ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿರತೆಗಳ ಆಗಮನ: ಭೂಸ್ವಾಧೀನದ ಆತಂಕದಲ್ಲಿ ಸ್ಥಳೀಯರು!

|
Google Oneindia Kannada News

ಭೋಪಾಲ್‌, ಸೆಪ್ಟೆಂಬರ್ 18: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಚಿರತೆಗಳ ಆಗಮನದ ಸಂಭ್ರಮದ ನಡುವೆ, ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಗ್ರಾಮಸ್ಥರು ಭೂಸ್ವಾಧೀನದ ಭಯ ಮತ್ತು ಚಿರತೆ ದಾಳಿಯ ಭಯದಿಂದ ಆತಂಕಗೊಂಡಿದ್ದಾರೆ.

ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ (ಕೆಎನ್‌ಪಿ) ನಮೀಬಿಯಾದಿಂದ ಬಂದ ಚಿರತೆಗಳಿಗೆ ಪ್ರಸಿದ್ಧವಾದ ನಂತರ ಪ್ರವಾಸಿಗರ ಹೆಚ್ಚಿದ ಜನಸಂಖ್ಯೆಯಿಂದ ಹೆಚ್ಚಿನ ಉದ್ಯೋಗಗಳು ಸೃಷ್ಟಿಸುತ್ತದೆ ಎಂದು ಕೆಲವರು ಆಶಾವಾದಿಗಳಾಗಿದ್ದಾರೆ. 1952 ರಲ್ಲಿ ಭಾರತದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂತತಿಯನ್ನು ಪುನರುಜ್ಜೀವನಗೊಳಿಸುವ ಯೋಜನೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನಮೀಬಿಯಾದಿಂದ ತಂದ ಎಂಟು ಚಿರತೆಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನದ ಕ್ವಾರಂಟೈನ್ ಆವರಣಕ್ಕೆ ಬಿಡುಗಡೆ ಮಾಡಿದರು.

ನಮೀಬಿಯಾದಿಂದ ಭಾರತಕ್ಕೆ ಬಂದ ಆ 8 ಚಿರತೆಗಳು ಎಲ್ಲಿವೆ ಮತ್ತು ಹೇಗಿವೆ?ನಮೀಬಿಯಾದಿಂದ ಭಾರತಕ್ಕೆ ಬಂದ ಆ 8 ಚಿರತೆಗಳು ಎಲ್ಲಿವೆ ಮತ್ತು ಹೇಗಿವೆ?

ಇಲ್ಲಿ ಸುತ್ತಲಿನ ನಾಲ್ಕೈದು ಹಳ್ಳಿಗಳನ್ನು ಉದ್ಯಾನವನಕ್ಕಾಗಿ ಸ್ಥಳಾಂತರಿಸಿದಾಗ ಸಂದರ್ಭ "ನನ್ನ ಸಣ್ಣ ಆಹಾರ ಮಳಿಗೆಗೆ ಏನಾಗುತ್ತದೆ? ಕಳೆದ 15 ವರ್ಷಗಳಿಂದ ಕುನೋ ಪಾರ್ಕ್‌ಗಾಗಿ 25 ಹಳ್ಳಿಗಳನ್ನು ಸ್ಥಳಾಂತರಿಸಿರುವುದರಿಂದ ನಾವು ಈಗಾಗಲೇ ಆರ್ಥಿಕವಾಗಿ ತೊಂದರೆಗೀಡಾಗಿದ್ದೇವೆ" ಎಂದು ಶಿಯೋಪುರ್-ಶಿವಪುರಿ ರಸ್ತೆಯಲ್ಲಿ ತಿಂಡಿ ಮತ್ತು ಚಹಾ ಮಾರಾಟ ಮಾಡುವ ಮಾರಾಟಗಾರ ರಾಧೇಶ್ಯಾಮ್ ಯಾದವ್ ಪಿಟಿಐ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಕುನೋ ರಾಷ್ಟ್ರೀಯ ಉದ್ಯಾನವನದಿಂದ 15 ಕಿ.ಮೀ ದೂರದ ಸೇಸಾಯಿಪುರದಲ್ಲಿ ಇವರ ಅಂಗಡಿ ಇದೆ. ಇದಲ್ಲದೆ ಅರಣ್ಯ ಸಮೀಪದ ಅಣೆಕಟ್ಟು ಯೋಜನೆಯಿಂದಾಗಿ ಸೇಸಾಯಿಪುರದ ಜನರು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುತ್ತಾರೆ ರಾಷ್ಟ್ರೀಯ ಉದ್ಯಾನವನಕ್ಕಾಗಿ ಗ್ರಾಮಗಳನ್ನು ಈ ಹಿಂದೆ ಸ್ಥಳಾಂತರಿಸಲಾಗಿತ್ತು. ಈಗ ಸಮೀಪದ ಕಟೀಲ ಪ್ರದೇಶದಲ್ಲಿ ಕುನೋ ನದಿಗೆ ಅಣೆಕಟ್ಟು ಯೋಜನೆ ಬರುತ್ತಿದೆ. ಈ ಯೋಜನೆಯು ಸೇಸಾಯಿಪುರಕ್ಕೆ ಸಂಪರ್ಕ ಹೊಂದಿರುವ ಕನಿಷ್ಠ 50 ಹಳ್ಳಿಗಳ ಮೇಲೆ ಪರಿಣಾಮ ಬೀರಲಿದೆ. ಅವುಗಳ ಸ್ಥಳಾಂತರದ ನಂತರ ಏನಾಗುತ್ತದೆ? ಸೆಸೈಪುರದಲ್ಲಿ ದಿನಸಿ, ಬಟ್ಟೆ ಮತ್ತು ಇತರ ಸಣ್ಣ ವ್ಯಾಪಾರ ಮಳಿಗೆಗಳಿಗೆ? ನಮ್ಮ ಗ್ರಾಮವು ಇಲ್ಲಿ ಏಕಾಂಗಿಯಾಗಿ ಉಳಿಯುತ್ತದೆ ಎಂಬ ಆತಂಕವನ್ನು ರೈತ ರಾಮಕುಮಾರ್ ಗುರ್ಜರ್ ವ್ಯಕ್ತಪಡಿಸಿದ್ದಾರೆ.

ಹೊಸದಾಗಿ ಬಂದಿರುವ ಚಿರತೆಗಳು ಹೆಚ್ಚಿನ ಪ್ರವಾಸಿಗರನ್ನು ಕೈಬೀಸಿ ಕರೆತರುವ ಬಗ್ಗೆ ಕೇಳಿದಾಗ ಆತಿಥ್ಯದ ವ್ಯವಹಾರವನ್ನು ಹೊರಗಿನ ಶ್ರೀಮಂತ ಜನರು ನಡೆಸುತ್ತಾರೆ. ಸ್ಥಳೀಯ ನಿವಾಸಿಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಸಣ್ಣ ಕೆಲಸಗಳನ್ನು ಮಾತ್ರ ಪಡೆಯುತ್ತಾರೆ ಎಂದು ಹೇಳಿದರು. ಮತ್ತೊಬ್ಬ ನಿವಾಸಿ ಸಂತೋಷ್ ಗುರ್ಜರ್ ಮಾತನಾಡಿ, ಹಳ್ಳಿಗಳ ಸ್ಥಳಾಂತರದ ನಂತರ, ದಿನಸಿ, ಗೊಬ್ಬರ ಮತ್ತು ಬೀಜಗಳನ್ನು ಮಾರಾಟ ಮಾಡುವ ಸ್ಥಳೀಯ ಅಂಗಡಿಯವನು ವ್ಯಾಪಾರದ ಕೊರತೆಯಿಂದ ಶಿವಪುರಿಗೆ ತೆರಳಬೇಕಾಯಿತು ಎಂದರು.

ರೆಸ್ಟೋರೆಂಟ್‌ಗಳಿಗಾಗಿ ಭೂಮಿ ಖರೀದಿಯಾಗ್ತಿದೆ

ರೆಸ್ಟೋರೆಂಟ್‌ಗಳಿಗಾಗಿ ಭೂಮಿ ಖರೀದಿಯಾಗ್ತಿದೆ

ಬಟ್ಟೆ ಅಂಗಡಿ ನಡೆಸುತ್ತಿರುವ ಧರ್ಮೇಂದ್ರ ಕುಮಾರ್ ಓಜಾ ಅವರು ಚಿರತೆಗಳು ಹಳ್ಳಿಗಳಿಗೆ ಪ್ರವೇಶಿಸಬಹುದು. ಈ ಯೋಜನೆಯಿಂದ ಸ್ಥಳೀಯ ಜನರಿಗೆ ಏನು ಸಿಗುತ್ತದೆ? ಹೊರಗಿನವರು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗಾಗಿ ಭೂಮಿಯನ್ನು ಖರೀದಿಸುತ್ತಿದ್ದಾರೆ. ಹಳ್ಳಿಗಳ ಸ್ಥಳಾಂತರವು ನಮ್ಮ ವ್ಯವಹಾರದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ಆದರೆ ಯೋಜನೆಯು ಮೂಲಸೌಕರ್ಯ ಅಭಿವೃದ್ಧಿಯನ್ನು ತರುತ್ತದೆ ಎಂದು ಅವರು ಹೇಳಿದರು.

