• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ಕರೆಗೆ ಶ್ರದ್ಧಾಂಜಲಿ ಸಲ್ಲಿಸಬಹುದು, ಗೌರವಿಸುವುದ್ದಕ್ಕಾಗುವುದಿಲ್ಲ: ಆರೆಸ್ಸೆಸ್ ನಾಯಕ

|

ಭೋಪಾಲ್, ಆಗಸ್ಟ್ 01: ನವೆಂಬರ್ 26, 2008 ರಲ್ಲಿ ಮುಂಬೈಯಲ್ಲಿ ನಡೆದ ಉಗ್ರದಾಳಿಯ ಸಂದರ್ಭದಲ್ಲಿ ಮುಂಬೈ ಭಯೋತ್ಪಾದನಾ-ವಿರೋಧಿ ದಳ(ಎಟಿಎಸ್) ಮುಖಂಡರಾಗಿದ್ದ ದಿ.ಹೇಮಂತ್ ಕರ್ಕರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಬಹುದೇ ಹೊರತು ಅವರನ್ನು ಗೌರವಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಇಂದ್ರೇಶ್ ಕುಮಾರ್ ಹೇಳಿದ್ದಾರೆ.

"ಉಗ್ರರ ಬುಲೆಟ್ ನಿಂದ ಹೇಮಂತ್ ಕರ್ಕರೆ ಮೃತರಾದರು. ಆದ್ದರಿಂದ ಅವರೊಬ್ಬ ಹುತಾತ್ಮ, ಗೌರವಕ್ಕೆ ಅರ್ಹರು. ಆದರೆ ಕಾಂಗರೆಸ್ ಅವರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಹಿಂದು ಭಯೋತ್ಪಾದನೆಯ ಹೆಸರಿನಲ್ಲಿ ಮಹಿಳೆಗೆ(ಪ್ರಜ್ಞಾ ಸಿಂಗ್ ಠಾಕೂರ್) ಕಿರುಕುಳ ನೀಡಿದ್ದರು" ಎಂದು ಅವರು ಆರೋಪಿಸಿದರು.

ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾಗೆ ಆಯೋಗದ ಎರಡೆರಡು ನೋಟಿಸ್ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾಗೆ ಆಯೋಗದ ಎರಡೆರಡು ನೋಟಿಸ್

2008 ರ ಸೆಪ್ಟೆಂಬರ್ 29 ರಂದು ನಡೆದ ಮಾಲೇಗಾಂವ್ ಸ್ಫೋಟದ ಆರೂಪಿಯಾಗಿದ್ದ ಸಾಧ್ವಿ ಪ್ರಜ್ಞಾ ಸೀಮಗ್ ಠಾಕೂರ್ ಅವರಿಗೆ ಜೈಲಿನಲ್ಲಿ ಹೇಮಂತ್ ಕರ್ಕರೆ ಸಾಕಷ್ಟು ಮಾನಸಿಕ ಕಿರುಕುಳ ನೀಡಿದ್ದರು ಎಂದು ಸ್ವತಃ ಪ್ರಜ್ಞಾ ಸಿಂಗ್ ಹೇಳಿದ್ದರು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದ ಭೋಪಾಲ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಜ್ಞಾ ಸಿಂಗ್ ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಭಾರೀ ಜಯ ಸಾಧಿಸಿದ್ದರು.

ಹೇಮಂತ್ ಕರ್ಕರೆ ಸಾವಿನ ಕುರಿತ ವಿವಾದಿತ ಹೇಳಿಕೆ: ಪ್ರಜ್ಞಾ ಸಿಂಗ್‌ಗೆ ನೋಟಿಸ್ಹೇಮಂತ್ ಕರ್ಕರೆ ಸಾವಿನ ಕುರಿತ ವಿವಾದಿತ ಹೇಳಿಕೆ: ಪ್ರಜ್ಞಾ ಸಿಂಗ್‌ಗೆ ನೋಟಿಸ್

ಚುನಾವಣೆಯ ಪ್ರಚಾರದ ಸಂದರ್ಭದಲ್ಲೂ, "ನನ್ನನ್ನು ಸುಳ್ಳು ಆರೋಪದಡಿ ಬಂಧಿಸಿ, ಜಅಲಿನಲ್ಲಿರಿಸಿ, ಕಿರುಕುಳ ನೀಡಿದ್ದ ಹೇಮಂತ್ ಕರ್ಕರೆ ಅವರಿಗೆ ನಾನು ಶಾಪ ನೀಡಿದ್ದೆ. ಆದ್ದರಿಂದಲೇ ಅವರು ಸತ್ತಿದ್ದು" ಎಂದು ಪ್ರಜ್ಞಾ ಸಿಂಗ್ ಹೇಳಿದ್ದರು.

ಳಿಳಲಿಕೆಯ ವಿರುದ್ಧ ಎಲ್ಲೆಡೆಯೂ ಆಕ್ರೋಶ ಎದ್ದ ಹಿನ್ನಲೆಯಲ್ಲಿ ತಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದರು.

English summary
RSS leader Indresh Kumar said, one can pay tribute to former Mumbai ATS chief Hemant Karkare but he can not be respected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X