Yulu Bike: ರಸ್ತೆ ಸುರಕ್ಷತಾ ಮಾಡ್ಯೂಲ್ ಪರಿಚಿಸಿದ ಕಂಪನಿ: 1200 ಡೆಲಿವರಿ ಬಾಯ್‌ಗಳಿಗೆ ಅನುಕೂಲ

ಬೆಂಗಳೂರು, ಫೆಬ್ರವರಿ 27: ಕಂಪನಿಯ ಉದ್ಯೋಗಿಯಲ್ಲದ, ಸ್ವತಂತ್ರವಾಗಿ ಹಾಗೂ ಒಪ್ಪಂದ (ಕಾಂಟ್ರಾಕ್ಟ್) ಮೇಲೆ ಕೆಲಸ ಮಾಡುವವರಿಗಾಗಿ Yulu ಕಂಪನಿಯು ದೇಶದಲ್ಲೇ ಮೊದಲ ಬಾರಿ ವಾಟ್ಸಾಪ್ ಆಧಾರಿತ ರಸ್ತೆ ಸುರಕ್ಷತೆ ಕಲಿಕೆ ಮಾಡ್ಯೂಲ್ ಒಂದನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ 'ಯೂಲು' ಎಲೆಕ್ಟ್ರಿಕ್ ಬೈಕ್ ಬಾಡಿಗೆಗೆ ಪಡೆದು ಓಡಿಸುವವರಿಗೆ ಸಿಹಿ ಸುದ್ದಿಯಾಗಿದೆ.

ಯೂಲು ಕಂಪನಿಯು 3,600 Yulu ಸವಾರರನ್ನು ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ತೊಡಗಿಸಿಕೊಂಡಿದೆ. ಈ ಉಪಕ್ರಮದಲ್ಲಿ ಸಂಚಾರ ನಿಯಮ ಶಿಕ್ಷಣ ಮತ್ತು ರಸಪ್ರಶ್ನೆಗಳು ಒಳಗೊಂಡಿವೆ. 'ಸೇಫ್ ರೈಡರ್ ಬಿಗಿನರ್' ಬ್ಯಾಡ್ಜ್‌ಗಳನ್ನು ನೀಡಲಾಗುತ್ತದೆ. ಸುಮಾರು 1200 ರೈಡರ್‌ಗಳು ಸಂಚಾರಿ ನಿಯಮ ಹಾಗೂ ವಾಹನ ಚಾಲನೆ ವೇಳೆ ಸುರಕ್ಷತೆ ಪಾಲಿಸುವುದಾಗಿ ಪ್ರತಿಜ್ಞೆ ಮಾಡಿ ವೀಡಿಯೊಗಳನ್ನು ಕಳುಹಿಸಲಾಗುತ್ತಿದೆ.

Yulu Launches WhatsApp Road Safety Learning Module for Riders Giving Badge See More

ಯುಲು ಕಂಪನಿಯ ಈ ವಾಟ್ಸಾಪ್ ಆಧಾರಿತ ರಸ್ತೆ ಸುರಕ್ಷತೆ ಕಲಿಕೆ ಮಾಡ್ಯೂಲ್, 30 ಸಾವಿರಕ್ಕಿಂತಲೂ ಅಧಿಕ ಕಾಮರ್ಸ್ ಹಾಗೂ ಇ-ಕಾಮರ್ಸ್‌ ಕಂಪನಿಯ ಡೆಲಿವರಿ ಬಾಯ್‌ ಗಳಿಗೆ ಹಾಗೂ ಈ ಕುರಿತಾದ ವಿಡಿಯೋ ಹೆಚ್ಚೆಚ್ಚು ಶೇರ್‌ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ.

Yulu ತನ್ನ ಸಮಗ್ರ '3E' ಚೌಕಟ್ಟಿನ ಮೂಲಕ ನಿರಂತರವಾಗಿ ಸುರಕ್ಷತೆ ಸಾಧಿಸಿದೆ. ಶಿಕ್ಷಣ ಮತ್ತು ಪರಿಸರ ವ್ಯವಸ್ಥೆ ಪಾಲು ದಾರಿಕೆಗಳು, ಅನುಸರಣೆ ಹೆಚ್ಚಿಸಲು ತಂತ್ರಜ್ಞಾನ, ಪ್ರಕ್ರಿಯೆಗಳು ಮತ್ತು ಕಾರ್ಯತಂತ್ರದ ಸಹ ಯೋಗಗಳನ್ನು ಸಂಯೋಜಿಸುತ್ತದೆ. ಹೈಪರ್‌ ಲೋಕಲ್ ಡೆಲಿವರಿಯ ಸುರಕ್ಷತೆಯ ಅಂಶಗಳ ಸುತ್ತ ಸಾರ್ವಜನಿಕ ಕಾಳಜಿಗಳನ್ನು ಕಂಪನಿ ಪರಿಹರಿಸುತ್ತದೆ.

