ಪತಿ ನಿಧನದ ಬಳಿಕ Zomato ಡೆಲಿವರಿ ಮಾಡಿ ಮಗನ ಸಾಕಿದ ಅಮ್ಮನಿಗೆ ಸ್ಟಾರ್ ಡೈಮಂಡ್ ಪ್ರಶಸ್ತಿಯ ಗರಿ
ಮನುಷ್ಯ ಎನ್ನುವ ಪ್ರಾಣಿ ಭೂಮಿಯ ಮೇಲೆ ಬದುಕಿ ಉಳಿಯಬೇಕಾದರೆ ಕಠಿಣ ಶ್ರಮ ಹಾಗೂ ಹೋರಾಟ ತುಂಬ ಮುಖ್ಯ. ಸರ್ವೈವಲ್ ಆಫ್ ದಿ ಫಿಟೆಸ್ಟ್' ಎಂಬ ಇಂಗ್ಲೀಷ್‌ನ ವ್ಯಾಖ್ಯಾನದಂತೆ, ಯಾರು ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಛಲ ಬಿಡದೆ ಹೋರಾಡುತ್ತಾರೋ ಅವರು ಮಾತ್ರ ಬದುಕನ್ನು ಗೆಲ್ಲಲು ಸಾಧ್ಯ.
ಈ ಮೇಲಿನ ಮಾತಿಗೆ ಒಂದು ಒಳ್ಳೆಯ ಉದಾಹರಣೆ ಕೊಡಬೇಕೆಂದರೆ ಎಂದರೆ ಜೊಮ್ಯಾಟೊ ಡೆಲಿವರಿ ಪಾರ್ಟ್ನರ್ ಆಗಿ ಕೆಲಸ ಮಾಡುತ್ತಿರುವ ಉಮಾ. ಎಂತಹ ಕಲ್ಲು ಹೃದಯದವರಲ್ಲೂ ಕಣ್ಣೀರು ತರಿಸುವ ಹಾಗೂ ಎಷ್ಟೇ ಸೋತೆ ಎಂದುಕೊಂಡರೂ ಮರುಕ್ಷಣವೇ ಎದ್ದು ನಿಂತು ಹೋರಾಡುವ ಸ್ಫೂರ್ತಿ ತುಂಬುವ ಉಮಾ ಅವರ ಜೀವನಗಾಥೆ ಪ್ರತಿಯೊಬ್ಬರಿಗೂ ಮಾದರಿ.

ಏಕಾಂಗಿ ಹೋರಾಟ
ಉಮಾ ಅವರ ಈ ಸಾಧನೆಯ ಹಿಂದಿರುವುದು ಕಣ್ಣಂಚನ್ನ ಒದ್ದೆ ಮಾಡುವಂತಹ ಕಣ್ಣೀರ ಕಥೆ. ಸುಮಾರು 10 ವರ್ಷಗಳ ಹಿಂದೆಯೇ ಉಮಾ ಅವರ ಪತಿ ಇಹಲೋಕ ತ್ಯಜಿಸಿದರು. ಅಂದಿನಿಂದ ಇಡೀ ಕುಟುಂಬದ ಜವಾಬ್ದಾರಿ ಉಮಾ ಅವರ ಹೆಗಲ ಮೇಲೆ ಬಿತ್ತು.
ಮನೆಯಲ್ಲಿ ದುಡಿಯುವವರು ಬೇರೆ ಯಾರೂ ಇಲ್ಲದ ಕಾರಣ, ತಮಗೆ ಎಷ್ಟೇ ಅನಾರೋಗ್ಯವಿದ್ದರೂ, ಜ್ವರ-ಶೀತವಿದ್ದರೂ ಅವರು ಒಂದು ದಿನವೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಾರೆ. ಅವರಲ್ಲಿರುವುದು ಒಂದೇ ಛಲ ಅದೇನೆಂದರೆ ಎಷ್ಟೇ ಕಷ್ಟ ಬಂದ್ರೂ ಕೂಡ ಎದುರಿಸಿ ಮಗನಿಗೆ ಉತ್ತಮ ಭವಿಷ್ಯ ರೂಪಿಸಿಕೊಡಬೇಕೆಂಬುದು.
ಅವರ ದಿನಚರಿ ಬೆಳಗಿನ ಜಾವ 5 ಗಂಟೆಗೆ ಶುರುವಾಗುತ್ತದೆ. ಮುಂಜಾನೆ ಬೇಗ ಎದ್ದು, 15 ಕಿಲೋಮೀಟರ್ ದೂರದಲ್ಲಿರುವ ಕ್ರಿಕೆಟ್ ಕೋಚಿಂಗ್‌ಗೆ ತಮ್ಮ ಮಗನನ್ನು ಬೈಕ್‌ನಲ್ಲಿಯೇ ಕರೆದುಕೊಂಡು ಹೋಗಿ ಬಿಡುತ್ತಾರೆ. ಮಗನ ಆಸಕ್ತಿಯನ್ನ ಪ್ರೋತ್ಸಾಹಿಸುವ ಅವರು, ಅಲ್ಲಿಂದ ವಾಪಸ್ ಬಂದು ಮನೆಯ ಎಲ್ಲಾ ಕೆಲಸಗಳನ್ನ ಮುಗಿಸುತ್ತಾರೆ. ಬಳಿಕ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಜೊಮ್ಯಾಟೊ ಡೆಲಿವರಿ ಕೆಲಸವನ್ನು ಶುರು ಮಾಡುವ ಉಮಾ, ರಾತ್ರಿ 11 ಗಂಟೆಯವರೆಗೂ ನಿರಂತರವಾಗಿ ದುಡಿಯುತ್ತಾರೆ.
ಪ್ರತಿದಿನ 200 ಕಿ.ಮೀ ಬೈಕ್ ರೈಡ್
ಬೆಳಗ್ಗೆಯಿಂದ ರಾತ್ರಿಯವರೆಗೆ ನಗರದ ಮೂಲೆ ಮೂಲೆಗೆ ತೆರಳಿ ದಿನವೊಂದಕ್ಕೆ 18 ರಿಂದ 25 ಫುಡ್ ಡೆಲಿವರಿಗಳನ್ನ ಮಾಡುತ್ತಾರೆ. ಇದರರ್ಥ ಉಮಾ ಅವರು ಪ್ರತಿದಿನ ಬರೋಬ್ಬರಿ 200 ಕಿಲೋಮೀಟರ್‌ಗೂ ಹೆಚ್ಚು ದೂರ ಬೈಕ್ ಓಡಿಸುತ್ತಾರೆ. ಇಷ್ಟೆಲ್ಲಾ ದೈಹಿಕ ಶ್ರಮ ಪಡುವ ಅವರು ದಿನದಲ್ಲಿ ನಿದ್ರೆ ಮಾಡುವುದು ಕೇವಲ 5 ಗಂಟೆಗಳು ಮಾತ್ರ ಎಂದರೆ ನೀವು ನಂಬುತ್ತಿರಾ? ನಂಬಲೇಬೇಕು.
Do you know about Uma's story.
— KV Iyyer - BHARAT 🇮🇳🇮🇱 (@BanCheneProduct) August 31, 2026
She has received the Star Diamond Award from Zomato in 2020.
This award is given because in the last few years, she hasn't canceled even a single order nor delayed any delivery.
Her husband passed away 10 years ago. So she had to work even when… pic.twitter.com/A4QAOa2BeL
2020ರ ಸ್ಟಾರ್ ಡೈಮಂಡ್ ಪ್ರಶಸ್ತಿ
ಉಮಾ ಅವರು ತಮ್ಮ ಕಠಿಣ ಪರಿಶ್ರಮ ಹಾಗೂ ವೃತ್ತಿಪರತೆಯಿಂದಾಗಿ ಜೊಮ್ಯಾಟೊ ಸಂಸ್ಥೆಯಿಂದ 2020ರಲ್ಲಿ ಸ್ಟಾರ್ ಡೈಮಂಡ್ ಅವಾರ್ಡ್ ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಯನ್ನ ಸುಲಭವಾಗಿ ನೀಡಲಾಗುವುದಿಲ್ಲ. ಕಳೆದ ಹಲವು ವರ್ಷಗಳಲ್ಲಿ ಉಮಾ ಅವರು ಗ್ರಾಹಕರು ಬುಕ್ ಮಾಡಿದ ಒಂದೇ ಒಂದು ಆರ್ಡರ್ ಅನ್ನು ಕೂಡ ರದ್ದುಗೊಳಿಸಿಲ್ಲ ಮತ್ತು ಯಾವುದೇ ಡೆಲಿವರಿಯನ್ನು ತಡವಾಗಿ ತಲುಪಿಸಿಲ್ಲ.
ಮಳೆಯಿರಲಿ, ಬಿಸಿಲಿರಲಿ, ತಮ್ಮ ಕೆಲಸವನ್ನು ಅತ್ಯಂತ ಶ್ರದ್ಧೆ ಹಾಗೂ ನಿಷ್ಠೆಯಿಂದ ಮಾಡಿದ ಕಾರಣಕ್ಕಾಗಿ ಅವರಿಗೆ ಈ ಅತ್ಯುನ್ನತ ಗೌರವ ಒಲಿದುಬಂದಿದೆ. ಇದು ಅವರ ಕರ್ತವ್ಯ ಪ್ರಜ್ಞೆಗೆ ಹಿಡಿದ ಒಂದು ಅವಾರ್ಡ್ ಅಷ್ಟೇ.
ಬದುಕಿನಲ್ಲಿ ಕಷ್ಟಗಳು ಬಂದಾಗ ಕುಗ್ಗಿ ಹೋಗುವ, ಸಣ್ಣ ಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳುವ ಇಂದಿನ ದಿನಗಳಲ್ಲಿ ಉಮಾ ಅವರ ಬದುಕು ಒಂದು ಪಾಠ ಎನ್ನಬಹುದು.


Click it and Unblock the Notifications
