ಜೈಲಿನಿಂದ ಹೊರ ಬಂದ 'ಬ್ಯಾಟ್ ಬೀಸಿದ' ಬಿಜೆಪಿ ಶಾಸಕ ಆಕಾಶ್

ಇಂದೋರ್, ಜೂನ್ 30: ಮಧ್ಯಪ್ರದೇಶದ ಬಿಜೆಪಿ ಎಂಎಲ್ಎ ಆಕಾಶ್ ವಿಜಯ್ ವರ್ಗಿಯಾ ಅವರು ಇಂದು ಜೈಲಿನಿಂದ ಹೊರ ಬಂದಿದ್ದಾರೆ.

ಭ್ರಷ್ಟಾಚಾರವನ್ನು ನಿಗ್ರಹಿಸಲು ಬ್ಯಾಟ್ ಹಿಡಿದು ಅಧಿಕಾರಿಯನ್ನು ಸಾರ್ವಜನಿಕವಾಗಿ ಥಳಿಸಿದ್ದ ಆರೋಪದ ಮೇಲೆ ಆಕಾಶ್ ಅವರನ್ನು ಬಂಧಿಸಲಾಗಿತ್ತು. ಶನಿವಾರದಂದು ಭೋಪಾಲ್ ವಿಶೇಷ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದರು.

ಮಧ್ಯಪ್ರದೇಶದ ಬಿಜೆಪಿಯ ಹಿರಿಯ ನಾಯಕ ಕೈಲಾಶ್ ವಿಜಯ್ ವರ್ಗಿಯಾ ಅವರ ಮಗನಾಗಿರುವ ಆಕಾಶ್ ಅವರು, ಸಾರ್ವಜನಿಕರ ಸಮ್ಮುಖದಲ್ಲಿಯೇ ಕ್ರಿಕೆಟ್ ಬ್ಯಾಟ್ ತೆಗೆದುಕೊಂಡು, ಭ್ರಷ್ಟಾಚಾರದಲ್ಲಿ ತೊಡಗಿದ್ದ ಸರಕಾರಿ ನೌಕರನನ್ನು ಜೂನ್ 26ರಂದು ಥಳಿಸಿದ್ದರು.

Bhopal: BJP MLA Akash Vijayvargiya granted bail by court

ಸಾರ್ವಜನಿಕರು ಮಾತ್ರವಲ್ಲ, ಮಾಧ್ಯಮದವರು ಕ್ಯಾಮೆರಾ ಹಿಡಿದುಕೊಂಡು ನಿಂತಿದ್ದಾಗಲೇ ಆಕಾಶ್ ಅವರು, ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಯನ್ನು ಬ್ಯಾಟಿನಿಂದ ಮನಬಂದಂತೆ ಥಳಿಸಿದ್ದರು. ಇಂದೋರ್ ನಲ್ಲಿ ಭೂಕಬಳಿಕೆ ವಿರುದ್ಧ ಅಧಿಕಾರಿಗಳು ಕಾರ್ಯಾಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಈ ಘಟನೆ ಜರುಗಿದೆ.

ಮೊದಲು ಆ ಅಧಿಕಾರಿ ಮತ್ತು ಆಕಾಶ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ಮಿತಿಮೀರುತ್ತಿದ್ದಂತೆ ಆಕಾಶ್ ಅವರು ಬ್ಯಾಟ್ ಬೀಸಲು ಆರಂಭಿಸಿದ್ದಾರೆ. ಆ ಅಧಿಕಾರಿಗಳು ಅಕ್ರಮವಾಗಿ ಕೆಲ ಕಟ್ಟಡಗಳನ್ನು ನೆಲಸಮ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಆಕಾಶ್ ಅವರು, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.

ಆ ಕಟ್ಟಡದಲ್ಲಿ ಜನರು ವಾಸಿಸುತ್ತಿದ್ದರೂ ಕಟ್ಟಡದ ಮಾಲಿಕ ಕಾರ್ಪೊರೇಷನ್ನಿಗೆ ಲಂಚ ನೀಡಿ ಅದನ್ನು ಕೆಡವಿಸುತ್ತಿದ್ದಾನೆ. ನಾನು ಕಾರ್ಪೊರೇಷನ್ ಅನ್ನು ಸಂಪರ್ಕಿಸಲು ಯತ್ನಿಸಿದರೂ ನನ್ನ ಕರೆಯನ್ನು ಸ್ವೀಕರಿಸುತ್ತಿಲ್ಲ. ನನಗೆ ಮತ ಹಾಕಿದ ಜನರನ್ನು ಕಾಪಾಡುವ ಜವಾಬ್ದಾರಿ ನನ್ನ ಮೇಲಿದೆ ಎಂದು ಆಕಾಶ್ ಅವರು ಪ್ರತಿಕ್ರಿಯಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+