ಚರ್ಮರೋಗವಿದ್ದರೆ ಈ ಶಿಬಿರದಲ್ಲಿ ಖಂಡಿತ ಭಾಗವಹಿಸಿ

ಬೆಂಗಳೂರು, ಅ. 28 : ಸೋರಿಯಾಸಿಸ್ (Psoriasis) ಎಂಬ ಚರ್ಮ ರೋಗ ಹೇಗೆ ಬರುತ್ತದೆ ಎಂಬುದಕ್ಕೆ ವೈದ್ಯರಲ್ಲೂ ಉತ್ತರವಿಲ್ಲ. ಆದರೆ ಈ ರೋಗದ ಕುರಿತು ಜಾಗೃತಿ ಮೂಡಿಸುವ ಮತ್ತು ವಿವಿಧ ಚಿಕಿತ್ಸಾ ವಿಧಾನಗಳನ್ನು ತಿಳಿಸುವ ಉದ್ದೇಶದಿಂದ ಬೆಂಗಳೂರಿನ ಚರ್ಮರೋಗ ತಜ್ಞರು ಬೆಂಗಳೂರಿನಲ್ಲಿ ಅ.29, ಮಂಗಳವಾರ ಕಮ್ಮಟ ಏರ್ಪಡಿಸಿದ್ದಾರೆ.

ವಿಶ್ವವ್ಯಾಪಿಯಾಗಿರುವ ಈ ಚರ್ಮರೋಗದಿಂದ ಶೇ.1ರಿಂದ 2ರಷ್ಟು ಜನರು ವಿಶ್ವಾದ್ಯಂತ ಬಳಲುತ್ತಿದ್ದಾರೆ. ಬೆಂಗಳೂರಿನಲ್ಲಿ ಕೂಡ ಈ ರೋಗ ಉಲ್ಬಣವಾಗುತ್ತಿರುವುದನ್ನು ಮನಗಂಡ ಬೆಂಗಳೂರು ಡರ್ಮಟಾಲಾಜಿಕಲ್ ಸೊಸೈಟಿ (ಬಿಡಿಎಸ್), ಬಯೋಕಾನ್ ಸಂಸ್ಥೆಯ ಸಹಯೋಗದೊಂದಿಗೆ, ವಿಶ್ವ ಚರ್ಮರೋಗ ದಿನಾಚರಣೆಯಾದ ಅ.29ರಂದು ಈ ಶಿಬಿರವನ್ನು ಏರ್ಪಡಿಸಿದೆ.

ವೈದ್ಯರ ಪ್ರಕಾರ, ಈ ರೋಗ ಹೇಗೆ ಬರುತ್ತದೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಾಗಿಲ್ಲ ಮತ್ತು ಇದನ್ನು ಸಂಪೂರ್ಣವಾಗಿಯೂ ಗುಣಪಡಿಸಲಾಗುವುದಿಲ್ಲ. ಆದರೆ, ರೋಗ ಉಲ್ಬಣವಾಗದಂತೆ ಮತ್ತು ಇತರರಿಗೆ ಹಬ್ಬದಂತೆ ಎಚ್ಚರ ವಹಿಸುವುದು ಖಂಡಿತ ಸಾಧ್ಯ. ರೋಗಿಗಳು ಮತ್ತು ಅವರ ಕುಟುಂಬದವರು ಇದನ್ನು ತಿಳಿದುಕೊಂಡರೆ ರೋಗವನ್ನು ಹತೋಟಿಯಲ್ಲಿಡಬಹುದು.

ಅವರು ಹೇಳುವಂತೆ, ಬೆಂಗಳೂರಿನಲ್ಲಿ 100 ಲಕ್ಷಕ್ಕೆ ಹತ್ತಿರದಲ್ಲಿದೆ ಎಂದು ತಿಳಿದುಕೊಂಡರೂ ಕನಿಷ್ಠಪಕ್ಷ 1 ಲಕ್ಷದಿಂದ 2 ಲಕ್ಷ ಜನರು ಸೋರಿಯಾಸಿಸ್ ರೋಗದಿಂದ ಬಳಲುತ್ತಿದ್ದಾರೆ. ಅನೇಕ ರೋಗಿಗಳಿಗೆ ಇದರ ಬಗ್ಗೆ ಹೆಚ್ಚಿನ ಅರಿವು ಇಲ್ಲ ಮತ್ತು ಚಿಕಿತ್ಸಾ ವಿಧಾನವೂ ತಿಳಿದಿಲ್ಲ. ಹಲವಾರು ಜನರು ತಮಗೆ ಈ ರೋಗ ಇದೆಯೆಂದು ತಿಳಿದಿದ್ದರೂ ವೈದ್ಯರನ್ನು ಸಂಪರ್ಕಿಸದೆ ಸ್ವಯಂಚಿಕಿತ್ಸೆಗೆ ಮುಂದಾಗುತ್ತಾರೆ.

ಈ ಕಾರಣದಿಂದಾಗಿ, ರೋಗಿಗಳು ಸುಮ್ಮನೆ ಮನೆಯಲ್ಲಿ ಕೂಡದೆ, ಈ ಶಿಬಿರಕ್ಕೆ ಬಂದು ತಜ್ಞ ವೈದ್ಯರಿಂದ ಹೆಚ್ಚಿನ ಅರಿವು ಪಡೆಯಬೇಕು ಮತ್ತು ಚಿಕಿತ್ಸಾ ವಿಧಾನವನ್ನು ತಿಳಿದುಕೊಳ್ಳಬೇಕು ಎಂದು ಬಿಡಿಎಸ್ ಆಗ್ರಹಿಸಿದೆ. ರೋಗಿಗಳು ಮಾತ್ರವಲ್ಲ ಅವರ ಪಾಲಕರು ಅಥವಾ ಕುಟುಂಬದವರು ಬಂದು ಇದರ ಪ್ರಯೋಜನ ಪಡೆಯಬೇಕು ಎಂದು ಅವರು ಹೇಳಿದ್ದಾರೆ.

ಶೇ.80ರಷ್ಟು ಜನರು ವಯಸ್ಸು 30 ಮೀರಿದ ನಂತರ ಈ ರೋಗಕ್ಕೆ ತುತ್ತಾಗುತ್ತಾರೆ. ಶೇ.10ರಷ್ಟು 30ಕ್ಕೆ ಮೊದಲು ಮತ್ತು ಶೇ.10ರಷ್ಟು 60 ವರ್ಷ ಮೀರಿದ ನಂತರ ತುತ್ತಾಗುತ್ತಿದ್ದಾರೆ. ಒಬ್ಬ ಪಾಲಕರಿಗೆ ಈ ರೋಗವಿದ್ದರೆ ಮಗುವಿಗೆ ಶೇ.16ರಷ್ಟು ಈ ರೋಗ ಬರುವ ಸಾಧ್ಯತೆ ಇರುತ್ತದೆ. ಇಬ್ಬರೂ ಪಾಲಕರಿಗೆ ಇದ್ದರೆ ಶೇ.50ರಷ್ಟು ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು.

ಶಿಬಿರ ನಡೆಯುವ ಸ್ಥಳ : ಸಿಟಿ ಇನ್ ಸ್ಟಿಟ್ಯೂಟ್ (ಮಕ್ಕಳ ಕೂಟದ ಎದಿರು), ಚಾಮರಾಜಪೇಟೆ, ಬೆಂಗಳೂರು.
ದಿನಾಂಕ : ಅಕ್ಟೋಬರ್ 29, ಮಂಗಳವಾರ (ವಿಶ್ವ ಚರ್ಮರೋಗ ದಿನ)
ಸಮಯ : ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+