ಬಹು-ಪಾಲುದಾರರ ಸವಾಲನ್ನು ಮುಂಗಡವಾಗಿ ಪರಿಹರಿಸುವ ಮೂಲಕ, Yulu ಕಂಪನಿಯು ನಗರದಲ್ಲಿ ಚಲನಶೀಲತೆಯನ್ನು ಸುರಕ್ಷಿತ ಮತ್ತು ಎಲ್ಲರಿಗೂ ಹೆಚ್ಚು ಸಮರ್ಥನೀಯ ಸೇವೆ ನೀಡುತ್ತಿದೆ ಎಂದು ಪ್ರಕಟಣೆಯಲ್ಲಿ ಕಂಪನಿ ತಿಳಿಸಿದೆ.

Yulu Launches WhatsApp Road Safety Learning Module for Riders Giving Badge See More

3E ಚೌಕಟ್ಟಿನ ಒಳಗೆ ರಸ್ತೆ ಸುರಕ್ಷತೆ ಯೂಲು

ಶಿಕ್ಷಣ- ಜ್ಞಾನ ಸವಾರರನ್ನು ಸಬಲೀಕರಣಗೊಳಿಸುವುದು, ಡೆಲಿವರಿ ಬಾಯ್‌ಗಳ ನಡುವಿನ ಸಂಚಾರ ನಿಯಮಗಳಿಗೆ ಸಂಬಂಧಿಸಿದ ಜ್ಞಾನ ನೀಡುವ ಉದ್ದೇಶ ಯೂಲು ಕಂಪನಿ ಹೊಂದಿದೆ. ಫೆಬ್ರವರಿ ಆರಂಭದಲ್ಲಿ ಪ್ರಾರಂಭವಾದ ರಸ್ತೆ ಸುರಕ್ಷತೆ ಕಲಿಕೆ ಮಾಡ್ಯೂಲ್, ಮೂರು ಸಂಚಾರ ಉಲ್ಲಂಘನೆಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

ರಾಂಗ್ ರೂಟ್ (ಸಂಚಾರಕ್ಕೆ ಅವಕಾಶವಿಲ್ಲದ ತಪ್ಪು ದಾರಿ ಸವಾರಿ) ವಾಹನ ಚಾಲನೆ, ಅಥವಾ ಫುಟ್‌ಪಾತ್‌ಗಳಲ್ಲಿ ವಾಹನಗಳ ನಿಲುಗಡೆ ಮತ್ತು ರೆಡ್‌ ಸಿಗ್ನಲ್‌ ಇದ್ದಾಗಲೂ ನಿಲ್ಲದೆ ಮುಂದುವರಿಯುವುದು. ಇಂತಹ ನಿಯಮ ಉಲ್ಲಂಘಿಸಿದಂತೆ ಕಂಪನಿ ಮನವಿ ಮಾಡಿಕೊಂಡಿದೆ. ಈ ಬಗ್ಗೆ ಸವಾರರಿಗೆ ಜಾಗೃತಿ ಮೂಡಿಸಿದೆ.

Yulu ಬಳಕೆದಾರರಿಗೆ ತರಬೇತಿ ವೀಡಿಯೋ ರವಾನಿಸಿದೆ. ಅವರಿಗೆ ವಿಡಿಯೋ ಮೂಲಕ ಸಂಚಾರ ನಿಯಮ ಮನದಟ್ಟು ಮಾಡಿದೆ. ವಿಡಿಯೋ, ಜಾಗೃತಿ ಕಾರ್ಯಕ್ರಮಗಳಿಂದ ಏನೆಲ್ಲ ಕಲಿತರು ಎಂದು ತಿಳಿಯಲು ಯೂಲು ಸವಾರರಿಗೆ ರಸಪ್ರಶ್ನೆ ಹಮ್ಮಿಕೊಳ್ಳುತ್ತದೆ. ರಸಪ್ರಶ್ನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಮತ್ತು ಸೇಫ್ ರೈಡರ್ ಬ್ಯಾಡ್ಜ್ ಅನ್ನು ಸವಾರರಿಗೆ ನೀಡಲಾಗುತ್ತದೆ. ಜೊತೆಗೆ ಅವರಿಂದ ಸಂಚಾರ ನಿಯಮ ಪಾಲನೆ ಬಗ್ಗೆ ಪ್ರತಿಜ್ಞೆ ಮಾಡುವ ವಿಡಿಯೋ ಸೆರೆಹಿಡಿಯಲಿದೆ.

