• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಳಗೆ ಆಗಿದ್ದೇನು?: ಗರ್ಲ್ ಫ್ರೆಂಡ್ ಜೊತೆ ಲಾಡ್ಜ್‌ಗೆ ಹೋಗಿದ್ದ ಗೆಳಯ ಹೆಣವಾಗಿ ಹೊರ ಬಂದ!

|
Google Oneindia Kannada News

ಭೋಪಾಲ್, ಜುಲೈ 5: ಆಧುನಿಕತೆಗೆ ಒಗ್ಗಿಕೊಳ್ಳಲು ಶುರು ಮಾಡಿರುವ ಯುವಕ-ಯುವತಿಯರು ಪ್ರೀತಿಗೆ ಬೇರೆಯದ್ದೇ ಅರ್ಥ ಕೊಡುವುದಕ್ಕೆ ಹೊರಟಿದ್ದಾರೆ. ಈಗಿನ ಜಮಾನಾದಲ್ಲಿ ಪ್ರೀತಿ ಅಂದರೆ ಪಾರ್ಕ್ ಬದಲಿಗೆ ಲಾಡ್ಜ್ ರೂಮುಗಳಿಗೆ ಹೋಗುವವರ ಸಂಖ್ಯೆಯಲ್ಲಿ ಕೊಂಚ ಏರಿಕೆ ಆಗುತ್ತಿದೆ.

ಅದೇ ರೀತಿ ತಾನು ಪ್ರೀತಿಸಿದ ಗೆಳತಿಯನ್ನು ಲಾಡ್ಜ್ ರೂಮಿಗೆ ಕರೆದುಕೊಂಡು ಹೋದ ವ್ಯಕ್ತಿಯೊಬ್ಬನ ಕಥೆ ಹೇಗೆ ದುರಂತ ಅಂತ್ಯ ಕಂಡಿದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಇಲ್ಲಿ ಪ್ರೀತಿಸಿದವಳ ತಪ್ಪು ಏನಿಲ್ಲ, ಪ್ರೀತಿಸಿದ ಆ ವ್ಯಕ್ತಿಯ ತಪ್ಪೂ ಏನಿಲ್ಲ. ಆದರೆ ಲಾಡ್ಜ್ ರೂಮಿಗೆ ಹೋಗಿದ್ದೇ ನೋಡಿ ತಪ್ಪಾಯಿತು.

ಯುವಕ-ಯುವತಿಯರೇ ಎಚ್ಚರ: ಮದುವೆ ಆಗದಿದ್ದರೆ 'ಹೃದಯ'ಕ್ಕೆ ಆಪತ್ತು! ಯುವಕ-ಯುವತಿಯರೇ ಎಚ್ಚರ: ಮದುವೆ ಆಗದಿದ್ದರೆ 'ಹೃದಯ'ಕ್ಕೆ ಆಪತ್ತು!

ಫೇಸ್ ಬುಕ್ ಮೂಲಕ ಹುಟ್ಟಿದ ಪ್ರೀತಿ, ಮದುವೆಯ ಹೊಸ್ತಿಲವರೆಗೂ ಹೋಗಿತ್ತು. ಇನ್ನೇನು ದಾಂಪತ್ಯ ಬದುಕಿಗೆ ಕಾಲಿಡಬೇಕು ಎನ್ನುವಷ್ಟರಲ್ಲೇ ಯುವಕನ ಬದುಕು ಹೇಗೆ ದುರಂತವಾಯಿತು. ಇದೊಂದು ವರದಿಯಿಂದ ಯುವ ಪ್ರೇಮಿಗಳು ಯಾವ ರೀತಿ ಪಾಠ ಕಲಿಯಬೇಕಿದೆ ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

ಹಳೆ ಲವ್ವರ್ ಮಸಲತ್ತು; ಸ್ಫೋಟವಾಯ್ತು ಮದುವೆ ಮನೆಯಲ್ಲಿ ನೀಡಿದ ಆ ಗಿಫ್ಟು! ಹಳೆ ಲವ್ವರ್ ಮಸಲತ್ತು; ಸ್ಫೋಟವಾಯ್ತು ಮದುವೆ ಮನೆಯಲ್ಲಿ ನೀಡಿದ ಆ ಗಿಫ್ಟು!

 ಫೇಸ್ ಬುಕ್ ಮೂಲಕ ಸಿಕ್ಕ ಗೆಳತಿಯ ಜೊತೆಗೆ ಪ್ರೀತಿ

ಫೇಸ್ ಬುಕ್ ಮೂಲಕ ಸಿಕ್ಕ ಗೆಳತಿಯ ಜೊತೆಗೆ ಪ್ರೀತಿ

ಅದು ಫೇಸ್ ಬುಕ್ ಮೂಲಕ ಪರಿಚಯವಾದ ಸ್ನೇಹ. ಮೂರು ವರ್ಷದ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಮಧ್ಯಪ್ರದೇಶದ 28 ವರ್ಷದ ಅಜಯ್ ಪಾರ್ಟೆಕಿ ಮತ್ತು ಚಿದ್ವಾಡಾ ಮೂಲದ 23 ವರ್ಷದ ನರ್ಸ್ ನಡುವೆ ಮದುವಯ ಮಾತುಕತೆಯೂ ನಡೆದಿತ್ತು. ಯುವತಿ ತಾಯಿ ಬಳಿ ಮದುವೆಯ ಕುರಿತಾಗಿಯೂ ಅಜಯ್ ಪರ್ಟೆಕಿ ಪ್ರಸ್ತಾಪವನ್ನು ಇಟ್ಟಿದ್ದರು. ಇಬ್ಬರ ಪ್ರೀತಿಯ ವಿಷಯ ಎರಡೂ ಮನೆಯವರಿಗೂ ಗೊತ್ತಿತ್ತು. ಆದರೆ ಅಲ್ಲಿಂದ ಮುಂದೆ ಯುವಕ ಆಯ್ಕೆ ಮಾಡಿಕೊಂಡ ದಾರಿ ಮಾತ್ರ ಇಂದು ಸಾವಿಗೆ ಕಾರಣವಾಗಿ ಬಿಟ್ಟಿತು.

 ಗರ್ಲ್ ಫ್ರೆಂಡ್ ಜೊತೆ ರೂಮಿಗೆ ಹೋಗಿದ್ದ ಲವ್ವರ್ ಬಾಯ್

ಗರ್ಲ್ ಫ್ರೆಂಡ್ ಜೊತೆ ರೂಮಿಗೆ ಹೋಗಿದ್ದ ಲವ್ವರ್ ಬಾಯ್

ವೃತ್ತಿಯಲ್ಲಿ ಚಾಲಕನಾಗಿದ್ದ ಅಜಯ್ ಪರ್ಟೆಕಿ ತನ್ನ ಗೆಳತಿಯ ಜೊತೆಗೆ ಕಳೆದ ಭಾನುವಾರ ಸಾವೊನೆರ್‌ನ ಲಾಡ್ಜ್‌ಗೆ ತೆರಳಿದ್ದನು. ಸರಿಯಾಗಿ ಸಂಜೆ 4 ಗಂಟೆಯ ವೇಳೆಗೆ ಲಾಡ್ಜ್ ರೂಮಿಗೆ ಇಬ್ಬರು ಪ್ರೇಮಿಗಳು ಸೇರಿದರು. ಅಲ್ಲಿಂದ ಮುಂದೆ ಪ್ರೇಮಿಗಳು ಅಂದುಕೊಂಡಿದ್ದೇ ಬೇರೆ, ಆದರೆ ಅಲ್ಲಿ ನಡೆದಿದ್ದೇ ಬೇರೆ. ಲಾಡ್ಜ್ ರೂಮ್ ಪ್ರವೇಶಿಸಿದ ವ್ಯಕ್ತಿಯ ಕೇವಲ ಅರ್ಧ ಗಂಟೆಯಲ್ಲೇ ಹೆಣವಾಗಿ ಬಿಟ್ಟನು.

 ಪ್ರೇಮಿಗಳ ಮಧ್ಯೆ ಲಾಡ್ಜ್ ರೂಮಿನಲ್ಲಿ ನಡೆದಿದ್ದೇನು?

ಪ್ರೇಮಿಗಳ ಮಧ್ಯೆ ಲಾಡ್ಜ್ ರೂಮಿನಲ್ಲಿ ನಡೆದಿದ್ದೇನು?

ಅಚ್ಚರಿ ಎನ್ನಿಸಿದರೂ ಇದೊಂದು ಸತ್ಯ ಸಂಗತಿ. ಪ್ರಿಯತಮೆ ಜೊತೆಗೆ ಲೈಂಗಿಕ ಸಂಪರ್ಕ ಬೆಳಸುವ ಆತುರದಲ್ಲಿ ಲಾಡ್ಜ್ ರೂಮ್ ಸೇರಿದ ಅಜಯ್ ಪರ್ಟೆಕ್ ಬೆಡ್ ಮೇಲೆ ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದನು. ಆತನ ಜೊತೆಗೆ ಹೋಗಿದ್ದ ಯುವತಿ ಕೂಡ ಅದನ್ನು ಕಂಡು ಶಾಕ್ ಆದಳು. ತಕ್ಷಣ ಲಾಡ್ಜ್ ಆಡಳಿತ ಮಂಡಳಿ ಸಿಬ್ಬಂದಿಗೆ ತನ್ನ ಗೆಳಯ ಕುಸಿದು ಬಿದ್ದಿರುವ ಬಗ್ಗೆ ಮಾಹಿತಿ ನೀಡಿದಳು. ದಿಢೀರನೇ ರೂಮಿಗೆ ತೆರಳಿದ ಸಿಬ್ಬಂದಿಯು ಅಜಯ್ ಅನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದರು. ಆದರೆ ಅಷ್ಟರಲ್ಲೇ ಉಸಿರು ಚೆಲ್ಲಿದ್ದ ಅಜಯ್ ಸಾವಿಗೆ ಕಾರಣ ಹೃದಯ ಸ್ತಂಭನ (ಹಾರ್ಟ್ ಅಟ್ಯಾಕ್) ಕಾರಣ ಎಂದು ವೈದ್ಯರು ಖಾತ್ರಿಪಡಿಸಿದರು.

 ಖಾಕಿ ಟೀಮ್ ಕಣ್ಣಿಗೆ ಬಿದ್ದ ಅಸಲಿ ಕಥೆಯೇನು?

ಖಾಕಿ ಟೀಮ್ ಕಣ್ಣಿಗೆ ಬಿದ್ದ ಅಸಲಿ ಕಥೆಯೇನು?

ಅಜಯ್ ಪರ್ಟೆಕಿ ತಮ್ಮ ಗೆಳತಿಯ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಸಂದರ್ಭದಲ್ಲಿ ಕುಸಿದು ಬಿದ್ದರು ಎಂದು ಯುವತಿ ಹೇಳಿದ್ದಾರೆ. "ಮೃತ ವ್ಯಕ್ತಿಯು ಸಾವಿಗೂ ಪೂರ್ವದಲ್ಲಿ ಯಾವುದೇ ರೀತಿಯ ಔಷಧಿಯನ್ನು ಸೇವಿಸಿರುವ ಬಗ್ಗೆ ನಮಗೆ ಪುರಾವೆಗಳು ಸಿಕ್ಕಿಲ್ಲ. ವ್ಯಕ್ತಿಯ ಬಳಿ ಯಾವುದೇ ಮಾದಕ ದ್ರವ್ಯದ ಕವರ್ ಪತ್ತೆಯಾಗಿಲ್ಲ. ತನ್ನ ಎದುರಿನಲ್ಲಿ ಅಜಯ್ ಯಾವುದೇ ರೀತಿ ಔಷಧಿ ಮತ್ತು ಮಾದಕ ದ್ರವ್ಯವನ್ನು ಸೇವಿಸಿರಲಿಲ್ಲ ಎಂದು ಯುವತಿ ಕೂಡಾ ತಿಳಿಸಿದ್ದಾಳೆ. ಅದಾಗ್ಯೂ, ಮೃತ ವ್ಯಕ್ತಿಯ ರಕ್ತವನ್ನು ರಾಸಾಯನಿಕ ಪರೀಕ್ಷೆಗೆ ರವಾನಿಸಲಾಗಿದೆ," ಎಂದು ಸಾವೊನೆರ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ (ಎಪಿಐ) ಸತೀಶ್ ಪಾಟೀಲ್ ತಿಳಿಸಿದ್ದಾರೆ. ಇನ್ನು ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರು ಸಾವಿಗೆ ಪ್ರಾಥಮಿಕ ಕಾರಣ ಹೃದಯಾಘಾತ ಎಂದು ಸೂಚಿಸಿದ್ದಾರೆ. ಸಾವೋನರ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.

 ಲೈಂಗಿಕ ಚಟುವಟಿಗೆ ವೇಳೆ ಸಾವಿನ ಅಪಾಯವೂ ಇರುತ್ತೆ

ಲೈಂಗಿಕ ಚಟುವಟಿಗೆ ವೇಳೆ ಸಾವಿನ ಅಪಾಯವೂ ಇರುತ್ತೆ

ಲೈಂಗಿಕ ಸಮಯದಲ್ಲಿ ಹೃದಯ ಸ್ತಂಭನದಿಂದ ಸಾಯುವುದು ತೀರಾ ಅಪರೂಪವಾದರೂ ಅದು ಸಾಧ್ಯವಾಗಿರುತ್ತದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ಆನಂದ್ ಸಂಚೇತಿ ಹೇಳಿದ್ದಾರೆ. "20ರ ದಶಕದ ಮಧ್ಯ ವಯಸ್ಸಿನ ಯುವಜನರಲ್ಲಿಯೂ ರೋಗನಿರ್ಣಯ ಮಾಡದ ಪರಿಧಮನಿಯ (ಹೃದಯ ಸಂಬಂಧಿ) ಕಾಯಿಲೆಯು ಮಾರಕವಾಗಬಹುದು. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೆಚ್ಚು ಅಡೆತಡೆಗಳು ಕಾಣುತ್ತಿವೆ. ಯಾರಿಗಾದರೂ ಸಂಸ್ಕರಿಸದ ಪರಿಧಮನಿಯ ಕಾಯಿಲೆ ಇದ್ದರೆ, ಲೈಂಗಿಕತೆಯಂತಹ ಪರಿಶ್ರಮದಾಯಕ ಚಟುವಟಿಕೆಗಳಲ್ಲಿ ಅದು ಮಾರಣಾಂತಿಕವಾಗಲಿದೆ ಎಂಬುದು ಸಾಬೀತಾಗಿದೆ," ಎಂದು ಸಂಚೇತಿ ಹೇಳಿದರು.

 ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದಾಗಲೇ ಸಾವು ಹೇಗೆ ಸಾಧ್ಯ?

ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದಾಗಲೇ ಸಾವು ಹೇಗೆ ಸಾಧ್ಯ?

ಪರಿಶ್ರಮದಾಯಕ ಚಟುವಟಿಕೆಗಳನ್ನು ಮಾಡುತ್ತಿರುವ ಸಂದರ್ಭದಲ್ಲಿ ಹೃದಯ ಸ್ನಾಯುಗಳಿಗೆ ರಕ್ತ ಮತ್ತು ಆಮ್ಲಜನಕದ ಅವಶ್ಯಕತೆ ಹೆಚ್ಚಾಗಿರುತ್ತದೆ ಎಂದು ಸಂಚೇತಿ ವಿವರಿಸಿದರು. ಅಲ್ಲದೇ ಅದನ್ನು ಪೂರೈಸದಿದ್ದರೆ ಜೀವಕ್ಕೆ ಮಾರಕವಾಗಬಹುದು, ಇದರಿಂದ ಹೃದಯ ಸ್ನಾಯುಗಳ ದಪ್ಪವಾಗುವುದು(ಹೈಪರ್ಟ್ರೋಫಿಕ್ ಕಾರ್ಡಿಯಾಕ್ಮಿಯೋಪತಿ) ಸಮಸ್ಯೆಯಿಂದ ಬಳಲುತ್ತಿರುವ ಜನರು ಲೈಂಗಿಕತೆಯಂತಹ ಚಟುವಟಿಕೆಯ ಸಮಯದಲ್ಲಿ ಮೃತಪಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂಬುದನ್ನು ಒತ್ತಿ ಹೇಳಿದರು. "ಸಾಮಾನ್ಯವಾಗಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿರುವ ಸಮಯದಲ್ಲಿ ಹೃದಯ ಬಡಿತ ಮತ್ತು ರಕ್ತದೊತ್ತಡ ಹೆಚ್ಚಾಗುತ್ತದೆ, ಇದೂ ಕೂಡ ಸಾವಿಗೆ ಕಾರಣವಾಗಬಹುದು. ಈಗಿನ ಕಾಲದಲ್ಲಿ ಜನರು ತಮ್ಮ ಹೃದಯದ ಬಗ್ಗೆ ಮೊದಲಿಗಿಂತಲೂ ಹೆಚ್ಚು ಕಾಳಜಿ ವಹಿಸಬೇಕಾಗಿದೆ," ಎಂದು ಹೇಳಿದರು.

English summary
Nagpur: Ajay Parteki, 28, died at a lodge in Saoner while having physical relations with his girlfriend after suffering heart attack. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X