ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುಮಗನೇ ಇಲ್ಲದ ಮೆರವಣಿಗೆಯಂತಾಗಿದೆ ಕಾಂಗ್ರೆಸ್ ಎಂದ ರಾಜ್ ನಾಥ್

|
Google Oneindia Kannada News

ಭೋಪಾಲ್ (ಮಧ್ಯಪ್ರದೇಶ), ನವೆಂಬರ್ 21: 'ಮದುಮಗನೇ ಇಲ್ಲದ ಮೆರವಣಿಗೆಯಂತಾಗಿದೆ ಕಾಂಗ್ರೆಸ್ ಪಕ್ಷ' ಎಂದು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಇಲ್ಲಿ ಬುಧವಾರ 'ಕೈ' ಪಕ್ಷದ ಕಾಲೆಳೆದಿದ್ದಾರೆ. ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಆ ಪಕ್ಷಕ್ಕೆ ನಾಯಕರೇ ಇಲ್ಲ ಹಾಗೂ ನಿಶ್ಚಿತವಾದ ರೂಪು-ರೇಷೆಯೇ ಹಾಕಿಕೊಂಡಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿಯು ತನ್ನ ಪ್ರಧಾನಿ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಈಗಾಗಲೇ ಘೋಷಿಸಿದೆ. ಆದರೆ ಬಿಜೆಪಿ ಮಟ್ಟಿಗೆ ಬರುವ ಧೈರ್ಯ ಕೂಡ ಕಾಂಗ್ರೆಸ್ ಗೆ ಇಲ್ಲ. ಯಾವ ಪಕ್ಷದ ಜತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ ರಾಜಸ್ತಾನದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ವಿರೋಧಪಕ್ಷಗಳು MeToo ಎನ್ನುತ್ತವೆ ಎಂದ ರಾಜನಾಥ್ ಸಿಂಗ್!ಕಾಂಗ್ರೆಸ್ ವಿರುದ್ಧ ವಿರೋಧಪಕ್ಷಗಳು MeToo ಎನ್ನುತ್ತವೆ ಎಂದ ರಾಜನಾಥ್ ಸಿಂಗ್!

ಇನ್ನು ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಅಖಾಡದಲ್ಲಿ ಸ್ಥಳೀಯವಾಗಿ ಕಾಂಗ್ರೆಸ್ ನಾಯಕರು ಹಲವರು ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುತ್ತಿದ್ದಾರೆ. ಆ ಪಕ್ಷಕ್ಕೆ ನಾಯಕತ್ವ ಇಲ್ಲ, ನಿಶ್ಚಿತ ರೂಪು-ರೇಷೆ ಇಲ್ಲ ಎಂದು ಅದರಿಂದಲೇ ಗೊತ್ತಾಗುತ್ತದೆ ಎಂದು ರಾಜ್ ನಾಥ್ ಸಿಂಗ್ ಹೇಳಿದ್ದಾರೆ.

15 ವರ್ಷದಲ್ಲಿ ಜಗತ್ತಿನ ಟಾಪ್ ಮೂರು ಆರ್ಥಿಕತೆಗಳಲ್ಲಿ ಭಾರತ ಕೂಡ ಒಂದು

15 ವರ್ಷದಲ್ಲಿ ಜಗತ್ತಿನ ಟಾಪ್ ಮೂರು ಆರ್ಥಿಕತೆಗಳಲ್ಲಿ ಭಾರತ ಕೂಡ ಒಂದು

ಕೇಂದ್ರದಲ್ಲಿ ಬಿಜೆಪಿ ಸರಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ದೇಶದಲ್ಲಿ 'ಅಚ್ಛೇ ದಿನ್' ಇದೆ. ಕೆಲವರಿಗೆ ಗ್ರಹಿಕೆಯ ಸಮಸ್ಯೆ. ಅವರಷ್ಟೇ ಆ ಬಗ್ಗೆ ಮೆಚ್ಚುಗೆ ಸೂಚಿಸುತ್ತಿಲ್ಲ. ದೇಶದ ಆರ್ಥಿಕತೆ ಕೂಡ ಉತ್ತಮವಾಗಿ ಮುಂದಕ್ಕೆ ಸಾಗುತ್ತಿದೆ. ಇನ್ನು ಹದಿನೈದು ವರ್ಷದಲ್ಲಿ ಭಾರತವು ಜಗತ್ತಿನ ಟಾಪ್ ಮೂರು ಆರ್ಥಿಕತೆಗಳಲ್ಲಿ ಒಂದಾಗಿರುತ್ತದೆ.

ದೇಶದ ಆರ್ಥಿಕತೆಯನ್ನು ಹಾಳುಗೆಡವಿತ್ತು ಕಾಂಗ್ರೆಸ್

ದೇಶದ ಆರ್ಥಿಕತೆಯನ್ನು ಹಾಳುಗೆಡವಿತ್ತು ಕಾಂಗ್ರೆಸ್

ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ವ್ಯವಸ್ಥಿತವಾಗಿ ದೇಶದ ಆರ್ಥಿಕತೆಯನ್ನು ಹಾಳುಗೆಡವಿತ್ತು. ನಾವು ಆರ್ಥಿಕತೆಗೆ ಜೀವ ತುಂಬಿದ್ದೇವೆ. ಆದರೂ ಯಾವುದೇ ರಾಜಕೀಯ ಪಕ್ಷ ಅಥವಾ ಸರಕಾರ ಸಂಪೂರ್ಣವಾಗಿ ಸರಿ ಇರಲು ಸಾಧ್ಯವಿಲ್ಲ. ನಮ್ಮ ಪಕ್ಷವು ಸಿದ್ಧಾಂತ ಹಾಗೂ ರಾಜಕೀಯ ಆಲೋಚನೆಗಳ ಆಧಾರದಲ್ಲಿ ನಡೆಯುತ್ತದೆ. ಒಂದು ವೇಳೆ ಇದೇ ವೇಗದಲ್ಲಿ ನಮ್ಮ ಅಭಿವೃದ್ಧಿ ಮುಂದುವರಿದರೆ ಭಾರತವು ಜಗತ್ತಿನ ಟಾಪ್ ಮೂರು ಆರ್ಥಿಕತೆಗಳಲ್ಲಿ ಒಂದಾಗಿರುತ್ತದೆ ಎಂದರು.

