ಇಂದೋರ್‌ನ ಸೇನಾ ಕಾಲೇಜಿನಲ್ಲಿ 30 ಯೋಧರಿಗೆ ಕೊರೊನಾವೈರಸ್!

ಭೋಪಾಲ್, ಸೆಪ್ಟೆಂಬರ್ 24: ಇಂದೋರ್‌ನ ಮಹೋದಲ್ಲಿ ಇರುವ ಸೇನಾ ಯುದ್ಧ ಕಾಲೇಜಿನ 30 ಯೋಧರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿರುವ ಹಿನ್ನೆಲೆ ಪ್ರತಿಷ್ಠಿತ ಕಾಲೇಜನ್ನು ಬಂದ್ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಮಹೋ ಇಂದೋರ್ ನಗರದಿಂದ 25 ಕಿಲೋಮೀಟರ್ ದೂರದಲ್ಲಿರುವ ಕಂಟೋನ್ಮೆಂಟ್ ಪಟ್ಟಣವಾಗಿದೆ.

"ಸೇನಾ ಕಾಲೇಜಿನಲ್ಲಿ ಸಂಗ್ರಹಿಸಿದ ಒಟ್ಟು ಮಾದರಿಯ ಪೈಕಿ 20 ಅಧಿಕಾರಿಗಳಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿದ್ದು, ಶುಕ್ರವಾರ ಮತ್ತೆ ಐವರಲ್ಲಿ ಕೊವಿಡ್-19 ಸೋಂಕು ಖಾತ್ರಿಯಾಗಿದೆ," ಎಂದು ಕರ್ನಲ್ ಎಕೆ ಮೊಹಾಂತಿ ತಿಳಿಸಿರುವ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಕಾಲೇಜಿನಲ್ಲಿ 30ಕ್ಕೂ ಹೆಚ್ಚು ಮಂದಿಗಯಲ್ಲಿ ಕೊರೊನಾವೈರಸ್ ಸೋಂಕು ಪತ್ತೆಯಾಗಿರುವ ಹಿನ್ನೆಲೆ ತೀವ್ರ ಜಾಗೃತಿ ವಹಿಸಲಾಗಿದೆ. ಎಲ್ಲಾ ಹೊಸ ಪ್ರವೇಶ ಮತ್ತು ನಿರ್ಗಮನಗಳನ್ನು ನಿಷೇಧಿಸಲಾಗಿದ್ದು, ಕಾಲೇಜನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಲಾಗಿದೆ. ಮುಂದಿನ ಆದೇಶದವರೆಗೆ ನಿಷೇಧವು ಜಾರಿಯಲ್ಲಿರುತ್ತದೆ," ಎಂದು ಕರ್ನಲ್ ಮೊಹಂತಿ ಹೇಳಿದ್ದಾರೆ.

Madhya Pradesh: 30 Soldiers Tested Positive For Coronavirus, Army War College in total Lockdown

ಇಂದೋರ್ ಜಿಲ್ಲಾ ಹೆಲ್ತ್ ಬುಲೆಟಿನ್:

ಕೊರೊನಾವೈರಸ್ ಸೋಂಕಿನ ಕುರಿತು ಗುರುವಾರ ರಾತ್ರಿ ಇಂದೋರ್ ಜಿಲ್ಲೆ ಆರೋಗ್ಯ ಅಧಿಕಾರಿಗಳು ಹೊರಡಿಸಿರುವ ವೈದ್ಯಕೀಯ ಬುಲೆಟಿನ್ ನಲ್ಲಿ ಒಟ್ಟು 32 ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 30 ಪ್ರಕರಣಗಳು ಮೆವೋಗೆ ಸೇರಿವೆ ಎಂದು ಗೊತ್ತಾಗಿದೆ. ಕೊವಿಡ್-19 ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಲಾಗಿರುವುದು. ಸೋಂಕಿತರು, ಲಕ್ಷಣವಿಲ್ಲದವರು ಹಾಗೂ ಲಸಿಕೆ ಪಡೆದವರನ್ನು ಪ್ರತ್ಯೇಕವಾಗಿ ಇರಿಸಲಾಗುವುದು ಎಂದು ಇಂದೋರ್ ವೈದ್ಯಕೀಯ ಮತ್ತು ಆರೋಗ್ಯ ಮುಖ್ಯ ಅಧಿಕಾರಿ ಡಾ ಬಿಎಸ್ ಸತಿಯಾ ಹೇಳಿದ್ದಾರೆ. ಗುರುವಾರ ಸಂಜೆ ಮಹೋ ಮಿಲಿಟರಿ ಆಸ್ಪತ್ರೆಗೆ ವೈದ್ಯಕೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಗದಿತ ಶಿಷ್ಟಾಚಾರದಂತೆ ತರಬೇತಿಯಿಂದ ಹಿಂದಿರುಗಿದ 115 ಅಧಿಕಾರಿಗಳನ್ನು ಕ್ವಾರೆಂಟೈನ್ ನಲ್ಲಿ ಇರಿಸಲಾಗಿದ್ದು, ಪರೀಕ್ಷಿಸಲಾಗಿದೆ. ಇಲ್ಲಿಯವರೆಗೆ 60 ಮಾದರಿಗಳನ್ನು ಎಂಜಿಎಂ ಕಾಲೇಜ್ ಇಂದೋರ್‌ನಲ್ಲಿರುವ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

Madhya Pradesh: 30 Soldiers Tested Positive For Coronavirus, Army War College in total Lockdown

ಮಧ್ಯಪ್ರದೇಶ ಪ್ರಚಾರ ವಿಭಾಗ ವಕ್ತಾರರು ಟ್ವೀಟ್‌ನಲ್ಲಿ 30 ಮಿಲಿಟರಿ ಅಧಿಕಾರಿಗಳಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ ಪರೀಕ್ಷಿಸಲಾದ ಮತ್ತಿಬ್ಬರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರು ಇಂದೋರ್ ನಗರದವರು ಎಂದು ಗೊತ್ತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+