ಹೆಲ್ಮೆಟ್ ಕಡ್ಡಾಯವಲ್ಲದಿದ್ದರು ಧರಿಸಲು ಯೂಲು ಸೂಚನೆ

Yulu ಮೊಬೈಲ್ ಅಪ್ಲಿಕೇಷನ್ ಬಳಸಿ ನೀವು ಇವಿ ಬೈಕ್ ಸವಾರಿ ಮಾಡುತ್ತೀರಿ. ನಂತರ ಹಣ ಪಾವತಿಸುತ್ತಿರಿ. ಕಂಪನಿಯ ಮೊಬೈಲ್ ಅಪ್ಲಿಕೇಶನ್ ಸಂಚಾರ ನಿಯಮಗಳನ್ನು ಅನುಸರಿ ಸಲು ಮತ್ತು ಅಪರಾಧಗಳನ್ನು ತಪ್ಪಿಸಲು ಬಳಕೆದಾರರನ್ನು ಪ್ರೇರೇಪಿಸುತ್ತದೆ. ಭಾರತದಲ್ಲಿ ಕಡಿಮೆ-ವೇಗದ ವಾಹನ ಬಳಕೆದಾರರಿಗೆ ಹೆಲ್ಮೆಟ್ ಬಳಕೆಯನ್ನು ಕಾನೂನುಬದ್ಧವಾಗಿ ಕಡ್ಡಾಯ ಗೊಳಿಸಿಲ್ಲ. ಹೀಗಿದ್ದರು ಸವಾರರ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವಂತೆ ಹೇಳಿದೆ.

ಈ ವೇಳೆ ನಿಯಮ ಅನುಸರಿಸದಿರುವುದು ಕಂಡುಬಂದರೆ Yulu ಮತ್ತು ಟ್ರಾಫಿಕ್ ಅಧಿಕಾರಿಗಳು ದಂಡ ವಿಧಿಸುತ್ತಾರೆ ಎಂದು ಸ್ಪಷ್ಟಪಡಿಸುತ್ತಾರೆ. ಕೊನೆಯದಾಗಿ, Yulu ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರಿಗೆ ಸುರಕ್ಷಿತವಾಗಿ ಮತ್ತು ಜವಾಬ್ದಾರಿ ಯುತವಾಗಿ ಸವಾರಿ ಮಾಡಲು ನಿರಂತರ ಜ್ಞಾಪನೆ ಯಾಗಿ ಕಾರ್ಯನಿರ್ವಹಿಸುತ್ತವೆ.

1100 ಡೆಲಿವರಿ ಬಾಯ್‌ ಗಳಿಗೆ ಯೂಲು ಸದುಪಯೋಗ

ಯೂಲು ಸಣ್ಣ ಬೈಕ್ ಇದೊಂದು ಎಲೆಕ್ಟ್ರಿಕ್ ವಾಹನವಾದ್ದರಿಂದ ಪರಿಸರಕ್ಕೆ ಫೂರಕವಾಗಿದೆ. ಪರಿಸರ ಸ್ನೇಹಿ ಬೈಕ್ ಎನ್ನಬಹುದು. ಸಂಚಾರ ಉಲ್ಲಂಘನೆಗಳನ್ನು ಪರಿಹರಿಸಲು ಉದ್ಯಮದ ಮಧ್ಯಸ್ಥಗಾರರ ನಡುವೆ ಸಹಯೋಗದ ಅಗತ್ಯವಿದೆ. 2020ರಿಂದ ಯಲು ಕಂಪನಿಯು, ಹಲವು ನಗರಗಳಲ್ಲಿ ಸ್ಥಳೀಯ ಸಂವಾರಿ ಪೊಲೀಸರ ಸಹಯೋಗದಲ್ಲಿ ಸೇಫ್‌ ರೈಡರ್ ಕಾರ್ಯಕ್ರಮ ನಡೆಸಿದೆ. 2024ರಲ್ಲೇ ಇತರೆ 1100 ಡೆಲಿವರಿ ಬಾಯ್‌ಗಳು ಸೇರಿದಂತೆ Yulu ಕಂಪನಿಯ ಡೆಲಿವರಿ ಬಾಯ್‌ಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ ಎಂದು ಕಂಪನಿಯು ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+