ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹ್ಯಾಂಡ್ ಗ್ಲೌಸ್, ಬ್ರಷ್ ಇಲ್ಲದೆ ಶೌಚಾಲಯ ಶುಚಿಗೊಳಿಸಿದ ಬಿಜೆಪಿ ಸಂಸದ: ವಿಡಿಯೋ ವೈರಲ್

|
Google Oneindia Kannada News

ರೇವಾ, ಸೆಪ್ಟೆಂಬರ್ 23: ಮಧ್ಯಪ್ರದೇಶದ ರೇವಾ ಸಂಸದ ಜನಾರ್ದನ್ ಮಿಶ್ರಾ ಅವರು ತಮ್ಮ ಸಾಮಾಜಸೇವೆಯ ವಿಚಾರದಲ್ಲಿ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಸಂಸದ ಜನಾರ್ದನ್ ಮಿಶ್ರಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಸಂಸದ ಜನಾರ್ದನ್ ಮಿಶ್ರಾ ಅವರು ಹ್ಯಾಂಡ್ ಗ್ಲೌಸ್ ಮತ್ತು ಬ್ರಷ್‌ಗಳಿಲ್ಲದೆ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋಕ್ಕೆ ವಿವಿಧ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ.

ರೇವಾ ಸಂಸದ ಜನಾರ್ದನ್ ಮಿಶ್ರಾ ಅವರು ಶೌಚಾಲಯ ಸ್ವಚ್ಛಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಯಾವುದೇ ಕೈ ಗ್ಲೌಸ್ ಮತ್ತು ಬ್ರಷ್ ಇಲ್ಲದೆ ಬಾಯಿಗೆ ಮಾಸ್ಕ್ ಹಾಕಿಕೊಳ್ಳದೆ ಮತ್ತು ಯಾವುದೇ ರಕ್ಷಣೆಯಿಲ್ಲದೆ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ. ಸಂಸದ ಜನಾರ್ದನ್ ಮಿಶ್ರಾ ಟಾಯ್ಲೆಟ್ ಪಾಟ್ ಒಳಗೆ ಕೈ ಹಾಕಿ ಕ್ಲೀನ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ಸಂಸದ ಜನಾರ್ದನ್ ಮಿಶ್ರಾ ಅವರು ಶೌಚಾಲಯ ಸ್ವಚ್ಛಗೊಳಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಶೌಚಾಲಯ ಶುಚಿಗೊಳಿಸಿದ ಬಿಜೆಪಿ ಸಂಸದರು

ಶೌಚಾಲಯ ಸ್ವಚ್ಛಗೊಳಿಸುವ ವಿಡಿಯೋವನ್ನು ಸ್ವತಃ ಜನಾರ್ದನ್ ಮಿಶ್ರಾ ಅವರೇ ಪೋಸ್ಟ್ ಮಾಡಿದ್ದಾರೆ. ಯಾವುದೇ ರಕ್ಷಣೆಯಿಲ್ಲದೆ ಅವರೇ ತಮ್ಮ ಕೈಯಿಂದಲೇ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಅವರು ಪಕ್ಷದ ವತಿಯಿಂದ ಹದಿನೈದು ದಿನಗಳ ಸೇವಾ ಅಡಿಯಲ್ಲಿ, ಯುವ ಮೋರ್ಚಾವು ಖತ್ಖಾರಿಯಲ್ಲಿ ಬಾಲಕಿಯರ ಶಾಲೆಯ ಮರ ನೆಡುವ ಕಾರ್ಯಕ್ರಮದ ನಂತರ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಿದೆ ಎಂದು ಬರೆದಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ವಿಡಿಯೋ ವೈರಲ್

ವಿಡಿಯೋ ವೈರಲ್

ಸಂಸದ ಜನಾರ್ದನ್ ಮಿಶ್ರಾ ಅವರು ಜಿಲ್ಲೆಯ ಮೌಗಂಜ್ ವಿಧಾನಸಭಾ ಕ್ಷೇತ್ರದ ಹನುಮಾನದಲ್ಲಿ ಖಟ್ಖಾರಿ ಯುವ ಮಂಡಲ ಆಯೋಜಿಸಿದ್ದ ಸೇವಾ ಪಖವಾಡದಡಿ ನೆಡುತೋಪು ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಈ ವೇಳೆ ಸರಕಾರಿ ಶಾಲೆಯಲ್ಲಿ ತಿರುಗಾಡಲು ಆರಂಭಿಸಿದ ಅವರು, ಶೌಚಾಲಯ ಕೊಳಕಾಗಿರುವುದನ್ನು ಕಂಡು ತಾವೇ ಅದನ್ನು ಸ್ವಚ್ಛಗೊಳಿಸುವ ಹೊಣೆ ಹೊತ್ತುಕೊಂಡರು. ಸಂಸದರು ತಮ್ಮ ಕೈಯಿಂದಲೇ ಶೌಚಾಲಯ ಸ್ವಚ್ಛಗೊಳಿಸಲು ಆರಂಭಿಸಿದರು. ಜನಾರ್ದನ್ ಮಿಶ್ರಾ ಅವರು ಶೌಚಾಲಯ ಸ್ವಚ್ಛಗೊಳಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದ್ದು, ನಾನಾ ರೀತಿಯ ಕಾಮೆಂಟ್ ಗಳು ಬರುತ್ತಿವೆ.

