ಕಿಡ್ನಾಪರ್ಸ್‌ನಿಂದ ಯೋಗ ಶಿಕ್ಷಕಿ ತಪ್ಪಿಸಿಕೊಂಡಿದ್ದೇ ರೋಚಕ, ಸಮಾಧಿಯಿಂದ ಎದ್ದು...!
ಯೋಗ ಶಿಕ್ಷಕಿಯೊಬ್ಬರು ಸಾಯುವ ಹಂತದಿಂದ ಯೋಗ ಕಲೆಯನ್ನು ಬಳಸಿ ತಪ್ಪಿಸಿಕೊಂಡ ರೋಚಕ ಹಾಗೂ ಅಷ್ಟೇ ಕರುಣಾಜನಕ ಘಟನೆಯೊಂದು ನಡೆದಿದೆ. ದೇವನಹಳ್ಳಿಯ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಇದೀಗ ಯೋಗ ಶಿಕ್ಷಕಿಯ ಸಮಯಪ್ರಜ್ಞೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಆದರೆ, ಆಕೆ ಸಾವನ್ನೇ ಗೆದ್ದು ಬಂದಿದ್ದಾಳೆ. ಸಾವನ್ನು ಮುಟ್ಟಿಯೇ ಬಂದಿದ್ದಾರೆ ಎಂದೇ ಹೇಳಬಹುದು. ಆಕೆ ಕಿಡ್ನಾಪರ್ಸ್‌ನಿಂದ ತಪ್ಪಿಸಿಕೊಂಡಿದ್ದು, ಸಿನಿಮಾವನ್ನೇ ಮೀರಿಸುವಷ್ಟು ಭಯಾನಕವಾಗಿದೆ. ಅಷ್ಟಕ್ಕೂ ಈ ಘಟನೆಯ ಹಿನ್ನೆಲೆ ಏನು,ಯೋಗ ಶಿಕ್ಷಕಿ ಮಾಡಿದ್ದೇನು ಅವರು ಎದುರಿಸಿದ ಸವಾಲೇನು ಎನ್ನುವುದು ಇಲ್ಲಿದೆ.
ದೇವನಹಳ್ಳಿ ಬಳಿ ನಡೆದ ಕಿಡ್ನಾಪ್‌ನಲ್ಲಿ ಮಹಿಳೆಯೊಬ್ಬರು ಸಾವಿನಿಂದ ಗೆದ್ದು ಬಂದಿದ್ದಾರೆ. ಕಿಡ್ನಾಪರ್ಸ್ ಮಹಿಳೆ ಸತ್ತೇ ಹೋದಳು ಎಂದೇ ಭಾವಿಸಿದ್ದರು. ಯೋಗ ಶಿಕ್ಷಕಿಯನ್ನು ಕಿಡ್ನಾಪರ್ಸ್ ಕಾಡಿಗೆ ಕರೆದುಕೊಂಡು ಹೋಗಿ ನಾನಾ ಹಿಂಸೆ ಕೊಟ್ಟಿದ್ದಾರೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಲಾಗಿದೆ. ಅಲ್ಲದೇ ಆಕೆಯ ಮೇಲೆ ಹಲ್ಲೆ ಮಾಡಿ, ವಿವಸ್ತ್ರಗೊಳಿಸಲಾಗಿದೆ. 34 ವರ್ಷದ ಯೋಗ ಶಿಕ್ಷಕಿಯೊಬ್ಬರಿಗೆ ನಾಲ್ಕು ಜನರ ಗುಂಪು ಕೊಡಬಾರದ ಕಷ್ಟವನ್ನು ಕೊಟ್ಟಿದೆ.

