ಪ್ರಿ ವೆಡ್ಡಿಂಗ್ ಫೋಟೋ ಶೂಟ್ ನಿಷೇಧಿಸಿದ ಎರಡು ಸಮುದಾಯ!

ಭೋಪಾಲ್, ಡಿಸೆಂಬರ್ 10 : ವಿವಾಹ ಪೂರ್ವ ಪೋಟೋ ಶೂಟ್ ಮಾಡಬಾರದು. ವಿವಾಹದ ಸಂಭ್ರಮದಲ್ಲಿ ಮಹಿಳೆಯರು ನೃತ್ಯ ಮಾಡಬಾರದು ಎಂದು ಎರಡು ಸಮುದಾಯಗಳು ತೀರ್ಮಾನವನ್ನು ತೆಗೆದುಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಭೋಪಾಲ್‌ನ ಜೈನ ಮತ್ತು ಗುಜರಾತಿ ಸಮುದಾಯ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ನಿಷೇಧಿಸಿದೆ. ಸಮುದಾಯದ ಮಹಿಳಾ ಸದಸ್ಯರಿಗೆ ನೃತ್ಯ ತರಬೇತಿ ನೀಡಲು ಪುರುಷರು ಆಗಮಿಸುವಂತಿಲ್ಲ. ಸಮುದಾಯದ ಮಹಿಳೆಯರು ವಿವಾಹದ ಸಮಯದಲ್ಲಿ ನೃತ್ಯ ಮಾಡುವಂತಿಲ್ಲ ಎಂದು ಹೇಳಿದೆ.

ಪ್ರಿ ವೆಡ್ಡಿಂಗ್ ಫೋಟೋ ಶೂಟ್, ವಿವಾಹದ ಸಂಭ್ರಮದಲ್ಲಿ ಮಹಿಳೆಯರು ನೃತ್ಯ ಮಾಡುವುದು ಸಮುದಾಯದ ಸಂಸ್ಕೃತಿಗೆ ವಿರೋಧವಾಗಿದೆ ಎಂದು ಹೇಳಿದ್ದು. ಇವುಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

Jain And Gujarati Samaj Banned Pre Wedding Photo Shoots

ಜೋಡಿಗಳ ವಿವಾಹ ಪೂರ್ವ ಫೋಟೋ ಶೂಟ್ ನಿಷೇಧಿಸಲಾಗಿದೆ. ಈ ಕುರಿತು ಅಧಿಕೃತ ಆದೇಶವನ್ನು ಹೊರಡಿಸಿ ಲಿಖಿತವಾಗಿ ಸಮುದಾಯದ ಎಲ್ಲರಿಗೂ ತಲುಪಿಸಲಾಗುತ್ತದೆ. ಇದನ್ನು ಉಲ್ಲಂಘನೆ ಮಾಡಿದರೆ ಸಮುದಾಯದಿಂದ ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಲಾಗಿದೆ.

ಭೋಪಾಲ್ ಜೈನ ಸಮುದಾಯದ ಅಧ್ಯಕ್ಷ ಪ್ರಮೋದ್ ಹಿಮಾಂಶು ಜೈನ್ ಈ ಕುರಿತು ಹೇಳಿಕೆ ನೀಡಿದ್ದು, "ಸಮುದಾಯದ ಹಿರಿಯರು ಪ್ರಿ ವೆಡ್ಡಿಂಗ್ ಫೋಟೋ ಶೂಟ್‌ ಬಗ್ಗೆ ಅಪಸ್ವರ ಎತ್ತಿದ್ದರು. ಆದ್ದರಿಂದ, ಅದನ್ನು ನಿಷೇಧಿಸಲಾಗಿದೆ" ಎಂದು ಹೇಳಿದ್ದಾರೆ.

ಭೋಪಾಲ್‌ನ ಸಿಂಧಿ ಪಂಚಾಯತ್ ಜೈನ, ಗುಜರಾತಿ ಸಮುದಾಯದ ಈ ತೀರ್ಮಾನಕ್ಕೆ ಬೆಂಬಲ ಸೂಚಿಸಿದೆ. ಇಂತಹ ವಿಚಾರಗಳಿಂದಾಗಿಯೇ ಹಲವಾರು ವಿವಾಹ ಮುರಿದು ಬಿದ್ದಿವೆ. ಆದ್ದರಿಂದ, ಈ ತೀರ್ಮಾನ ಉತ್ತಮವಾಗಿದೆ ಎಂದು ಹೇಳಿದೆ.

ವಿವಾಹದ ಸಂದರ್ಭದಲ್ಲಿ ಎಲ್ಲರಿಗೂ ಸಂಭ್ರಮಿಸಲು ಅವಕಾಶವಿದೆ. ಮಹಿಳೆಯರು ನೃತ್ಯ ಮಾಡುವಂತಿಲ್ಲ ಎಂದು ನಿರ್ಬಂಧ ಹೇರುವುದು ತಪ್ಪು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ವಿವಾಹ ನಿಶ್ಚಯವಾದ ಜೋಡಿಗಳು ಫೋಟೋ ಶೂಟ್ ಮಾಡಿಸಿಕೊಳ್ಳುವುದರಲ್ಲಿ ತಪ್ಪೇನು? ಎಂಬ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+