ಜನಾರ್ದನ್ ಮಿಶ್ರಾ ಬಗ್ಗೆ ವ್ಯಂಗ್ಯ

ಜನಾರ್ದನ್ ಮಿಶ್ರಾ ಬಗ್ಗೆ ವ್ಯಂಗ್ಯ

ರೇವಾ ಸಂಸದ ಜನಾರ್ದನ್ ಮಿಶ್ರಾ ಅವರ ಶೌಚಾಲಯವನ್ನು ಸ್ವಚ್ಛಗೊಳಿಸುವ ಕುರಿತು ಸಮಾಜ ಸೇವಕ ಶಿವಾನಂದ್ ದ್ವಿವೇದಿ ಪ್ರತಿಕ್ರಿಯೆ ನೀಡಿದ್ದಾರೆ. ರೇವಾ ಸಂಸದರು ತಮ್ಮ ಇತರ ಪ್ರಮುಖ ಕರ್ತವ್ಯಗಳನ್ನು ನಿರ್ವಹಿಸದೆ ಶೌಚಾಲಯವನ್ನು ಸ್ವಚ್ಛಗೊಳಿಸುವ ವಿಡಿಯೊಗಳನ್ನು ಮಾಡುವುದನ್ನು ಮುಂದುವರೆಸಿದ್ದಾರೆ. ಶಿಕ್ಷಣ, ಆರೋಗ್ಯ, ನಿರುದ್ಯೋಗ ಅಭಿವೃದ್ಧಿ, ರೈತರ ಸಮಸ್ಯೆಗಳು ಮತ್ತು ಸಂಸತ್ತಿನಲ್ಲಿ ಗೋವುಗಳ ಮೇಲಿನ ದೌರ್ಜನ್ಯದಂತಹ ವಿಷಯಗಳನ್ನು ಪ್ರಸ್ತಾಪಿಸುವುದಿಲ್ಲ. ಈ ಜ್ವಲಂತ ಸಮಸ್ಯೆಗಳನ್ನು ಮುಚ್ಚಿಟ್ಟು ಗಮನವನ್ನು ಬೇರೆಡೆಗೆ ತಿರುಗಿಸಿ ಕೇವಲ ಗಾಂಧಿವಾದಿಯಂತೆ ನಟಿಸುತ್ತಿದ್ದಾರೆ. ಗಾಂಧಿವಾದಿಯಾಗಿರುವುದು ಮತ್ತು ಗಾಂಧಿವಾದಿಯಂತೆ ನಟಿಸುವುದು ಎರಡು ವಿಭಿನ್ನ ವಿಷಯಗಳು ಎಂದು ಅವರು ಹೇಳಿದರು. ಆರೆಸ್ಸೆಸ್ ಮತ್ತು ಭಾರತೀಯ ಜನತಾ ಪಕ್ಷದ ಸಿದ್ಧಾಂತದ ಜನರು ಮಹಾತ್ಮಾ ಗಾಂಧಿಯನ್ನು ಹೇಗೆ ನೋಡುತ್ತಾರೆ ಮತ್ತು ಅವರನ್ನು ಹೇಗೆ ಗೌರವಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಎಂದು ಹೇಳಿದ್ದಾರೆ.

ಹಲವು ಸ್ವಚ್ಚತೆ ಅಭಿಯಾನಗಳಲ್ಲಿ ಜನಾರ್ದನ್ ಮಿಶ್ರಾ ಭಾಗಿ

ಹಲವು ಸ್ವಚ್ಚತೆ ಅಭಿಯಾನಗಳಲ್ಲಿ ಜನಾರ್ದನ್ ಮಿಶ್ರಾ ಭಾಗಿ

ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ಈ ಮೊದಲು ಹಲವು ಬಾರಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತೆಯ ಸಂದೇಶವನ್ನು ನೀಡಿದ್ದಾರೆ. 2018ರಲ್ಲಿ ಮಧ್ಯಪ್ರದೇಶದ ರೇವಾ ಜಿಲ್ಲೆಯ ಶಾಲೆಯೊಂದರ ಶೌಚಾಲಯವನ್ನು ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ಬರಿಗೈಯಿಂದ ಸ್ವಚ್ಛಗೊಳಿಸಿರುವ ವಿಡಿಯೋ ವೈರಲ್ ಆಗಿತ್ತು. ನೆಟ್ಟಿಗರು ಸಂಸದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

2014ರಲ್ಲಿ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರನ್ನೂ ಸ್ವಚ್ಛತೆಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿತ್ತು. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ, ಬಿಜೆಪಿ ಸಂಸದರು ಆಗಾಗ್ಗೆ ಸುತ್ತಮುತ್ತ ಸ್ವಚ್ಛತೆ ಕಾಪಾಡಲು ಈ ರೀತಿಯ ಸ್ವಚ್ಚತೆ ಅಭಿಯಾನಗಳನ್ನು ಮಾಡುತ್ತಲೇ ಇರುತ್ತಾರೆ.

English summary
MP Janardhan Mishra was seen cleaning the toilet without hand gloves and brushes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X