ಪ್ರೇಮಿಗಳ ಜೇಬಿಗೆ ಕತ್ತರಿ: ಗುಲಾಬಿ ಬಲು ದುಬಾರಿ

ಬೆಂಗಳೂರು, ಫೆಬ್ರವರಿ 12 : ಪ್ರೇಮಿಗಳ ದಿನದಂದು ಪ್ರೇಯಸಿಗೆ ಪ್ರಿಯಕರ ಚಂದ್ರನನ್ನೇ ನಿನ್ನ ಕೈಗೆ ತಂದಿಡುವೆ ಎನ್ನಬಹುದೇನೋ ಆದರೆ ಈ ಗುಲಾಬಿಯು ನಿನಗಾಗಿ ಎನ್ನುವ ಧೈರ್ಯ ಮಾಡಲಾರ ಹೌದು, ವ್ಯಾಲೆಂಟೈನ್ಸ್ ಡೇ ಹತ್ತಿರವಾಗುತ್ತಿದ್ದಂತೆಯೇ ಗುಲಾಬಿ ಹೂವಿನ ದರ ಚಂದ್ರನಿರುವ ಆಕಾಶದೆತ್ತರಕ್ಕೆ ಏರುತ್ತಿದೆ.

ಪ್ರೇಮಿಗಳ ದಿನ ಫೆ.14 ಸಮೀಪಿಸುತ್ತಿದ್ದರೆ ಗುಲಾಬಿ ಹೂವಿಗಳ ಬೆಲೆ ಹೆಚ್ಚಳಗೊಂಡಿದೆ. ನಗರದೆಲ್ಲಡೆ ಗುಲಾಬಿ ಹೂವುಗಳ ಲೋಕವೇ ಧರೆಗಿಳಿದಿದೆ. ಆದರೆ, ಎಲ್ಲರ ಮನಸ್ಸನ್ನು ಸೂರೆಗೊಳ್ಳುವ ಗುಲಾಬಿ ಈ ಬಾರಿ ತುಸು ದುಬಾರಿಯಾಗಿದೆ. ಪ್ರೇಮ ಹಾಗೂ ಪ್ರೇಮಿಯೊಂದಿಗೆ ಅವಿನಾಭಾವ ಸಂಬಂಧವಿರುವ ಗುಲಾಬಿ ಹೂವಿನ ಬೆಲೆ ಸದ್ಯ 25 ರಿಂದ 30 ರೂ ಮೀರಿದೆ.

ಪ್ರೇಮಿಗಳ ದಿನಕ್ಕೆ ಒಂದು ದಿನ ಬಾಕಿ ಉಳಿದಿದ್ದು, ಹೂವಿನ ಬೆಲೆ ದುಪ್ಪಟ್ಟಾಗುತ್ತಿದೆ. ಕಳೆದ 15 ದಿನಗಳ ಹಿಂದೆ 4 ರಿಂದ 5 ರೂ ಗೆ ದೊರೆಯುತ್ತಿದ್ದ ಕೆಂಗುಲಾಬಿ ಹೂವಿನ ಬೆಲೆ ಏರಿಕೆಯಾಗಿರುವುದು ಪ್ರೇಮಿಗಳಿಗೆ ಕೊಂಚ ಬಿಸಿ ತಾಗಿದರೂ ವ್ಯಾಪಾರಕ್ಕೆ ಯಾವುದೇ ರೀತಿಯಲ್ಲೂ ಪೆಟ್ಟು ನೀಡದಿರುವುದು ವ್ಯಾಪಾರಿಗಳಿಗೂ ಖುಷಿ ನೀಡಿದೆ.

 You can win your beloved heart, not price of Rose!

ನಗರದ ರಸೇಲ್ ಮಾರುಕಟ್ಟೆ, ಕೆ.ಆರ್. ಮಾರುಕಟ್ಟೆ, ಗಾಂಧಿ ಬಜಾರ್, ಮಲ್ಲೇಶ್ವರಂ, ಮಡಿವಾಳ ಮಾರುಕಟ್ಟೆಗಳು ಸೇರಿದಂತೆ ಬೀದಿ ಬದಿಯ ವ್ಯಾಪಾರಿಗಳು ದಿನಕ್ಕೆ ನಾಲ್ಕೈದು ದಿನಗಳು ಉಳಿದಿರುವಾಗಲೇ ಹೂವಿನ ಭರ್ಜರಿ ವ್ಯಾಪಾರದಲ್ಲಿ ನಿರತರಾಗಿದ್ದಾರೆ.

350 ಹೆಕ್ಟೇರ್ ನಲ್ಲಿ ಜರ್ಬೆರಾ ಗುಲಾಬಿ: ಬೆಂಗಳೂರು ಸುತ್ತಮುತ್ತ 300 ರಿಂದ 350 ಹೆಕ್ಟೇರ್ ನಲ್ಲಿ ಜರ್ಬೆರಾ, ಗುಲಾಬಿ ಸೇರಿದಂತೆ ಮತ್ತಿತರ ಹೂವಿನ ಬೆಳೆ ಬೆಳಯಲಾಗುತ್ತಿದೆ. ಈ ಪೈಕಿ ಒಟ್ಟು 150 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಗುಲಾಬಿ ಬೆಳೆಯಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+