Zomato: ಬೆಂಗಳೂರು Vs ಚೆನ್ನೈ ಸಾಂಬಾರ್ ಎಂದ ಝೊಮ್ಯಾಟೊ; ನಮಗೆ ಸ್ವಿಗ್ಗಿ ಸಾಕು ಎಂದ ನೆಟ್ಟಿಗರು

Zomato: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಚೆನ್ನೈ ಸೂಪರ್ ಕಿಂಗ್ಸ್‌ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ದಾಖಲಿಸಿದೆ. ಸಿಎಸ್‌ಕೆ ವಿರುದ್ಧ ಆರ್‌ಸಿಬಿಯು 43 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳ ಸುರಿಮಳೆ ಶುರುವಾಗಿದೆ. ಝೊಮ್ಯಾಟೊ / Zomato ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್‌ವೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ಹೌದು, ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವು ದಾಖಲಿಸಿದ ಮೇಲೆ Zomato ಬೆಂಗಳೂರು ಸಾಂಬಾರ್ Vs ಚೆನ್ನೈ ಸಾಂಬಾರ್ (Bengaluru sambar > Chennai sambar) #RCBvCSK ಎಂದು ಪೋಸ್ಟ್‌ ಮಾಡಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್‌ ವೈರಲ್ ಆಗುತ್ತಿದ್ದು. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Zomato

Zomato: ನೆಟ್ಟಿಗರು ಹೇಳಿದ್ದೇನು

ಇನ್ನು Zomato ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು Zomato App ಅನ್‌ಇನ್‌ಸ್ಟಾಲ್ ಮಾಡುತ್ತಿರುವುದಾಗಿ ಹೇಳಿದ್ದಾರೆ. ಸಿಎಸ್‌ಕೆ ಅಭಿಮಾನಿಯೊಬ್ಬರು ಈ ಹಿಂದೆ ನೀವು ಯಾವಾಗ CSK vs RCB ಪಂದ್ಯದಲ್ಲಿ ಈ ರೀತಿ ಟ್ವೀಟ್ ಮಾಡಿದ್ದೀರಿ, CSK RCB ಗಿಂತ ಉತ್ತಮ ಎಂದು ಹೇಳಿದ್ದೀರಿ, ಈಗ ಅಭಿಮಾನಿಗಳ ಭಾವನೆಗಳೊಂದಿಗೆ ಮತ್ತು ಆಹಾರವನ್ನು ಹೋಲಿಸುವುದರೊಂದಿಗೆ ಏಕೆ ಆಟವಾಡುತ್ತಿದ್ದೀರಿ ಎಂದೂ ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. ಝೊಮ್ಯಾಟೊ ಪ್ರಯತ್ನಿಸಿತು; ಪೂರ್ಣಗೊಳಿಸಿದ್ದು ಮಾತ್ರ ಬೆಂಗಳೂರು ಎಂದು ಆರ್‌ಸಿಬಿ ಅಭಿಮಾನಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಎಲ್‌ಪಿಜಿ ಕೊರತೆಯಿಂದಾಗಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಸಾಂಬಾರ್ ಕೂಡ ನೀಡುತ್ತಿಲ್ಲ. 2 ದಿನಗಳ ಹಿಂದೆ ನಾನು ತಮಿಳುನಾಡಿನಲ್ಲಿ ಅನಿಯಮಿತ ಸಾಂಬಾರ್ ತಿಂದಿದ್ದೆ ಎಂದು ಸಿಎಸ್‌ಕೆ ಫ್ಯಾನ್ಸ್‌ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಆರ್‌ಸಿಬಿ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.

ಮಹಾರಾಷ್ಟ್ರ ಸಾಂಬಾರ್

ಇನ್ನು ಬೆಂಗಳೂರು Vs ಚೆನ್ನೈ ಸಾಂಬಾರ್‌ನ ನಡುವೆ ಮಹಾರಾಷ್ಟ್ರದ ಸಾಂಬಾರ್ ಎನ್ನುವ ಚರ್ಚೆಯೂ ನಡೆದಿದೆ. ಸಾಂಬಾರ್ ಈ ಯಾವುದೇ ನಗರಗಳು ಅಥವಾ ರಾಜ್ಯಗಳಿಗೆ ಸೇರಿಲ್ಲ. ಇದನ್ನು ಮರಾಠಾ ಆಡಳಿತಗಾರರು ಛತ್ರಪತಿ ಸಂಭಾಜಿ ಮಹಾರಾಜರ ಗೌರವಾರ್ಥವಾಗಿ ಕಂಡುಹಿಡಿದರು. ನಿಮ್ಮ ಇತಿಹಾಸ ಪುಸ್ತಕಗಳನ್ನು ರಿಫ್ರೆಶ್ ಮಾಡಿ ಎಂದೂ ಮತ್ತೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಚೆನ್ನೈ ಬಿರಿಯಾನಿ > ಬೆಂಗಳೂರು ಬಿರಿಯಾನಿ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ. ಸಾಂಬಾರ್ ಬಿಡಿ ಬಿರಿಯಾನಿಯಲ್ಲಿ ಯಾರು ಬೆಸ್ಟ್‌ ಹೇಳಿ ಎಂದೂ ಕೆಲವು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+