ಯೋಗ ಶಿಕ್ಷಕಿಯನ್ನು ಕಿಡ್ನ್ಯಾಪ್ ಮಾಡಿದ ಕಿಡ್ನಾಪರ್ಸ್ ಸುಮಾರು 30 ಕಿ.ಮೀ ದೂರದಲ್ಲಿ ಕಾಡಿಗೆ ಕರೆದುಕೊಂಡು ಹೋಗಿ ಹಿಂಸೆ ಕೊಟ್ಟಿದ್ದಾರೆ. ಆಕೆಯನ್ನು ವಿವಸ್ತ್ರಗೊಳಿಸಿ, ಕಿರುಕುಳ ನೀಡಲಾಗಿದೆ. ಕತ್ತು ಹಿಸುಕಿ ಚಿತ್ರಹಿಂಸೆ ಕೊಡಲಾಗಿದೆ. ಕತ್ತು ಹಿಸುಕುತ್ತಿದ್ದಂತೆಯೇ ಮಹಿಳೆ ಕುಸಿದು ಬಿದಿದ್ದಾರೆ. ಆಗ ಯೋಗ ಶಿಕ್ಷಕಿ ಸತ್ತಿದ್ದಾಳೆ ಎಂದು ಭಾವಿಸಿದ ಕಿಡ್ನಾಪರ್ಸ್ ಕೂಡಲೇ ಹಳ್ಳ ತೊಡಿ ಮಹಿಳೆಯನ್ನು ಅದರಲ್ಲಿ ಹೂತಿದ್ದಾರೆ. ಅವಸರದಲ್ಲಿ ಹೊಂಡದಲ್ಲಿ ಹೆಚ್ಚು ಮಣ್ಣು ಹಾಕಿಲ್ಲ. ಇದು ಮಹಿಳೆ ತಪ್ಪಿಸಿಕೊಳ್ಳುವುದಕ್ಕೆ ಕೊಂಚ ಸಹಾಯವಾಗಿದೆ.
ಯೋಗ ಶಿಕ್ಷಕಿ ತಪ್ಪಿಸಿಕೊಂಡಿದ್ದು ಹೇಗೆ ?
ಕಿಡ್ನಾಪರ್ಸ್ ಕತ್ತು ಹಿಸುಕುತ್ತಿದ್ದಂತೆಯೇ ಮಹಿಳೆ ಸಾವನ್ನಪ್ಪಿದಂತೆ ನಟಿಸಿದ್ದಾರೆ. ಮಹಿಳೆ ಮಾಡಿದ್ದನ್ನು ನೋಡಿ ಆಕೆ ಸತ್ತಿದ್ದಾಳೆ ಎಂದು ಕಿಡ್ನಾಪರ್ಸ್ ಭಾವಿಸಿದ್ದಾರೆ. ಆದರೆ, ಯೋಗ ಶಿಕ್ಷಕಿ ಯೋಗಾದಲ್ಲಿ ಉಸಿರು ನಿಯಂತ್ರಿಸುವ ಕಲೆಯನ್ನು ಕಲಿತಿದ್ದರು. ಇದೇ ಅವರ ಜೀವನ್ನು ಉಳಿಸಿದೆ. ಕಿಡ್ನಾಪರ್ಸ್ ವೈಯರ್‌ವೊಂದರಿಂದ ಕತ್ತು ಹಿಸುಕಿದ್ದಾರೆ. ಆಗ ಯೋಗ ಶಿಕ್ಷಕಿ ಸತ್ತಂತೆ ನಟಿಸಿ ಬಚಾವ್ ಆಗಿದ್ದಾರೆ. ಯೋಗ ಅಭ್ಯಾಸದಿಂದ ಉಸಿರು ಬಿಗಿಹಿಡಿಯುವ ಕಲೆಯನ್ನು ಅವರು ಕಲಿತಿದ್ದರು. ಇದೇ ಅವರು ಜೀವ ಉಳಿಸಿಕೊಳ್ಳಲು ಸಹಾಯವಾಗಿದೆ. ಅವರ ಮೇಲಿದ್ದ ಬಟ್ಟೆಗಳನ್ನು ಸಹ ಹರಿದು ಹಾಕಲಾಗಿತ್ತು. ಈ ಸಂದರ್ಭದಲ್ಲಿ ಮಹಿಳೆ ಬೇರೆ ಅವರಿಂದ ಬಟ್ಟೆ ಬೇಡಿ,ಸಿಕ್ಕ ಬಟ್ಟೆಯನ್ನು ಹಾಕಿಕೊಂಡು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.
