ಕೊರೊನಾ ಕೇಕೆ: ಮಧ್ಯಪ್ರದೇಶದ ಅದೊಂದು ನಗರವೇ ಡೇಂಜರ್!

ಇಂದೋರ್, ಏಪ್ರಿಲ್.30: ನೊವೆಲ್ ಕೊರೊನಾ ವೈರಸ್ ಸೋಂಕಿನಿಂದಲ ನಲುಗಿದ ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶ ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಮಹಾಮಾರಿ ಕೊವಿಡ್-19ಗೆ 130ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ.

ರಾಜ್ಯದಲ್ಲಿ ಪತ್ತೆಯಾಗಿರುವ ಒಟ್ಟು ಕೊರೊನಾ ವೈರಸ್ ಸೋಂಕಿತರ ಪೈಕಿ ಅರ್ಧದಷ್ಟು ಸೋಂಕಿತರು ಇಂದೋರ್ ನಗರವೊಂದರಲ್ಲೇ ಪತ್ತೆಯಾಗಿದ್ದಾರೆ. ಇಂದೋರ್ ನಗರವು ಚೀನಾದ ವುಹಾನ್ ನಗರದಂತೆ ಆಗಿ ಬಿಟ್ಟಿದೆ. ಬುಧವಾರ ಒಂದೇ ದಿನ ಇಂದೋರ್ ನಲ್ಲಿ 19 ಮಂದಿಗೆ ನೊವೆಲ್ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ.

ಬುಧವಾರದ ಅಂಕಿ-ಅಂಶಗಳ ಪ್ರಕಾರ, ಇಂದೋರ್ ನಲ್ಲಿ 19 ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದು, ನಗರವೊಂದರಲ್ಲೇ ಸೋಂಕಿತರ ಸಂಖ್ಯೆಯು 1,485ಕ್ಕೆ ಏರಿಕೆಯಾಗಿದೆ. ಇನ್ನು, ಇಂದೋರ್ ನಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆಯು 68ಕ್ಕೆ ಏರಿಕೆಯಾಗಿದೆ ಎಂದು ಇಂದೋರ್ ವೈದ್ಯಕೀಯ ಮತ್ತು ಆರೋಗ್ಯ ಮುಖ್ಯಾಧಿಕಾರಿ ಡಾ.ಪ್ರವೀಣ್ ಜಾಡಿಯಾ ತಿಳಿಸಿದ್ದಾರೆ.

19 Novel Coronavirus Cases Found In Indore, Total Number Rise To 1,485

ಭಾರತದಲ್ಲಿ ಅತಿಹೆಚ್ಚು ಸೋಂಕಿತರಿರುವ 4ನೇ ರಾಜ್ಯ:

ಮಧ್ಯಪ್ರದೇಶವು ಭಾರತದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಈವರೆಗೂ 130ಕ್ಕೂ ಅಧಿಕ ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. 2,560 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, 461 ಮಂದಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಉಳಿದಂತೆ 1,949 ಮಂದಿ ಸೋಂಕಿತರಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+