• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಟುಂಬಕ್ಕೆ ಕೊರೊನಾ ಹರಡಬಾರದೆಂದು ಕಾರ್‌ನಲ್ಲೇ ವಾಸ ಮಾಡ್ತಿದ್ದಾರೆ ಈ ಡಾಕ್ಟರ್

|

ಭೋಪಾಲ್, ಏಪ್ರಿಲ್ 08: ಕೊರೊನಾ ವೈರಸ್‌ ವಿರುದ್ಧ ಹೋರಾಟ ಮಾಡುತ್ತಿರುವ ಡಾಕ್ಟರ್‌ಗಳ ತ್ಯಾಗ ನಿಜಕ್ಕೂ ದೊಡ್ಡದಿದೆ. ಭೋಪಾಲ್‌ನಲ್ಲಿ ಒಬ್ಬ ಡಾಕ್ಟರ್‌ ಒಂದು ವಾರಗಳಿಂದ ಕಾರ್‌ನಲ್ಲಿಯೇ ವಾಸ ಮಾಡುತ್ತಿದ್ದಾರೆ.

ಕೊರೊನಾ ರೋಗಿಗಳ ನಡುವೆ ಇರುವ ವೈದ್ಯರು ತಮ್ಮ ಮನೆಗೆ ಹೋಗಲು ಭಯ ಪಡುತ್ತಾರೆ. ತಮ್ಮ ಕುಟುಂಬದವರಿಗೂ, ಮಕ್ಕಳಿಗೂ ವೈರಸ್‌ ಹರಡುವ ಸಾಧ್ಯತೆ ಹೆಚ್ಚಿದೆ ಎನ್ನುವ ಆತಂಕ ಅವರಿಗೆ ಇರುತ್ತದೆ. ಆ ಕಾರಣದಿಂದ ಎಷ್ಟೋ ವೈದ್ಯರು ಬೇರೆ ಬೇರೆ ಕಡೆ ವಾಸ ಮಾಡುತ್ತಿದ್ದಾರೆ. ಕೆಲವು ವೈದ್ಯಕೀಯ ಸಿಬ್ಬಂದಿ ಮನೆಗೆ ಹೋಗಲು ಆಗದೆ ಆಸ್ಪತ್ರೆಯಲ್ಲಿಯೇ ನಿದ್ದೆ ಮಾಡುತ್ತಿದ್ದಾರೆ.

ಭೂಪಾಲ್ನಲ್ಲಿ 5 ಪೊಲೀಸರಿಗೆ 4 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್

ಭೋಪಾಲ್‌ನಲ್ಲಿ ವೈದ್ಯ ಸಚಿನ್ ನಾಯಕ್‌, ಜೆಪಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರೆ. ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ರೋಗಿಗಳ ನಡುವೆಯೇ ದಿನ ಪೂರ್ತಿ ಇರುವ, ಅವರು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿಲ್ಲ. ಬದಲಿಗೆ ತಮ್ಮ ಕಾರ್‌ ಅನ್ನೇ ಮನೆ ಮಾಡಿದ್ದಾರೆ.

ಕಾರ್‌ನಲ್ಲೇ ವಾಸ

ಕಾರ್‌ನಲ್ಲೇ ವಾಸ

ಭೋಪಾಲ್‌ನಲ್ಲಿ ವೈದ್ಯ ಸಚಿನ್ ನಾಯಕ್‌ ತಮ್ಮ ಕಾರ್‌ನಲ್ಲಿಯೇ ವಾಸ ಮಾಡುತ್ತಿದ್ದಾರೆ. ಕೊರೊನಾ ವೈರಸ್‌ ತಮ್ಮ ಕುಟುಂಬಕ್ಕೆ ಹರಡಬಾರದು ಎನ್ನುವ ಉದ್ದೇಶದಿಂದ ಅವರು ಮನೆಗೆ ಹೋಗುತ್ತಿಲ್ಲ. ಕಾರ್‌ನಲ್ಲಿಯೇ ದಿನನಿತ್ಯ ಬೇಕಾಗುವ ಕೆಲವು ವಸ್ತುಗಳನ್ನು ಬಟ್ಟೆಗಳನ್ನು, ಹಾಸಿಗೆಯನ್ನು ಇಟ್ಟುಕೊಂಡಿದ್ದಾರೆ. ಪುಸ್ತಕ ಓದುವ ಹವ್ಯಾಸ ಇಟ್ಟುಕೊಂಡಿರುವ ಅವರು, ಕೆಲಸದ ಬಳಿಕ ಕಾರ್‌ನಲ್ಲಿಯೇ ಕುಳಿತು ಪುಸ್ತಕ ಓದುತ್ತಿದ್ದಾರೆ.