ಕಾರಣ ಏನು: ಈ ರೀತಿ ಮಹಿಳೆಗೆ ಕ್ರೂರವಾಗಿ ಹಿಂಸೆ ಕೊಟ್ಟಿರುವುದಕ್ಕೆ ಕಾರಣ ತೀರ ಸಣ್ಣದು. ಆ ಮಹಿಳೆ ಯೋಗ ಶಿಕ್ಷಕಿಯಾಗಿದ್ದಾರೆ. ಇವರ ಜೊತೆ ಸಂತೋಷ್ ಕುಮಾರ್ ಎನ್ನುವ ವ್ಯಕ್ತಿ ಆತ್ಮೀಯವಾಗಿದ್ದ ಎಂದು ಆತನ ಪತ್ನಿ ಬಿಂದು ಅನುಮಾನದಿಂದ ಈ ರೀತಿ ಮಾಡಿದ್ದಾಳೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಖಾಸಗಿ ಡಿಟೆಕ್ಟಿವ್ ಏಜೆನ್ಸಿ ನಡೆಸುತ್ತಿದ್ದ ತನ್ನ ಸ್ನೇಹಿತ ಸತೀಶ್ ರೆಡ್ಡಿಗೆ ಯೋಗ ಶಿಕ್ಷಕಿಯ ಮಾಹಿತಿ ನೀಡುವಂತೆ ಕೇಳಿದ್ದಾಳೆ.
ಆ ಶಿಕ್ಷಕಿಯ ಬಳಿ ಯೋಗ ಕಲಿಯುವ ನೆಪದಲ್ಲಿ ಸತೀಶ್ ಸ್ನೇಹ ಬೆಳೆಸಿದ್ದಾನೆ. ನಂತರ ಒಂದು ದಿನ ಆಕೆಗೆ ಹೊರಗಡೆ ಹೋಗಿ ಬರೋಣ ಬನ್ನಿ ಎಂದು ಕರೆದುಕೊಂಡು ಹೋಗುವಂತೆ ಕರೆದುಕೊಂಡು ಹೋಗಿ ಕಿಡ್ನಾಪ್ ಮಾಡಲಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ ಧನಮಿಟ್ಟೇನಹಳ್ಳಿ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಲಾಗಿದೆ. ಮಹಿಳೆಯನ್ನು ಬೆದರಿಸಿ, ಬಟ್ಟೆ ತೆಗೆಸಿ ಕಿರುಕುಳ ನೀಡಿದ್ದಾರೆ. ನಂತರ ಕೇಬಲ್ ನಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ.
ಬಂಧನ: ಈ ಪ್ರಕರಣದ ಪ್ರಮುಖ ಆರೋಪಿ ಮಹಿಳೆ ಬಿಂದು, ಸತೀಶ್ ರೆಡ್ಡಿ (40), ರಮಣ (34), ನಾಗೇಂದ್ರ ರೆಡ್ಡಿ (35), ರವಿಚಂದ್ರ (27) ಹಾಗೂ ಒಬ್ಬ ಅಪ್ರಾಪ್ತ ಬಾಲಕನನ್ನು ಈ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸತೀಶ್, ರಮಣ, ನಾಗೇಂದ್ರ ಆಂಧ್ರಪ್ರದೇಶದವರು. ರವಿಚಂದ್ರ ಮತ್ತು ಬಾಲಕ ರಾಯಚೂರು ಜಿಲ್ಲೆಯವರು. ಆರೋಪಿಗಳನ್ನು ಕರ್ನಾಟಕದ ವಿವಿಧ ಸ್ಥಳಗಳಿಂದ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications