ಯುವ ಕಾಂಗ್ರೆಸ್ಸಿಗರ ಸೂಟು ಬೂಟು ಪ್ರತಿಭಟನೆ
ಬೆಂಗಳೂರು, ಮೇ 26 : 'ಸೂಟ್ ಬೂಟ್ ಕಿ ಸರ್ಕಾರ್', 'ಸೂಟ್ ಬೂಟ್ ಮೋದಿ ಸರ್ಕಾರ', 'ಆಶ್ವಾಸನೆ ಈಡೇರಿಸಿದ ಸರ್ಕಾರಕ್ಕೆ ಧಿಕ್ಕಾರ' ಹೀಗೆ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು ಮೋದಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ್ದಕ್ಕೆ ಪ್ರತಿಭಟನೆ ನಡೆಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಮಂಗಳವಾರ ನೂರಾರು ಕಾರ್ಯಕರ್ತರು ಬೆಂಗಳೂರಿನ ಆನಂದ ರಾವ್ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಸೂಟ್ ತೊಟ್ಟು ಪ್ರತಿಭಟನೆ ನಡೆಸಿದ್ದು ವಿಶೇಷ ವಾಗಿತ್ತು. [ಮೋದಿ ಸರ್ಕಾರಕ್ಕೆ 1 ವರ್ಷ, ಓದುಗರ ಅಭಿಪ್ರಾಯ]

'ಚುನಾವಣಾ ಭರವಸೆ ಈಡೇರಿಸಲು ವಿಫಲವಾಗಿರುವ ಕೇಂದ್ರ ಸರ್ಕಾರಕ್ಕೆ ಹಾಗೂ ಸುಳ್ಳು ಭರವಸೆ ನೀಡಿದ ನರೇಂದ್ರ ಮೋದಿಗೆ ಧಿಕ್ಕಾರ' ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.
ಕಪ್ಪು ಕೋಟಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾವಚಿತ್ರವನ್ನು ಅಂಟಿಸಿ ಪ್ರತಿಭಟನೆ ನಡೆಸಿದರು. ಸೂಟು ಧರಿಸಿ ಬಂದಿದ್ದ ಕೆಲವು ಕಾರ್ಯಕರ್ತರು ಮೋದಿ ಸರ್ಕಾರ ಸೂಟು ಸರ್ಕಾರ ಎಂದು ವ್ಯಂಗ್ಯವಾಡಿದರು.












Click it and Unblock the Notifications