Zomato New Feature: ಜೊಮ್ಯಾಟೊದಲ್ಲಿ ಇನ್ಮುಂದೆ ಕಡಿಮೆ ಬೆಲೆಗೆ ಸಿಗಲಿದೆ ಫುಡ್!
ಫುಡ್ ಆರ್ಡರ್ ಆ್ಯಪ್‌ಗಳಲ್ಲಿ ಜೊಮ್ಯಾಟೊ (Zomato) ಪ್ರಮುಖವಾಗಿದೆ. ಈ ಆ್ಯಪ್‌ನಲ್ಲಿ ದಿನವೂ ಲಕ್ಷಾಂತರ ಜನ ಫುಡ್ ಆರ್ಡರ್ ಮಾಡ್ತಾರೆ. ಆದರೆ, ಈ ಆ್ಯಪ್‌ನಲ್ಲಿ ದಿನವೂ ಸಹ ಸಾವಿರಾರು ಜನ ಅವರು ಆರ್ಡರ್ ಮಾಡಿದ ಆಹಾರವನ್ನು ಕ್ಯಾನ್ಸಲ್ ಮಾಡುವುದು ಸಹ ಹೆಚ್ಚು. ಇದೀಗ ಈ ರೀತಿ ಆಹಾರ ಪೋಲಾಗುವುದು (ವೇಸ್ಟ್) ತಪ್ಪಿಸುವುದು ಹಾಗೂ ಗ್ರಾಹಕರಿಗೆ ಬೆಲೆ ಇಳಿಕೆ ಮಾಡುವ ಮಹತ್ವ ಯೋಜನೆಯೊಂದನ್ನು ಜೊಮ್ಯಾಟೊ ಇದೀಗ ಪರಿಚಯಿಸಿದೆ. ಜೊಮ್ಯಾಟೊದ ಹೊಸ ಆಪ್ಷನ್‌ಗೆ ಆಹಾರ ಪ್ರಿಯರು ಫಿದಾ ಆಗಿದ್ದಾರೆ. ಏನಿದು Food Rescue (ಆಹಾರ ಉಳಿತಾಯ ಯೋಜನೆ) ಇಲ್ಲಿದೆ ಸಂಪೂರ್ಣ ಮಾಹಿತಿ.
ಫುಡ್ ಡೆಲಿವರಿ ಆ್ಯಪ್‌ಗಳು ಸಾಕಷ್ಟು ಬದಲಾವಣೆಗಳನ್ನು ತಂದಿವೆ. ಈ ಆ್ಯಪ್‌ಗಳಿಂದ ಜನ ರಾತ್ರಿ ಸಹ ಫುಡ್ ಆರ್ಡರ್ ಮಾಡಿ ಆಹಾರ ತರಿಸಿಕೊಳ್ಳುವುದಕ್ಕೆ ಅವಕಾಶ ಸಿಕ್ಕಿದೆ. ಮಧ್ಯರಾತ್ರಿಯಲ್ಲೂ ಜನ ಫುಡ್ ಬುಕ್‌ಮಾಡಿ, ತಮಗೆ ಇಷ್ಟವಾದ ಫೂಡ್‌ಗಳನ್ನು ಆರ್ಡರ್ ಮಾಡಿಕೊಳ್ಳಬಹುದಾಗಿದೆ. ಆದರೆ, ಬೆಲೆ ಏರಿಕೆ ನಿರಂತರವಾಗಿ ಆಗುತ್ತಲ್ಲೇ ಇದ್ದು, ಫುಡ್ ಆರ್ಡರ್ ಮಾಡುವುದಕ್ಕೆ ಜನ ಹಿಂದೇಟು ಹಾಕುತ್ತಲ್ಲೇ ಇದ್ದಾರೆ. ಇದೀಗ ಜೊಮ್ಯಾಟೊ ಹೊಸ ಆಪ್ಷನ್ ಪರಿಚಯ ಮಾಡಿದೆ. ಇದರ ಮೂಲಕ ಆಹಾರ ಪೋಲಾಗುವುದನ್ನು ಸಹ ತಡೆಯುವುದಕ್ಕೆ ಜೊಮ್ಯಾಟೊ ಮುಂದಾಗಿದೆ.

ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಅವರು ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು, Zomato ನಲ್ಲಿ ಆರ್ಡರ್ ರದ್ದು ಮಾಡುವುದನ್ನು ನಾವು ಪ್ರೋತ್ಸಾಹಿಸುವುದಿಲ್ಲ. ಗ್ರಾಹಕರು ಈ ರೀತಿ ಆರ್ಡರ್ ಕ್ಯಾನ್ಸಲ್ ಮಾಡುವುದರಿಂದ ಅಪಾರ ಪ್ರಮಾಣದ ಆಹಾರ ವ್ಯರ್ಥವಾಗಲಿದೆ. ಹೀಗಾಗಿ, ಈ ಆಪ್ಷನ್ ಅನ್ನು ನಾವು ಪ್ರೋತ್ಸಾಹ ನೀಡುವುದಿಲ್ಲ ಎಂದಿದ್ದಾರೆ.
ಡೆಲಿವರಿ ಕ್ಯಾನ್ಸಲ್ ಮಾಡುವುದರಿಂದ ನಮಗೆ ಹಾಗೂ ರೆಸ್ಟೋರೆಂಟ್ ಉದ್ಯಮಗಳಿಗೆ ನಷ್ಟವಾಗುತ್ತದೆ. ಇದು ಆರ್ಥಿಕ ವಿಚಾರಕ್ಕಿಂತಲೂ ಆಹಾರ ಪೋಲಾಗುವ (ವ್ಯರ್ಥವಾಗುವ) ವಿಷಯವಾಗಿದೆ. ಈ ರೀತಿ ಆರ್ಡರ್‌ಗಳನ್ನು ರದ್ದುಪಡಿಸುವುದರಿಂದ ಆಹಾರ ವ್ಯರ್ಥವಾಗುತ್ತದೆ. ಆಹಾರ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸುವುದು ನಮ್ಮ ಕಾಳಜಿಯಾಗಿದೆ ಎಂದು ಅವರು ಹೇಳಿದ್ದಾರೆ.
We don't encourage order cancellation at Zomato, because it leads to a tremendous amount of food wastage.
— Deepinder Goyal (@deepigoyal) November 10, 2024
Inspite of stringent policies, and and a no-refund policy for cancellations, more than 4 lakh perfectly good orders get canceled on Zomato, for various reasons by customers.… pic.twitter.com/fGFQQNgzGJ
ಹೊಸ ಆಯ್ಕೆ ಪರಿಚಯಿಸಿದ Zomato: ಇದೀಗ Zomato ಹೊಸ ಆಪ್ಷನ್‌ವೊಂದನ್ನು ಪರಿಚಯಿಸಿದೆ. ಇದರಿಂದ ಆಹಾರ ವೇಸ್ಟ್ ಆಗುವುದು ತಪ್ಪುತ್ತದೆ ಅಲ್ಲದೇ ಅಲ್ಲೇ ಹತ್ತಿರದಲ್ಲಿ ಇನ್ನೊಂದು ಆರ್ಡರ್ ಮಾಡಿರುವವರಿಗೆ ಇದು ತಲುಪಲಿದೆ!. ಇದೀಗ ಜೊಮ್ಯಾಟೊ Food Rescue (ಆಹಾರ ಉಳಿತಾಯ ಯೋಜನೆ) ಎನ್ನುವ ಪ್ಲಾನ್ ಪರಿಚಯಿಸಲಿದೆ ಎಂದು ಅವರು ಹೇಳಿದ್ದಾರೆ. ಇದನ್ನು (being scaled as we speak) ನಾವು ಭರವಸೆ ನೀಡಿದಂತೆ ನಡೆದುಕೊಳ್ಳಲಿದ್ದೇವೆ ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
Zomatoದಲ್ಲಿ ಯಾರಾದರೂ ಗ್ರಾಹಕರು ಫೂಡ್ ಆರ್ಡರ್ ಕ್ಯಾನ್ಸಲ್ ಮಾಡಿದರೆ, ಆ ಆರ್ಡರ್ ಕ್ಯಾನ್ಸಲ್ ಮಾಡಿದ ಜಾಗದಲ್ಲಿ ಫುಡ್ ಪಾಪ್‌ಅಪ್ ಆಗಲಿದೆ (ಕಾಣಿಸಿಕೊಳ್ಳಲಿದೆ). ಈ ರೀತಿ ಕ್ಯಾನ್ಸಲ್ ಮಾಡಿದ ಜಾಗದಲ್ಲೇ ಹತ್ತಿರದ ಗ್ರಾಹಕರಿಗೆ (ಫುಡ್ ಆರ್ಡರ್ ಮಾಡುವಾಗ) ಪಾಪ್ ಅಪ್ ಆಗುತ್ತವೆ. ಈ ರೀತಿ ಪಾಪ್ ಆಗುವ ಫುಡ್ ಆರ್ಡರ್ ಮಾಡಿದರೆ ಕಡಿಮೆ (unbeatable price) ಬೆಲೆಗೆ ಆಹಾರ ಸಿಗಲಿದೆ. ಅಲ್ಲದೇ ಸಾಮಾನ್ಯ ಆರ್ಡರ್‌ಗಿಂತಲೂ ವೇಗವಾಗಿ ನಿಮ್ಮ ಮನೆಗೆ ಬರಲಿದೆ. ಅಲ್ಲದೇ ಕೆಲವೇ ನಿಮಿಷಗಳಲ್ಲಿ ನಿಮಗೆ ಆಹಾರ ಸಿಗಲಿದೆ ಎಂದು ಕಂಪನಿ ಹೇಳಿದೆ.
4 ಲಕ್ಷ ಕ್ಯಾನ್ಸಲ್: ಜೊಮ್ಯಾಟೊದಲ್ಲಿ ಆಹಾರ ಕ್ಯಾನ್ಸ್‌ಲ್ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಕಟ್ಟುನಿಟ್ಟಿನ ನಿಯಮಗಳನ್ನು ಈಗಾಗಲೇ ಜಾರಿ ಮಾಡಲಾಗಿದೆ. ಅಲ್ಲದೇ ನೀವು ಜೊಮ್ಯಾಟೊ ಆಹಾರ (ಆರ್ಡರ್) ಕ್ಯಾನ್ಸಲ್ ಮಾಡಿದರೆ, ನಿಮ್ಮ ದುಡ್ಡು (no-refund policy) ವಾಪಸ್ ಬರುವುದಿಲ್ಲ.
ಈ ರೀತಿಯ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿ ಮಾಡಿರುವ ಹೊರತಾಗಿಯೂ ಜೊಮ್ಯಾಟೊದಲ್ಲಿ ನಿತ್ಯವೂ 4 ಲಕ್ಷಕ್ಕೂ ಹೆಚ್ಚು ಜನ ಫುಡ್ ಆರ್ಡರ್ ಕ್ಯಾನ್ಸಲ್ ಮಾಡ್ತಿದ್ದಾರೆ. ಈ ಮಾಹಿತಿಯನ್ನು ಜೋಮೋಟೋ ಸಿಇಒ ಅವರೇ ನೀಡಿದ್ದಾರೆ. ಹೀಗಾಗಿ, ಭಾರೀ ಪ್ರಮಾಣದ ಆಹಾರ ಪೋಲು ತಡೆಯುವುದಕ್ಕೆ ಈ ಹೊಸ ಪ್ಲಾನ್ ಜಾರಿ ಮಾಡ್ತಿರುವುದಾಗಿ ಕಂಪನಿ ಹೇಳಿಕೊಂಡಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications