Year Ender 2024: ಕ್ರಿಸ್‌ಮಸ್ ಪ್ರಯುಕ್ತ ಬೆಂಗಳೂರು ಏರ್‌ಪೋರ್ಟ್‌ನಲ್ಲಿ 'ಸೀಸನ್ ಆಫ್ ಸ್ಮೈಲ್ಸ್' ಶುರು
ಬೆಂಗಳೂರು, ಡಿಸೆಂಬರ್ 24: ಡಿಸೆಂಬರ್ 25ರ ಪ್ರಯುಕ್ತ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಸೀಸನ್ ಆಫ್ ಸ್ಮೈಲ್ಸ್' ಆರಂಭಗೊಂಡಿದೆ. ಬಣ್ಣಬಣ್ಣದ ಲೈಟಿಂಗ್‌ನಿಂದ ಹಿಡಿದು ಬೃಹತ್‌ಕ್ರಿಸ್‌ಮಸ್‌ಟ್ರೀವರೆಗೆ ಅಲಂಕಾರಗೊಂಡು ವಿಮಾನ ನಿಲ್ದಾಣ ಕಂಗೊಳಿಸುತ್ತಿದೆ. ಈ ಮೂಲಕ ರಜಾದಿನಗಳಲ್ಲಿ ವೈವಿಧ್ಯಮಯ ಖರೀದಿಗೆ ವೇದಿಕೆ ಕಲ್ಪಿಸಲಾಗಿದೆ. ಈ ವರ್ಷದ ಕೊನೆಯ ಸಂಭ್ರಮಕ್ಕೆ ಏರ್‌ಪೋರ್ಟ್ ಸಾಕ್ಷಿಯಾಗಿದೆ.
ಈ ವರ್ಷ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಬೆಂಗಳೂರು ಏರ್‌ಪೋರ್ಟ್ ಹೊಸ ವರ್ಷವನ್ನು ಬೃಹತ್ ಕಾರ್ಯಕ್ರಮದ ಮೂಲಕ ಬರಮಾಡಿಕೊಳ್ಳಲಿದೆ. 'ಸೀಸನ್ ಆಫ್ ಸ್ಮೈಲ್ಸ್' 11 ನೇ ಆವೃತ್ತಿ ಯಲ್ಲಿ ಕ್ರಿಸ್‌ಮಸ್ ಉಡುಗೊರೆಗಳ ಖರೀದಿಗಾಗಿ ಹಲವು ರೀತಿಯ ಉಡುಗೊರೆ ವಸ್ತುಗಳ ಮೇಲೆ ರಿಯಾಯಿತಿ ನೀಡಲಾಗಿದೆ.

ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ವಿಮಾನ ನಿಲ್ದಾಣದಲ್ಲಿ ಸೀಸನ್ ಆಫ್ ಸ್ಮೈಲ್ಸ್ ನಡೆಯಲಿದೆ. ಕ್ರಿಸ್‌ಮಸ್ ಉದ್ದೇಶವಾಗಿಟ್ಟುಕೊಂಡು ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಅನೇಕ ಮನರಂಜನಾ ಚಟುವಟಿಕೆಗಳು, ಅತ್ಯಾಕರ್ಷಕ ಕೊಡುಗೆಗಳು, ಅನೇಕ ಬಹುಮಾನಗಳು ಸೇರಿದಂತೆ ರೋಮಾಂಚನಕಾರಿ ಚಟುವಟಿಕೆಗಳು ನಡೆಯಲಿದೆ. ಇವು ಪ್ರಯಾಣಿಕರನ್ನು ಮತ್ತಷ್ಟು ಮುದಗೊಳಿಸಲಿವೆ.
ಗಿಫ್ಟ್ ಹ್ಯಾಂಪರ್, ಕೊಡುಗೆ ಮತ್ತೊಂದು ಆಕರ್ಷಣೆ
ಆನಂದ್ ಸ್ವೀಟ್ಸ್, ಮಿಥಾಸ್, ಕೊಕೊಕಾರ್ಟ್, ಫಾರೆಸ್ಟ್ ಎಸೆನ್ಷಿಯಲ್ಸ್, ಮಿನಿಸೊ, ರಿಲೇ ಮತ್ತು ಬಾನ್ ವಾಯೇಜ್‌ನಂತಹ ಉನ್ನತ ಬ್ರಾಂಡ್‌ಗಳವರೆಗೆ ಒಳಗೊಂಡ 1,499 ರೂ.ನಿಂದ ಪ್ರಾರಂಭವಾಗುವ ಗಿಫ್ಟ್ ಹ್ಯಾಂಪರ್‌ಗಳ ಸಾಕಷ್ಟು ಕೊಡುಗೆಗಳು ಜನರನ್ನು ಆಕರ್ಷಿಸಲಿವೆ.
ವಿಮಾನ ನಿಲ್ದಾಣದಲ್ಲಿ ಆಯ್ದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಶೇ.50ರಷ್ಟು ವಿಶೇಷ ರಿಯಾಯಿತಿ ಇದೆ. ರಜಾದಿನಗಳಲ್ಲಿ ಶಾಪಿಂಗ್ ಮಾಡಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೂಕ್ತ ಸ್ಥಳವಾಗಿ ಹೊರಹೊಮ್ಮಿದೆ. ವರ್ಷಾಂತ್ಯದ ಮೋಜಿಗೆ ಜನರನ್ನು ಆಕರ್ಷಿಸುವಲ್ಲಿ ಕೆಐಎ ಮಹತ್ವದ ಪಾತ್ರ ವಹಿಸುತ್ತಿದೆ.
