• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫಾರ್ಮ್‌ಹೌಸ್‌ನಲ್ಲಿ ಹೊಸ ವರ್ಷ ಆಚರಣೆ: ಲಿಫ್ಟ್‌ ಕುಸಿದು 6 ಮಂದಿ ಸಾವು

|

ಇಂದೋರ್, ಜನವರಿ 1: ಫಾರ್ಮ್‌ಹೌಸ್‌ನಲ್ಲಿ ಹೊಸ ವರ್ಷ ಆಚರಣೆ ವೇಳೆ ಲಿಫ್ಟ್‌ ಕುಸಿದು ಆರು ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಹೊಸ ವರ್ಷದ ಸಂಭ್ರಮವನ್ನು ಬರಮಾಡಿಕೊಳ್ಳಬೇಕಿದ್ದವರು ಸಾವಿನ ಮನೆಯ ಕದ ತಟ್ಟಿದ್ದಾರೆ.ಮಧ್ಯಪ್ರದೇಶದ ಉದ್ಯಮಿ ಪುನೀತ್ ಅಗರವಾಲ್ ಮನೆಯಲ್ಲಿ ಮಂಗಳವಾರ ರಾತ್ರಿ ಹೊಸ ವರ್ಷಾಚರಣೆಗೆ ಪಾರ್ಟಿ ಆಯೋಜಿಸಲಾಗಿತ್ತು. ಅದಕ್ಕಾಗಿ ಗೆಳೆಯರನ್ನು, ಕುಟುಂಬದವರನ್ನು ಆಹ್ವಾನಿಸಿದ್ದರು.

ಹೊಸ ವರ್ಷದ ಮೊದಲ ದಿನ ಪಾರ್ಕಿನಲ್ಲಿ ಬೆತ್ತಲಾಗಿ ಓಡಾಡಿದ ಯುವಕ

ಈ ವೇಳೆ ಪಾರ್ಟಿಗೆ ಬಂದವರು ಲಿಫ್ಟ್​ನಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಲಿಫ್ಟ್​ ಕುಸಿದ ಪರಿಣಾಮ 6 ಮಂದಿ ಮೃತಪಟ್ಟಿದ್ದಾರೆ. ಘಟನೆ ನಡೆದ ಕೂಡಲೆ ಆ್ಯಂಬುಲೆನ್ಸ್​ಗೆ ಕರೆ ಮಾಡಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದರೂ 6 ಜನ ಕೊನೆಯುಸಿರೆಳೆದಿದ್ದಾರೆ.

ಲಿಫ್ಟ್​ನ ಬೆಲ್ಟ್​ ತುಂಡಾಗಿದ್ದರಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಈ ಅವಘಡದಲ್ಲಿ ಸಾವನ್ನಪ್ಪಿದವರೆಲ್ಲರೂ ಅಗರವಾಲ್ ಅವರ ಸಂಬಂಧಿಕರು ಮತ್ತು ಗೆಳೆಯರು ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಧರ್ಮರಾಜ್ ಮೀನಾ ತಿಳಿಸಿದ್ದಾರೆ.

English summary
Lift falls During New Year Celebration cause to 6 people death in Madhya Pradesh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X