ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ಗೆ ಹಾಕುವ ಮತ ವ್ಯರ್ಥವಾಗುತ್ತದೆ: ಅಸಾಸುದ್ದೀನ್ ಓವೈಸಿ

|
Google Oneindia Kannada News

ಭೋಪಾಲ್, ಜೂನ್ 28: ಕಾಂಗ್ರೆಸ್ ದೇಶದಲ್ಲಿ ನಾಶವಾಗಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಪಕ್ಷಕ್ಕಾಗಿ ಜನ ತಮ್ಮ ಮತವನ್ನು ವ್ಯರ್ಥ ಮಾಡಬಾರದು ಎಂದು ಹೇಳಿಕೆ ನೀಡಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧವೂ ಕಿಡಿ ಕಾರಿರುವ ಓವೈಸಿ, ಭಾರತದ ಭೂಪ್ರದೇಶಕ್ಕೆ ಚೀನಾದ ಒಳನುಗ್ಗುವಿಕೆಯನ್ನು ತಡೆಯಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

'ಇನ್ನೊಬ್ಬರ ಮನೆ ಧ್ವಂಸ ಮಾಡಲು ನೀವು ಯಾರು?' ಸರ್ಕಾರಕ್ಕೆ ಓವೈಸಿ ಪ್ರಶ್ನೆ'ಇನ್ನೊಬ್ಬರ ಮನೆ ಧ್ವಂಸ ಮಾಡಲು ನೀವು ಯಾರು?' ಸರ್ಕಾರಕ್ಕೆ ಓವೈಸಿ ಪ್ರಶ್ನೆ

ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿದ್ದ ಓವೈಸಿ ಮಾತನಾಡುತ್ತಾ, "ದೇಶದಲ್ಲಿ ಕಾಂಗ್ರೆಸ್ ನಿಷ್ಪ್ರಯೋಜಕ ಶಕ್ತಿಯಾಗಿದೆ, ಅದು ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ, ಅದಕ್ಕಾಗಿ ನಿಮ್ಮ ಮತವನ್ನು ವ್ಯರ್ಥ ಮಾಡಬೇಡಿ," ಎಂದರು.

Dont Waste Your Vote On Congress: AIMIM Leader Owaisi

ಮುಂಬರುವ ಮುನ್ಸಿಪಲ್ ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸುವಂತೆ ಸಭೆಯಲ್ಲಿ ಓವೈಸಿ ಮನವಿ ಮಾಡಿದ್ದಾರೆ.

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀ (ಎಐಎಂಐಎಂ) ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಇದೇ ಮೊದಲ ಬಾರಿಗೆ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.

ಪ್ರವಾದಿ ಹೇಳಿಕೆ ವಿರುದ್ಧ ಪ್ರತಿಭಟನೆ: AIMIM ಅನ್ನು ದೂಷಿಸಿದ ಜಾಮಾ ಮಸೀದಿಯ ಇಮಾಮ್ಪ್ರವಾದಿ ಹೇಳಿಕೆ ವಿರುದ್ಧ ಪ್ರತಿಭಟನೆ: AIMIM ಅನ್ನು ದೂಷಿಸಿದ ಜಾಮಾ ಮಸೀದಿಯ ಇಮಾಮ್

ಎನ್‌ಡಿಎ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಓವೈಸಿ, ಗಡಿಯತ್ತ ಗಮನಹರಿಸಿ ಚೀನಾದ ಆಕ್ರಮಣವನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿಗೆ ಹೇಳಿದ್ದಾರೆ. ಚೀನಾ ಭಾರತದ ಭೂಮಿಯನ್ನು ರಹಸ್ಯವಾಗಿ ಅತಿಕ್ರಮಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಅಖಿಲ ಭಾರತ ಶಿಕ್ಷಣ ಸಮೀಕ್ಷೆಯ ವರದಿ ಪ್ರಕಾರ ಮುಸ್ಲಿಮರು ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ ಎಂದರು.

"ಇದಕ್ಕೆ ಯಾರು ಹೊಣೆ ಎಂದು ನಾನು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಕೇಳಲು ಬಯಸುತ್ತೇನೆ? ನೀವೆಲ್ಲರೂ ರಾಜಕೀಯ ಶಕ್ತಿಯಾಗಿ ಬರದಿದ್ದರೆ ಏನೂ ಬದಲಾಗುವುದಿಲ್ಲ" ಎಂದು ಅವರು ಸಭಿಕರನ್ನುದ್ದೇಶಿಸಿ ಹೇಳಿದರು.

Dont Waste Your Vote On Congress: AIMIM Leader Owaisi


ಸ್ಥಳೀಯ ಚುನಾವಣೆಯಲ್ಲಿ ಎಐಎಂಐಎಂ ಸ್ಪರ್ಧೆ

ಮಧ್ಯಪ್ರದೇಶದ ನಗರ ಸಂಸ್ಥೆ ಚುನಾವಣೆಯಲ್ಲಿ ಎಐಎಂಐಎಂ ಕೂಡ ಚುನಾವಣಾ ಕಣದಲ್ಲಿದೆ. ತಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಿ, ಇದೀಗ ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಜಬಲ್‌ಪುರದಲ್ಲಿ ತಮ್ಮ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.

ಜಬಲ್‌ಪುರದ ಮುಸ್ಲಿಂ ಮತದಾರರ ಬಾಹುಳ್ಯದ ವಾರ್ಡ್‌ಗಳಲ್ಲಿ ಓವೈಸಿ ಅವರ ಪಕ್ಷದ ಕೌನ್ಸಿಲರ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 7 ವಾರ್ಡ್‌ಗಳಲ್ಲಿ ಪಾಲಿಕೆ ಸದಸ್ಯ ಸ್ಥಾನಕ್ಕೆ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಎಐಎಂಐಎಂ ಜಬಲ್‌ಪುರದ 7 ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರವಿನಾಥ್ ಟ್ಯಾಗೋರ್ ವಾರ್ಡ್, ಶಾಸ್ತ್ರಿ ವಾರ್ಡ್, ಮೋತಿಲಾಲ್ ನೆಹರು ವಾರ್ಡ್, ಮೌಲಾನಾ ಅಬ್ದುಲ್ ಕಲಾಂ ಆಜಾದ್ ವಾರ್ಡ್, ಸಂಜಯ್ ಗಾಂಧಿ ವಾರ್ಡ್, ಖರ್ಮಾಯಿ ವಾರ್ಡ್ ಮತ್ತು ತಿಲಕ್ ವಾರ್ಡ್‌ಗಳಲ್ಲಿಎಐಎಂಐಎಂ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಕಾಂಗ್ರೆಸ್‌ನ ಮತಗಳನ್ನು ಎಐಎಂಐಎಂ ಸೆಳೆಯುವ ಸಾಧ್ಯತೆ ಇದ್ದು ಕಾಂಗ್ರೆಸ್‌ಗೆ ಹೊಡೆತ ಬೀಳಲಿದೆ. ಇದರಿಂದ ಈ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಸೋಲುವ ಭೀತಿಯಲ್ಲಿದೆ. ಮತ್ತೊಂದೆಡೆ ಬಿಜೆಪಿಗೆ ಇದರಿಂದ ಲಾಭವಾಗಲಿದೆ. ಅದಕ್ಕಾಗಿಯೇ ಎಐಎಂಐಎಂ ಅನ್ನು ಎದುರಿಸಲು ಕಾಂಗ್ರೆಸ್ ಯೋಜನೆಗಳನ್ನು ರೂಪಿಸುವಲ್ಲಿ ನಿರತವಾಗಿದೆ.

Recommended Video

ವಿರಾಟ್ ಶತಕದ ಬಗ್ಗೆ ಸೆಹ್ವಾಗ್ ಇಷ್ಟು ಕಳಪೆಯಾಗಿ ಮಾತಾಡ್ಬಾರ್ದಿತ್ತು!! | OneIndia Kannada

English summary
AIMIM leader Asaduddin Owaisi said, that Congress has become a spent force in the country. It has lost its existence, don't waste your vote on it. and he requested to vote for Aimim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X