ದಿಗ್ವಿಜಯ್ ಸಿಂಗ್ ಭಯೋತ್ಪಾದಕ ಎಂದ ಪ್ರಜ್ಞಾಗೆ ಚು.ಆಯೋಗ ನೋಟಿಸ್
ಭೋಪಾಲ್, ಏ.26: ಭೋಪಾಲ್ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರನ್ನು ಭಯೋತ್ಪಾದಕ ಎಂದು ಟೀಕಿಸಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಇದರೊಂದಿಗೆ ಚುನಾವಣಾ ಆಯೋಗ ಸತತ ಮೂರನೇ ನೋಟಿಸ್‌ನ್ನು ಸಾಧ್ವಿ ಪ್ರಜ್ಞಾಗೆ ನೀಡಿದಂತಾಗಿದೆ. ಈ ಹಿಂದೆ ಬಾಬ್ರಿ ಮಸೀದಿ ಧ್ವಂಸದಲ್ಲಿ ನಾನು ಭಾಗಿಯಾಗಿದ್ದೆ ಹಾಗೂ ಹೇಮಂತ್ ಕರ್ಕರೆ ನನ್ನ ಶಾಪದಿಂದ ಮೃತಪಟ್ಟಿದ್ದಾರೆ ಎನ್ನುವ ವಿವಾದಾತ್ಮಕ ಹೇಳಿಕೆಗೆ ಸಾಧ್ವಿ ಚುನಾವಣಾ ಆಯೋಗದಿಂದ ನೋಟಿಸ್ ಪಡೆದಿದ್ದರು.

ಇದೀಗ ದಿಗ್ವಿಜಯ್ ಸಿಂಗ್ ವಿರುದ್ಧದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ನೋಟಿಸ್ ನೀಡಿದೆ. ಇದರ ಮಧ್ಯೆ ಸ್ಥಳೀಯ ಚುನಾವಣಾ ಅಧಿಕಾರಿಗಳಿಂದಲೂ ಸಾಧ್ವಿಯ ಹೇಳಿಕೆ ಕುರಿತಂತೆ ವರದಿಯನ್ನು ಕೇಳಿದೆ.












Click it and Unblock the Notifications