ಈ ಎರಡು ಪ್ರದೇಶಗಳ ಮೇಲೆ ನಿಂತಿದೆ ಮಧ್ಯಪ್ರದೇಶದ ಭವಿಷ್ಯ ಈ ಎರಡು ಪ್ರದೇಶಗಳ ಮೇಲೆ ನಿಂತಿದೆ ಮಧ್ಯಪ್ರದೇಶದ ಭವಿಷ್ಯ

'ವಿಶ್ವಾಸಾರ್ಹತೆ ಕೊರತೆ' ಉದ್ಭವಿಸಲು ಕಾಂಗ್ರೆಸ್ ಕಾರಣ

'ವಿಶ್ವಾಸಾರ್ಹತೆ ಕೊರತೆ' ಉದ್ಭವಿಸಲು ಕಾಂಗ್ರೆಸ್ ಕಾರಣ

ರಾಜಕೀಯದಲ್ಲಿ 'ವಿಶ್ವಾಸಾರ್ಹತೆ ಕೊರತೆ' ಉದ್ಭವಿಸಲು ಕಾಂಗ್ರೆಸ್ ಪಕ್ಷವೇ ಕಾರಣ. ಈಗಿನ ಅವರ ಚುನಾವಣೆ ಪ್ರಣಾಳಿಕೆ ಅದಕ್ಕೆ ಸಾಕ್ಷಿಯಾಗಿದೆ. ಅವರು ನೀಡಿದ್ದ ಭರವಸೆಗಳಲ್ಲಿ ಅರ್ಧದಷ್ಟನ್ನೂ ಪೂರೈಸಿಲ್ಲ ಎಂಬುದಕ್ಕೆ ಸಾಕ್ಷಿ ಅದು. ಈಗ ಕಾಂಗ್ರೆಸ್ ನೀಡುತ್ತಿರುವ ಭರವಸೆ 'ಪೋಸ್ಟ್ ಡೇಟೆಡ್ ಚೆಕ್ ನಂತೆ ಇದೆ. ಯಾವುದೂ ಹೊಸತಿಲ್ಲ. ಹಳೆ ಪ್ರಣಾಳಿಕೆ ಪುನರಾವರ್ತನೆ ಮಾಡಿದ್ದಾರಷ್ಟೇ ಎಂದು ಆರೋಪಿಸಿದ್ದಾರೆ.

ಕೋರ್ಟ್ ನಲ್ಲಿರುವ ಸುಪ್ರೀಂ ಕೋರ್ಟ್ ವಿಚಾರ ಮಾತಾಡಲ್ಲ

ಕೋರ್ಟ್ ನಲ್ಲಿರುವ ಸುಪ್ರೀಂ ಕೋರ್ಟ್ ವಿಚಾರ ಮಾತಾಡಲ್ಲ

ಸಾಲ ಮನ್ನಾ ವಿಚಾರವಾಗಿ ವಿರೋಧ ಪಕ್ಷಗಳ ಭರವಸೆ ಪುಸ್ತಕಗಳಲ್ಲಿ ಮಾತ್ರ ಉಳಿದಿದೆ. ಆದರೆ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸರಕಾರ ಉತ್ತಮ ಯೋಜನೆಗಳನ್ನು ತಂದಿದೆ, ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದು ರಾಜ್ ನಾಥ್ ಸಿಂಗ್, ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಿಸಿದರೆ ಎಲ್ಲರಿಗೂ ಸಂತೋಷ ಆಗುತ್ತದೆ. ಆದರೆ ಅದು ಎಲ್ಲರೂ ಒಪ್ಪಿ, ನಿರ್ಧರಿಸಬೇಕು ಎಂದಿದ್ದಾರೆ. ಇನ್ನು ಸಿಬಿಐ ಸಂಸ್ಥೆ ವಿಚಾರವು ಕೋರ್ಟ್ ನಲ್ಲಿ ಇರುವುದರಿಂದ ಆ ಬಗ್ಗೆ ಮಾತನಾಡಲ್ಲ ಎಂದು ರಾಜ್ ನಾಥ್ ಹೇಳಿದ್ದಾರೆ.

ಮಧ್ಯಪ್ರದೇಶ ಚುನಾವಣೆ: ಕೂಸು ಹುಟ್ಟುವ ಮುನ್ನವೇ ಕುಲಾವಿ ಹೆಣೆದ ಕಾಂಗ್ರೆಸ್ ಮಧ್ಯಪ್ರದೇಶ ಚುನಾವಣೆ: ಕೂಸು ಹುಟ್ಟುವ ಮುನ್ನವೇ ಕುಲಾವಿ ಹೆಣೆದ ಕಾಂಗ್ರೆಸ್

English summary
Congress is like 'Barat' without groom, says central minister Rajnath Singh in assembly election bound Madhya Pradesh on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X