ಆಸ್ಪತ್ರೆಯ ಬಳಿ ಕಾರ್ ಪಾರ್ಕ್

ಆಸ್ಪತ್ರೆಯ ಬಳಿ ಕಾರ್ ಪಾರ್ಕ್

ತಮ್ಮ ಆಸ್ಪತ್ರೆಯ ಬಳಿಯೇ ಕಾರ್ ಅನ್ನು ನಿಲ್ಲಿಸುವ ಡಾಕ್ಟರ್ ಕೆಲಸ ಮುಗಿಸಿ ಮತ್ತೆ ಕಾರ್ ಸೇರುತ್ತಾರೆ. ಕುಟುಂಬವನ್ನು ಬಿಟ್ಟಿರುವ ಅವರು, ಕಾರ್‌ನಿಂದಲೇ ಹೆಂಡತಿ, ಮಕ್ಕಳ ಜೊತೆಗೆ ಫೋನ್ ಹಾಗೂ ವಿಡಿಯೊ ಕಾಲ್ ಮಾಡಿ ಮಾತನಾಡುತ್ತಾರಂತೆ. ತಮ್ಮಿಂದ ಬೇರೆ ಯಾರಿಗೂ ತೊಂದರೆ ಆಗಬಾರದು ಎಂದು ಈ ನಿರ್ಧಾರ ತೆಗೆದುಕೊಂಡೆ ಡಾಕ್ಟರ್ ಸಚಿನ್ ನಾಯಕ್.

ಭೋಪಾಲ್‌: ಕೊರೊನಾಕ್ಕೆ ಆರೋಗ್ಯ ಇಲಾಖೆಯೇ ಹಾಟ್ ಸ್ಪಾಟ್!

ಮುಖ್ಯಮಂತ್ರಿಯಿಂದ ಶ್ಲಾಘನೆ

ಮುಖ್ಯಮಂತ್ರಿಯಿಂದ ಶ್ಲಾಘನೆ

ಡಾಕ್ಟರ್ ಸಚಿನ್ ನಾಯಕ್ ಕಾರ್‌ನಲ್ಲಿಯೇ ವಾಸ ಮಾಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಭೋಪಾಲ್ ತುಂಬ ಇದು ಸುದ್ದಿಯಾಗಿದೆ. ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ಗೆ ಸಹ ವಿಷಯ ತಲುಪಿದೆ. ಆಗ ಅವರು ಡಾಕ್ಟರ್ ಸಚಿನ್ ನಾಯಕ್ ತೆಗೆದುಕೊಂಡ ನಿರ್ಧಾರಕ್ಕೆ ಶ್ಲಾಘಿಸಿದ್ದಾರೆ. ಕೊರೊನಾ ತಡೆಯಲು ಕುಟುಂಬದಿಂದ ದೂರ ಇರುವ ಅವರ ತ್ಯಾಗವನ್ನು ಮೆಚ್ಚಿದ್ದಾರೆ.

ಭೋಪಾಲ್ ಪಾಸಿಟಿವ್ ಕೇಸ್‌ನಿಂದ ಭೀತಿ

ಭೋಪಾಲ್ ಪಾಸಿಟಿವ್ ಕೇಸ್‌ನಿಂದ ಭೀತಿ

ಭೋಪಾಲ್‌ನಲ್ಲಿ ಪಾಸಿಟಿವ್ ಕೇಸ್‌ ಶುರು ಆದಾಗಿನಿಂದ ಡಾಕ್ಟರ್ ಸಚಿನ್ ನಾಯಕ್ ಭೀತಿಗೆ ಒಳಗಾದರು. ಆಗಿನಿಂದ ಅವರು ಮನೆಗೆ ಹೋಗಲಿಲ್ಲ. ಇನ್ನು ಭೋಪಾಲ್‌ನಲ್ಲಿ ಒಂದೇ ದಿನ ನಾಲ್ಕು ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿತ್ತು. ಸದ್ಯ ಮಧ್ಯ ಪ್ರದೇಶದಲ್ಲಿ 229 ಪಾಸಿಟಿವ್ ಪ್ರಕರಣಗಳು ದೃಢವಾಗಿದೆ. 13 ಮಂದಿ ಕೊರೊನಾದಿಂದ ಮರಣ ಹೊಂದಿದ್ದಾರೆ.

English summary
Dr. Sachin Nayak, a doctor living in his car to protect his family from coronavirus in Bhopal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X