ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: ಬಿಜೆಪಿ ಸೇರುವವರಿಗೆ ಕಾರು ಬಾಡಿಗೆ ಹೇಳಿಕೆ, ಬಿಜೆಪಿ ಹೇಳಿದ್ದೇನು?

|
Google Oneindia Kannada News

ಭೋಪಾಲ್, ಸೆ.20: ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವವರಿಗೆ ನಾನೇ ನನ್ನ ಕಾರು ಬಾಡಿಗೆ ನೀಡುತ್ತೇನೆ ಅಥವಾ ಬಿಟ್ಟು ಬರುತ್ತೇನೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಕಮಲ್‌ನಾಥ್ ಅವರ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ ನೀಡಿದೆ.

ಪಕ್ಷದಿಂದ ನಿರ್ಗಮಿಸುವ ಬಗ್ಗೆ ಅಸಡ್ಡೆ ಪ್ರತಿಕ್ರಿಯೆ ನೀಡಿರುವುದಕ್ಕೆ, ಕಮಲ್‌ನಾಥ್ ಸಾಕಷ್ಟು ಕಾರುಗಳನ್ನು ಖರೀದಿಬೇಕಾಗಬಹುದು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಹಿಂದಿನ ಮುಖ್ಯಮಂತ್ರಿ ಕಮಲ್‌ನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಬಿಟ್ಟು, ಬಿಜೆಪಿಗೆ ಹೋಗುವವರಿಗೆ ನಾನೇ ಕಾರು ಬಾಡಿಗೆ ಕೊಡುತ್ತೇನೆ: ಕಮಲ್‌ನಾಥ್ಕಾಂಗ್ರೆಸ್ ಬಿಟ್ಟು, ಬಿಜೆಪಿಗೆ ಹೋಗುವವರಿಗೆ ನಾನೇ ಕಾರು ಬಾಡಿಗೆ ಕೊಡುತ್ತೇನೆ: ಕಮಲ್‌ನಾಥ್

ಜ್ಯೋತಿರಾಧಿತ್ಯ ಸಿಂಧಿಯಾ ಅವರು ತಮ್ಮ ನಿಷ್ಠಾವಂತರೊಂದಿಗೆ ಬಿಜೆಪಿಗೆ ಸೇರ್ಪಡೆ ಆಗುವುದರೊಂದಿಗೆ 2020 ರಲ್ಲಿ ರಾಜ್ಯದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪತನಗೊಂಡಿತ್ತು.

He Should Buy A Lot Of Cars; BJP Reaction On Kamal Nath Remark

ಆಂತರಿಕ ಕಲಹ ಮತ್ತು ರಾಜಕೀಯ ಹಿನ್ನಡೆಯ ನಡುವೆಯೂ ಕಾಂಗ್ರೆಸ್ ಮತ್ತೆ ಪುಟಿದೇಳಲು ಪ್ರಯತ್ನ ನಡೆಸುತ್ತಿದೆ. 2014 ರಿಂದ ಅಧಿಕಾರದಿಂದ ಹೊರಗುಳಿದ ಕಾಂಗ್ರೆಸ್ ನಂತರದ ಹಲವು ಚುನಾವಣೆಗಳಲ್ಲಿ ಸೋಲುಗಳನ್ನು ಎದುರಿಸಿದೆ.

ಇತ್ತೀಚೆಗೆ ಗೋವಾದಲ್ಲಿ ಎಂಟು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾದ ನಂತರ, ಕಮಲ್‌ನಾಥ್ "ಯಾರು ಬಿಜೆಪಿಗೆ ಹೋಗಬೇಕು ಎನ್ನುತ್ತಾರೋ ಅವರು ಹೋಗಬಹುದು. ಪಕ್ಷ ಯಾರನ್ನು ತಡೆಯುವುದಿಲ್ಲ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವವರಿಗೆ ನಾನೇ ಕಾರು ಬಾಡಿಗೆ ನೀಡುತ್ತೇನೆ" ಎಂದು ಹೇಳಿದ್ದರು.

He Should Buy A Lot Of Cars; BJP Reaction On Kamal Nath Remark

ಮಧ್ಯಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆಗೆ ತಯಾರಿ ನಡೆಯುತ್ತಿದ್ದು, ಈ ವೇಳೆ ಕಮಲ್‌ನಾಥ್ ಅವರ ಕಾಮೆಂಟ್‌ಗಳು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿವೆ.

"ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥರು ಯಾರು ಬೇಕಾದರೂ ಹೋಗಬಹುದು, ಅವರಗೆ ನನ್ನ ಕಾರಿನಲ್ಲಿ ಡ್ರಾಪ್ ಮಾಡುತ್ತೇನೆ, ಬಾಡಿಗೆ ನೀಡುತ್ತೇನೆ ಎಂದು ಹೇಳುತ್ತಿದ್ದಾರೆ. ಸದಸ್ಯರು ಮತ್ತು ಕಾರ್ಯಕರ್ತರನ್ನು ಗೌರವಿಸುವುದಿಲ್ಲದ ಒಂದು ಪಕ್ಷವು ಸಾರ್ವಜನಿಕರಿಗೆ ಒಳ್ಳೆಯದನ್ನು ಮಾಡಬಹುದೇ?" ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿ ಮಾತ್ರವಲ್ಲದೇ ಮತ್ತೊಬ್ಬ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯಾ ಕೂಡ ಕಮಲ್‌ನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಹಾಗಾದರೆ ಅವರು ಬಹಳಷ್ಟು ಕಾರುಗಳನ್ನು ಖರೀದಿಸಬೇಕು. ಅವರ ನಾಯಕತ್ವದಿಂದ ಬಹಳಷ್ಟು ಜನರು ಅಸಮಾಧಾನ ಹೊಂದಿದ್ದಾರೆ ಎಂದಿದ್ದಾರೆ.

English summary
Kamal Nath should buy a lot of cars said Madhya Pradesh chief minister Shivraj Singh Chouhan Reaction On Kamal Nath remarks. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X