ಹುಟ್ಟುಹಬ್ಬದ ದಿನದಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮೋದಿಹುಟ್ಟುಹಬ್ಬದ ದಿನದಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮೋದಿ

ಭವಿಷ್ಯದ ಬಗ್ಗೆ ನಾನು ಹೇಳಲಾರೆ

ಭವಿಷ್ಯದ ಬಗ್ಗೆ ನಾನು ಹೇಳಲಾರೆ

ರಾಷ್ಟ್ರೀಯ ಉದ್ಯಾನವನಕ್ಕೆ ಹೋಗುವ ರಸ್ತೆಯಲ್ಲಿ ಚಹಾ ಅಂಗಡಿಯನ್ನು ನಡೆಸುತ್ತಿರುವ ಸೂರತ್ ಸಿಂಗ್ ಯಾದವ್, ಚಿರತೆಯ ಮರುಪರಿಚಯ ಯೋಜನೆಯು ಈ ಪ್ರದೇಶದಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತದೆ. ಇಲ್ಲಿ ಭೂಮಿಯ ಬೆಲೆಗಳು ಹೆಚ್ಚಾಗುತ್ತಿವೆ. ಭೂಮಿಗೆ ಕಾನೂನುಬದ್ಧ ಹಕ್ಕು ಹೊಂದಿರುವವರು ಹೆಚ್ಚಿನ ಬೆಲೆಯನ್ನು ಕೇಳುತ್ತಿದ್ದಾರೆ. ಪ್ರಧಾನಿ ಕಾರ್ಯಕ್ರಮದಿಂದಾಗಿ ವ್ಯಾಪಾರದಲ್ಲಿ ತಾತ್ಕಾಲಿಕ ಜಿಗಿತವಿದೆ. ಆದರೆ ಭವಿಷ್ಯದ ಬಗ್ಗೆ ನಾನು ಹೇಳಲಾರೆ ಎಂದು ಅವರು ಹೇಳಿದರು.

ಭೂಮಿ ಬೆಲೆ ಏರಿಕೆಯಾಗಿದೆ

ಭೂಮಿ ಬೆಲೆ ಏರಿಕೆಯಾಗಿದೆ

ಇನ್ನೊಬ್ಬ ಅಂಗಡಿಯವ ಕೇಶವ ಶರ್ಮಾ ತನ್ನ ವ್ಯಾಪಾರ ಮೂರು ಪಟ್ಟು ಬೆಳೆದಿದೆ ಎಂದು ಹೇಳಿಕೊಂಡಿದ್ದು, ಭೂಮಿ ಬೆಲೆ ಏರಿಕೆಯಾಗಿದೆ. ಪ್ರವಾಸಿಗರು ಇಲ್ಲಿಗೆ ಮೊದಲು ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಈಗ ಅವರ ಸಂಖ್ಯೆ ಖಂಡಿತಾ ಹೆಚ್ಚಾಗಲಿದೆ ಎಂದರೆ, ಕೆಎನ್‌ಪಿಯ ಪ್ರವೇಶ ದ್ವಾರದಿಂದ ಎರಡು ಕಿಮೀ ದೂರದಲ್ಲಿರುವ ಟಿಕ್ಟೋಳಿ ಗ್ರಾಮದ ನಿವಾಸಿ ಕೈಲಾಶ್ ಎಂಬ ಕೂಲಿ ಕಾರ್ಮಿಕರು ಭವಿಷ್ಯದ ಬಗ್ಗೆ ಆತಂಕಗೊಂಡಿದ್ದರು.

ನಾವು ಎಲ್ಲಿಗೆ ಹೋಗಬೇಕು, ಕೃಷಿ ಬಿಟ್ಟು

ನಾವು ಎಲ್ಲಿಗೆ ಹೋಗಬೇಕು, ಕೃಷಿ ಬಿಟ್ಟು

ಟಿಕ್ಟೋಲಿಗೆ ಸೇರಿದ ಮತ್ತು ಪ್ರಸ್ತುತ ಶಿಯೋಪುರದಲ್ಲಿ ವಾಸಿಸುತ್ತಿರುವ ಕಮಲ್, ನನಗೆ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ, ಆದರೆ ಚಿರತೆ ಇಲ್ಲಿಗೆ ಬಂದಿರುವುದರಿಂದ ನನಗೆ ಭಯವಾಗಿದೆ. ನಾವು ಎಲ್ಲಿಗೆ ಹೋಗಬೇಕು. ಗ್ರಾಮಕ್ಕೆ ನೀರು ಸರಬರಾಜು, ದೂರವಾಣಿ ನೆಟ್‌ವರ್ಕ್ ಮತ್ತು ಉದ್ಯೋಗಗಳಿಲ್ಲ ಮತ್ತು ಜೀವನಾಧಾರದ ಏಕೈಕ ಮೂಲವೆಂದರೆ ಕೃಷಿ ಎಂದರು.

English summary
Amidst celebrations of the arrival of cheetahs in Kuno National Park on Prime Minister Narendra Modi's birthday, villagers in the surrounding areas of Madhya Pradesh's Sheopur district are worried about land grabs and cheetha attacks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X