Get Updates
Get notified of breaking news, exclusive insights, and must-see stories!

ಡೆಲಿವರಿ ಬಾಯ್ ಮೇಲೆ ಇಬ್ಬರಿಂದ ಮಾರಾಮಾರಿ, ಜನ ಜಮಾಯಿಸಿದ್ದಕ್ಕೆ ಪರಾರಿ

ಬೆಂಗಳೂರು: ಡೆಲಿವರಿ ಬಾಯ್‌ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಗರದ ಕಗ್ಗದಾಸಪುರದ 29ನೇ ಕ್ರಾಸ್ ಜಂಕ್ಷನ್ ಬಳಿ ಜನವರಿ 4ರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದ್ವಿಚಕ್ರ ವಾಹನಗಳ ನಡುವೆ ಸಣ್ಣ ಡಿಕ್ಕಿ ಸಂಭವಿಸಿದ ನಂತರ ಜೆಪ್ಟೋ ಡೆಲಿವರಿ ಸವಾರನ ಮೇಲೆ ಇಬ್ಬರು ಸವಾರರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ದೀಪಕ್ ಕುಮಾರ್ ಹೆಸರಿನ ಡೆಲಿವರಿ ರೈಡರ್ ಕಂಪನಿಯ ಗೋಡೌನ್‌ನಿಂದ ಆರ್ಡರ್ ತೆಗೆದುಕೊಂಡು ಡೆಲಿವರಿಗಾಗಿ ಹೋಗುತ್ತಿದ್ದರು. ಇದೇ ವೇಳೆ ಕುಮಾರ್ ಜಂಕ್ಷನ್‌ನಲ್ಲಿ ಬಲ ತಿರುವು ತೆಗೆದುಕೊಳ್ಳುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಹೋಂಡಾ ಆಕ್ಟಿವಾದಲ್ಲಿ ಹೋಗುತ್ತಿದ್ದ ಇಬ್ಬರು ವ್ಯಕ್ತಿಗಳು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Zepto Delivery Boy Assaulted in Bengaluru Viral Video Sparks Public Outrage

ಸಿಸಿಟಿವಿ ದೃಶ್ಯಾವಳಿಯಲ್ಲಿ ತಿಳಿದುಬಂದಿರುವಂತೆ ಇಬ್ಬರು ವ್ಯಕ್ತಿಗಳು ಸ್ಕೂಟರ್‌ನಿಂದ ಬಿದ್ದ ನಂತರ, ಡೆಲಿವರ್‌ ಬಾಯ್‌ ಕುಮಾರ್ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದ್ದಾರೆ. ಅಲ್ಲದೆ ಒಬ್ಬ ತನ್ನ ಹೆಲ್ಮೆಟ್ ತೆಗೆದು ಕುಮಾರ್‌ಗೆ ಹೊಡೆದಿದ್ದರಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದ. ನಂತರ ಆ ವ್ಯಕ್ತಿ ಕುಮಾರ್ ತಲೆಗೆ ಒದ್ದಿದ್ದಾನೆ. ಬಳಿಕ ಅಲ್ಲಿಗೆ ಹೆಚ್ಚಿನ ಜನ ಜಮಾಯಿಸಿ, ಮಧ್ಯಪ್ರವೇಶಿಸಿ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದರು. ಇದರ ಹೊರತಾಗಿಯೂ, ಇಬ್ಬರು ವ್ಯಕ್ತಿಗಳು ಕುಮಾರ್ ಮೇಲೆ ಹಲ್ಲೆ ಮುಂದುವರಿಸಿದರು. ಬಳಿಕ ಅಲ್ಲಿದ್ದವರು ಆ ವಾಹನ ಸವಾರರ ಮೇಲೆ ತಿರುಗಿಬಿದ್ದಾಗ ಅಲ್ಲಿಂದ ಪರಾರಿಯಾಗಿದ್ದಾರೆ.

ತನಿಖೆಗೆ ಮುಂದಾದ ಪೊಲೀಸರು

ಈ ವಿಡಿಯೋ ಫೇಸ್‌ಬುಕ್‌ನಲ್ಲಿ ಮೊದಲು ಕಾಣಿಸಿಕೊಂಡಿತು. ನಂತರ ವೈರಲ್ ಆಗಿ, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಇದೇ ವೈರಲ್ ವಿಡಿಯೋವನ್ನು ಆಧರಿಸಿ ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ಅವರನ್ನು ಗುರುತಿಸಿ ಬಂಧಿಸಲು ತನಿಖೆ ನಡೆಯುತ್ತಿದೆ. ಈ ವೈರಲ್‌ ವಿಡಿಯೋಗೆ ಪ್ರತಿಕ್ರಿಯಿಸಿರುವ ವೈಟ್‌ಫೀಲ್ಡ್ ವಿಭಾಗದ ಮಹದೇವಪುರ ಪೊಲೀಸರು ಸ್ವಯಂಪ್ರೇರಿತ ಕ್ರಮ ಕೈಗೊಂಡಿದ್ದಾರೆ.‌

ಈ ವಿಡಿಯೋವನ್ನು ಕರ್ನಾಟಕ ಪೋರ್ಟ್‌ಫೋಲಿಯೋ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಬೆಂಗಳೂರು ನಗರ ಪೊಲೀಸರ ಗಮನಕ್ಕೆ ಬಂದಿದೆ. ಅಗತ್ಯ ಕ್ರಮಕ್ಕಾಗಿ ದೂರನ್ನು ಮಹದೇವಪುರ ಪೊಲೀಸ್ ಠಾಣೆಗೆ ರವಾನಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪೊಲೀಸರು, "ನಾವು ನಿಮ್ಮ ದೂರನ್ನು ಅಗತ್ಯ ಕ್ರಮಕ್ಕಾಗಿ @dcpwhitefield @acpwhitefield @mahadevapurapsಗೆ ರವಾನಿಸಿದ್ದೇವೆ" ಎಂದಿದ್ದಾರೆ.

ಈ ದೃಶ್ಯಗಳು ಹೊರಬಂದ ಬಳಿಕ, ಬೆಂಗಳೂರು ಜನರಲ್ಲಿ ಭದ್ರತೆ ಕುರಿತ ಗಂಭೀರ ಚಿಂತೆ ಮೂಡಿದೆ. ರಸ್ತೆಯಲ್ಲಿ ಸಣ್ಣ ಡಿಕ್ಕಿಯಾದರೂ ಜೀವಕ್ಕೆ ಅಪಾಯವಾಗುವ ಸ್ಥಿತಿ ಬಂದಿದೆ, ಸಾಮಾನ್ಯ ಕೆಲಸಕ್ಕೆ ಹೊರಡುವವರಿಗೂ ಸುರಕ್ಷತೆ ಇಲ್ಲ ಎಂಬ ಭಾವನೆ ಜನರಲ್ಲಿ ಹೆಚ್ಚುತ್ತಿದೆ. ವಿಶೇಷವಾಗಿ ಡೆಲಿವರಿ ಸಿಬ್ಬಂದಿ, ಕ್ಯಾಬ್‌ ಚಾಲಕರು, ಬೈಕ್‌ ಸವಾರರು ಇಂತಹ ದಾಳಿಗಳಿಗೆ ಗುರಿಯಾಗುತ್ತಿರುವುದು ನಗರದಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಕಳವಳದ ಮಾತುಗಳು ಕೇಳಿಬರುತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+