2024 ಕಳೆದ 2025ನೇ ಹೊಸ ವರ್ಷದ ಸಂಭ್ರಮಾಚರಣೆಯ ಮತ್ತೊಂದು ಆಕರ್ಷಣೆಯೆಂದರೆ, ಖ್ಯಾತ ನೃತ್ಯ ಸಂಯೋಜಕ ಪ್ರಸಾದ್ ಬಿಡಪಾ ಅವರ "ರನ್‌ವೇ ರಿಟೇಲ್ ಫ್ಯಾಷನ್ ಶೋ ನಡೆಸಿಕೊಡಲಿದ್ದಾರೆ. ವಿಮಾನ ನಿಲ್ದಾಣದ ರನ್‌ವೇಯಲ್ಲೂ ಸಣ್ಣ ಪುಟ್ಟ ಕಾರ್ಯಕ್ರಮ ನಡೆಯಲಿವೆ. ನೂತನ ಫ್ಯಾಶನ್‌ನ ಅನುಭವ ಪಡೆಯಲು ಹಾಗೂ ಅನಾವರಣಗೊಳಿಸಲು ಇಲ್ಲಿ ವೇದಿಕೆ ಸಿಗಲಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಕ್ರಿಸ್‌ಮಸ್ ರಜೆ, ಮೋಜು ಮಸ್ತಿಗೆ ಅವಕಾಶ
ಈ ಬಾರಿಯ ಕ್ರಿಸ್‌ಮಸ್ ರಜೆಯನ್ನು ಏರ್‌ಪೋರ್ಟ್ ನಲ್ಲಿ ಕಳೆಯುವವರಿಗೆ ಉತ್ತಮ ಅವಕಾಶ ಸಿಕ್ಕಂತಾಗಿದೆ.
ಏರ್‌ಪೋರ್ಟ್ ಸಿನಿಮಾ ಕ್ಲಬ್ ಕ್ವಾಡ್ ಅನ್ನು ಸ್ಟಾರ್‌ಲಿಟ್ ಥಿಯೇಟರ್ ಆಗಿ ಮಾರ್ಪಡಿಸಲಾಗಿದೆ. 'ಕ್ಲಾಸಿಕ್ ಹೋಮ್ ಅಲೋನ್'ನೊಂದಿಗೆ ಮೊದಲ ಪ್ರದರ್ಶನಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಸುಮಧುರ ಗೀತೆಗಳು, ಜೊತೆಗೆ, ಸ್ಟ್ರೇಂಜರ್ಸ್ ಮತ್ತು 13AD, ಜಾಝ್ ಮತ್ತು ರಾಕ್ ಪ್ರದರ್ಶನಗಳು ಸಂಗೀತ ಪ್ರೇಮಿಗಳನ್ನು ಮೋಡಿ ಮಾಡಲಿವೆ. ಟರ್ಮಿನಲ್ 1 ಮತ್ತು ಟರ್ಮಿನಲ್ 2 ರಲ್ಲೂ ಸಂಗೀತ ಸವಿಯಬಹುದು.
2025 ಹೊಸ ವರ್ಷವನ್ನು ಉತ್ಸಾಹಕದಾಯವಾಗಿ ಬರಮಾಡಿಕೊಳ್ಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಚರಿಸಲು ಡೈನಾಮಿಕ್ ಇಂಡೋ ಆಫ್ರೋ ಬ್ಯಾಂಡ್ ಝೇನ್, ಜೋಶುವಾ ಮತ್ತು ತಾಲಸಮುದ್ರದ ಎಲೆಕ್ಟ್ರಿಫೈಯಿಂಗ್ ಸೆಟ್‌ಗಳ ಡಿಜೆ ಸಂಗೀತದ ವ್ಯವಸ್ಥೆ ಮಾಡಲಾಗಿದೆ. ಆಹಾರ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಡಿಸೆಂಬರ್ 20 ರಿಂದಲೇ ಎಫ್ ಆಂಡ್ ಬಿ ಔಟ್‌ಲೆಟ್‌ಗಳಲ್ಲಿ ತಿಂಡಿ ತಿನಿಸುಗಳ ಮಾರಾಟ ಶುರುವಾಗಿದೆ.
ಲಕ್ಕಿ ಡ್ರಾನಲ್ಲಿ ಪ್ರಯಾಣಿಕರು ಪಾಲ್ಗೊಂಡು ತಮ್ಮ ಅದೃಷ್ಟ ಪರೀಕ್ಷೆ ಮಾಡಬಹುದಾಗಿದೆ. ಭಾಗವಹಿಸುವ ಅದೃಷ್ಟಶಾಲಿಗಳು ಲೇಟೆಸ್ಟ್‌ಐಫೋನ್, ಸೆಂಚುರಿ ರಿಯಲ್‌ಎಸ್ಟೇಟ್‌ಅವರಿಂದ 65 ಲಕ್ಷ ರೂ. ಮೌಲ್ಯದ ಸೈಟ್‌ಸೇರಿದಂತೆ ಇನ್ನೂ ಅನೇಕ ಅತ್ಯಾಕರ್ಷಕ ಬಹುಮಾನಗಳು ಇವೆ. ಇದು ದಿ ಸೀಸನ್ ಆಫ್ ಸ್ಮೈಲ್ಸ್ ನ ಮತ್ತೊಂದು ಆಕರ್ಷಣೆಯಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದರು.
ಹೆಚ್ಚಿನ ಅನುಭವ, ಮಾಹಿತಿಗೆ ನೀವು ಸಹ BLR ಪಲ್ಸ್' ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ.












Click it and Unblock the Notifications