ಮುಚ್ಚಿದ ಕೋಣೆಯೊಳಗಿತ್ತು ನಾಲ್ಕು ಮಂದಿಯ ಮೃತದೇಹ
ರೈಸೇನ್, ಜನವರಿ 23: ಒಂದೇ ಕುಟುಂಬದ ನಾಲ್ವರು ನಿಗೂಢ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
12 ತಿಂಗಳ ಮಗು ಸೇರಿ ಒಟ್ಟು ನಾಲ್ಕು ಮಂದಿ ಮೃತದೇಹ ಪತ್ತೆಯಾಗಿದೆ. ಮುಚ್ಚಿದ್ದ ಕೋಣೆಯೊಳಗೆ ನಾಲ್ಕು ಮೃತದೇಹ ದೊರೆತಿದೆ. ರೈಸೇನ್ ಜಿಲ್ಲೆಯ ಮಂಡಿದೀಪ್ ಟೌನ್‌ನ ನಿವಾಸದಲ್ಲಿ ಮಾಲೀಕ ಸಂಜು ಭೂರಿಯ(25) ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಓರ್ವ ಮಹಿಳೆ, ಆಕೆಯ ಮಗ 11 ವರ್ಷದ ಮಗ, 20 ವರ್ಷದ ಮಗಳು ಸೇರಿ 12 ದಿನದ ಮೊಮ್ಮಗುವಿನ ಮೃತದೇಹಗಳು ದೊರಕಿವೆ.

ಸದ್ಯ ಗಂಭೀರ ಸ್ಥಿತಿಯಲ್ಲಿದ್ದವನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾನೆ. ಆತನ ಪತ್ನಿ ಮತ್ತು 12 ದಿನದ ಮಗಳು, 11 ವರ್ಷದ ಆತನ ಹೆಂಡತಿಯ ತಮ್ಮ ಮತ್ತು ಅತ್ತೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದು ಸಾವಿಗೆ ಕಾರಣವನ್ನು ಪತ್ತೆ ಹಚ್ಚುತ್ತಿದ್ದಾರೆ.












Click it and Unblock the Notifications