ್ ಕಾರ್ಯಕರ್ತರ ಕೊಲೆಗಳು ಸಂಭವಿಸುತ್ತಿರುವುದು ಬಿಜೆಪಿಯ ಪ್ರತಿಭಟನೆಗೆ ಕಾರಣವಾಗಿದೆ.

ಆದರೆ, ಡಿಎನ್‌ಎ ಪರೀಕ್ಷೆ ವರದಿ ಹಿಮ್ಮತ್ ಹತ್ಯೆಯ ಪ್ರಕರಣಕ್ಕೆ ಭಾರಿ ಟ್ವಿಸ್ಟ್ ನೀಡಿದೆ.

madhya pradesh big twist in rss woker himmat patidar murder case

ಈಗ ಸಿಕ್ಕಿರುವ ಮೃತದೇಹ ಹಿಮ್ಮತ್ ಅವರದ್ದಲ್ಲ ಎಂಬುದು ತಿಳಿದುಬಂದಿದ್ದು, ಈ ಕೊಲೆ ಮಾಡಿರುವುದು ಹಿಮ್ಮತ್ ಅವರೇ ಇರಬೇಕು ಎಂಬ ಶಂಕೆ ವ್ಯಕ್ತವಾಗಿದೆ.

ರಟ್ಲಂನಲ್ಲಿರುವ ಹಿಮ್ಮತ್ ಅವರಿಗೆ ಸೇರಿದ ಹೊಲದಲ್ಲಿ ದೊರೆತ ಮೃತದೇಹ ಅವರ ಉದ್ಯೋಗಿ ಮದನ್ ಮಾಳವೀಯ ಅವರದ್ದು ಎಂಬುದು ಗೊತ್ತಾಗಿದೆ. ಹಿಮ್ಮತ್ ಅವರಂತೆಯೇ ಕಾಣುವಂತೆ ಅವರಿಗೆ ಉಡುಪು ತೊಡಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಹಿಮ್ಮತ್ ಜೀವಂತ ಇರಬಹುದು ಎಂದು ಅವರ ಹುಡುಕಾಟ ನಡೆಯುತ್ತಿದೆ.

ಈ ಹತ್ಯೆಗೆ ಕಾರಣವೇನು?
ಮೂಲಗಳ ಪ್ರಕಾರ ಹಿಮ್ಮತ್ ಕೊಲೆಯ ನಾಟಕಕ್ಕೆ ಕಾರಣ ವಿಮೆ ಹಣ. ಭಾರಿ ಸಾಲದಲ್ಲಿದ್ದರುವ ಹಿಮ್ಮತ್, ಜೀವ ವಿಮೆಯಿಂದ 20 ಲಕ್ಷ ಪಡೆದುಕೊಳ್ಳುವ ಬಯಕೆಯೊಂದಿಗೆ ಈ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಮಾರಕಾಸ್ತ್ರ ತಯಾರಿಕೆಗೆ ಆರೆಸ್ಸೆಸ್ ನಿಂದ ತರಬೇತಿ: ಮ.ಪ್ರ.ಸಚಿವ ಮಾರಕಾಸ್ತ್ರ ತಯಾರಿಕೆಗೆ ಆರೆಸ್ಸೆಸ್ ನಿಂದ ತರಬೇತಿ: ಮ.ಪ್ರ.ಸಚಿವ

ಜನವರಿ 23ರಂದು ಹಿಮ್ಮತ್ ತಂದೆ ಪೊಲೀಸರಿಗೆ ತಮ್ಮ ಮಗನ ಸಾವಿನ ಬಗ್ಗೆ ಮಾಹಿತಿ ನೀಡಿದ್ದರು. ಹತ್ಯೆ ನಡೆದ ಸ್ಥಳಕ್ಕೆ ಪೊಲೀಸರು, ವಿಧಿ ವಿಜ್ಞಾನ ತಜ್ಞರು ಮತ್ತು ಶ್ವಾನದಳದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಆಳವಾದ ತನಿಖೆ ನಡೆಸುವ ಸಲುವಾಗಿ ಐದು ತಂಡಗಳನ್ನು ನಿಯೋಜಿಸಲಾಗಿತ್ತು.

ಹಿಮ್ಮತ್ ಅವರ ಐಡಿ ಕಾರ್ಡ್‌ಗಳು, ಆಧಾರ್, ಎಟಿಎಂ ಕಾರ್ಡ್, ಅವರ ಬ್ಯಾಂಕ್ ಖಾತೆ, ಸಾಲಗಳು ಮತ್ತು ವಿಮೆಯ ವಿವರಗಳನ್ನು ಹೊಂದಿರುವ ಡೈರಿಗಳು ಅಲ್ಲಿ ದೊರೆತಿದ್ದವು. ಮೃತದೇಹದ ಸಮೀಪದಲ್ಲಿ ರಕ್ತದ ಕಲೆಗಳಿದ್ದ ಶೂ ಮತ್ತು ಬೆಲ್ಟ್‌ಗಳು ಪತ್ತೆಯಾಗಿದ್ದವು. ಸ್ವಲ್ಪ ದೂರದಲ್ಲಿ ಅವರ ಬೈಕ್ ನಿಲ್ಲಿಸಲಾಗಿತ್ತು.

ತನಿಖೆ ನಡೆಸಿದ ಪೊಲೀಸರಿಗೆ ಹಿಮ್ಮತ್ ತೋಟದಲ್ಲಿ ಕೆಲಸ ಮಾಡುವ ಮದನ್ ಮಾಳವೀಯ ಎಂಬಾತ ಕೊಲೆಯ ಹಿಂದಿನ ದಿನವಾದ ಜನವರಿ 22ರಿಂದ ನಾಪತ್ತೆಯಾಗಿರುವುದು ಗೊತ್ತಾಗಿತ್ತು.

ಹಿಂದೂ ನಾಯಕರಿಗೆ ಸೂಕ್ತ ಭದ್ರತೆ ಕಲ್ಪಿಸಿ: ನಳಿನ್ ಕುಮಾರ್ ಕಟೀಲ್ ಹಿಂದೂ ನಾಯಕರಿಗೆ ಸೂಕ್ತ ಭದ್ರತೆ ಕಲ್ಪಿಸಿ: ನಳಿನ್ ಕುಮಾರ್ ಕಟೀಲ್

ಮದನ್‌ಗಾಗಿ ಹುಡುಕಾಟ ಆರಂಭಿಸಿದ ಪೊಲೀಸರಿಗೆ ಕೊಲೆ ನಡೆದ 500 ಮೀಟರ್ ದೂರದಲ್ಲಿ ಮಣ್ಣಾದ ಬಟ್ಟೆ ಮತ್ತು ಶೂಗಳು ಸಿಕ್ಕಿದ್ದವು. ಅವು ಮದನ್‌ಗೆ ಸೇರಿದ್ದೆಂದು ಅವರ ಕುಟುಂಬದವರು ಗುರುತಿಸಿದ್ದರು.

ಹಿಮ್ಮತ್‌ನ ಬೈಕ್ ಫುಟ್ ರೆಸ್ಟ್ ಮೇಲೆ ಇದ್ದ ಶೂ ಅಚ್ಚು ಮದನ್ ಶೂಗೆ ಹೋಲಿಕೆಯಾಗಿತ್ತು. ಆಗ ಪೊಲೀಸರ ಅನುಮಾನ ತೀವ್ರಗೊಂಡಿತ್ತು.

ಹಿಮ್ಮತ್‌ನ ಕಾಲ್ ರೆಕಾರ್ಡ್‌ಗಳನ್ನು ಪರಿಶೀಲಿಸಿದ ಪೊಲೀಸರಿಗೆ ಅದು ಘಟನೆ ನಡೆದ ಬೆಳಿಗ್ಗೆ 4.30ರವರೆಗೂ ಬಳಕೆಯಲ್ಲಿತ್ತು ಮತ್ತು ಬಳಿಕ ಎಲ್ಲವನ್ನೂ ಅಳಿಸಲಾಗಿತ್ತು ಎಂಬುದು ತಿಳಿಯಿತು.

ಮೋಟಾರ್ ಪಂಪ್ ಆನ್ ಮಾಡಲು ಹಿಮ್ಮತ್ ಪ್ರತಿ ರಾತ್ರಿ ಹೊಲಕ್ಕೆ ಬರುತ್ತಿದ್ದರು. ಆದರೆ, ಆ ರಾತ್ರಿ ಪಂಪ್ ಆನ್ ಆಗಿರಲಿಲ್ಲ. ಅಲ್ಲದೆ ದೇಹದ ಬಳಿ ಇದ್ದ ಡೈರಿಯಲ್ಲಿ ತನ್ನ ಕುಟುಂಬಕ್ಕೆ ಸಹಾಯ ಮಾಡುವ ಸಲುವಾಗಿ ವಿವರ ಬರೆದಿದ್ದಿಟ್ಟಿದ್ದರು ಎನ್ನಲಾಗಿದೆ.

ಮೃತದೇಹದ ಡಿಎನ್‌ಎ ಮಾದರಿಯನ್ನು ಪರಿಶೀಲಿಸಿದ ತಜ್ಞರು ಅದು ಮದನ್ ಅವರ ದೇಹ ಎಂದು ಖಚಿತಪಡಿಸಿದ್ದಾರೆ. ಈಗ ಹಿಮ್ಮತ್‌ಗಾಗಿ ಬಲೆಬೀಸಿದ್ದು, ಕೊಲೆಯ ಹಿಂದಿನ ರಹಸ್ಯಗಳನ್ನು ಕೆದಕುವ ಪ್ರಯತ್ನದಲ್ಲಿದ್ದಾರೆ.

ಹಿಮ್ಮತ್ ಕಳೆದ ವರ್ಷದ ಡಿ. 17ರಂದು 20 ಲಕ್ಷ ರೂ.ಗೆ ಜೀವ ವಿಮೆ ಮಾಡಿಸಿದ್ದರು. ಸುಮಾರು 10 ಲಕ್ಷ ರೂಪಾಯಿಯ ಸಾಲದ ಹೊರೆ ಅವರ ಮೇಲಿತ್ತು. ಅದನ್ನು ತೀರಿಸಲು ಸಿನಿಮೀಯ ರೀತಿಯಲ್ಲಿ ಈ ಕೃತ್ಯ ಎಸಗಿ ಕಣ್ಮರೆಯಾಗಿರಬಹುದು ಎಂದು ಶಂಕಿಸಲಾಗಿದೆ.

English summary
DNA test has revealed that the body found with multiple wounds and face burnts was not RSS worker Himmat Paridar. Police suspected he to be the killer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X